- Home
- Entertainment
- Cine World
- 'ಹೇಳೋದ್ ಆಚಾರ, ಮಾಡೋದ್ ಅನಾಚಾರ..' ಹೆಣ್ಮಕ್ಕಳ ಎದುರು ಒಳ್ಳೆಯವನಾಗೋಕೆ ಹೋಗಿ ಪೇಚಿಗೆ ಸಿಲುಕಿದ ನಟ ವಿಶಾಲ್!
'ಹೇಳೋದ್ ಆಚಾರ, ಮಾಡೋದ್ ಅನಾಚಾರ..' ಹೆಣ್ಮಕ್ಕಳ ಎದುರು ಒಳ್ಳೆಯವನಾಗೋಕೆ ಹೋಗಿ ಪೇಚಿಗೆ ಸಿಲುಕಿದ ನಟ ವಿಶಾಲ್!
ಕಾಲಿವುಡ್‌ನಲ್ಲೂ ಪಾಲಿ ಹಿಂಸೆ ನಡೆಯುತ್ತಿದೆ ಎಂದು ಹೇಳಿರುವ ವಿಶಾಲ್, ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಶಾಲ್
ನಟ ವಿಶಾಲ್ ತಮ್ಮ 48 ನೇ ಹುಟ್ಟುಹಬ್ಬದಂದು ಚೆನ್ನೈನ ಕಿಲಿಪಾಕ್ಕಂನಲ್ಲಿರುವ ಹಿಂದುಳಿದವರ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ಬರ್ತ್ ಡೇ ಆಚರಿಸಿಕೊಂಡರು. ಆ ಬಳಿಕ ಮಾತನಾಡಿದ ನಟ ವಿಶಾಲ್, ಕೇರಳದ ಹೇಮಾ ಸಮಿತಿಯ ವರದಿ ಕುರಿತು ಪ್ರತಿಕ್ರಿಯಿಸಿದರು.
ನಟ ವಿಶಾಲ್ ಮುಕ್ತ ಮಾತು
ತಮಿಳು ಸಿನಿಮಾ ಲೋಕದಲ್ಲಿಯೂ ಈ ರೀತಿಯ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆಯೇ? ಕೇರಳದ ಮಾದರಿಯಲ್ಲಿಯೇ ಇಲ್ಲಿಯೂ ಸಮಿತಿ ರಚನೆ ಮಾಡಬೇಕಾ ಎಂಬ ಪ್ರಶ್ನೆಗಳಿಗೆ ನಟ ವಿಶಾಲ್ ಮುಕ್ತವಾಗಿ ಮಾತನಾಡಿದ್ದಾರೆ.
ನಟ ಸಿದ್ದಿಕಿ ಮಗಳೇ ಎಂದು ರೇಪ್ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್ ಖಾನ್ ಫೋನ್ನಲ್ಲೇ... ನಟಿಯ ಕರಾಳ ಅನುಭವ...
ನಟ ವಿಶಾಲ್
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟ ವಿಶಾಲ್, ನಟರ ಸಂಘದ ವತಿಯಿಂದ ತಮಿಳುನಾಡಿನಲ್ಲಿ 10 ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚನೆಯಾಗುತ್ತಿದೆ. ಇದರ ಬಗ್ಗೆ ಶೀಘ್ರದಲ್ಲೇ ಘೋಷಣೆ ಹೊರಬೀಳಲಿದೆ. ಚಿತ್ರದ ಅವಕಾಶಕ್ಕಾಗಿ ಹೊಂದಾಣಿಕೆಗೆ ಯಾರಾದರೂ ಕರೆದರೆ ನಟಿಯರು ಅವರನ್ನು ಚಪ್ಪಲಿಯಿಂದ ಹೊಡೆಯಬೇಕು. ದೀರ್ಘಕಾಲದಿಂದಲೂ ತಮಿಳು ಸಿನಿಮಾದಲ್ಲೂ ಇಂತಹ ಆರೋಪಗಳು ಕೇಳಿ ಬರುತ್ತಲೇ ಇವೆ ಎಂದು ಹೇಳಿದರು.
ಹೇಮಾ ರಿಪೋರ್ಟ್ ಬಿರುಗಾಳಿಗೆ ತತ್ತರಿಸಿದ ಮಲಯಾಳಂ ಸಿನಿರಂಗ; ಕತ್ತಲ ಜಗತ್ತು ಬೆತ್ತಲಾಯ್ತಾ?
ಶ್ರೀರೆಡ್ಡಿ ಬಗ್ಗೆ ವಿಶಾಲ್
ಕೆಲವರು ಉದ್ದೇಶಪೂರ್ವಕವಾಗಿ ಕಚೇರಿಯನ್ನು ತೆರೆದು ಫೋಟೋಶೂಟ್ ಎಂದು ಹೇಳಿ ಮಹಿಳೆಯರನ್ನು ಬಳಸಿಕೊಳ್ಳುತ್ತಾರೆ. ಮಹಿಳೆಯರೇ ಎಚ್ಚರಿಕೆಯಿಂದ ಇರಬೇಕು. ಒಬ್ಬ ವ್ಯಕ್ತಿ ತಪ್ಪು ದೃಷ್ಟಿಯಿಂದ ಸಂಪರ್ಕಿಸಿದರೆ ಅವನನ್ನು ಚಪ್ಪಲಿಯಿಂದ ಹೊಡೆಯುವ ಧೈರ್ಯ ಮಹಿಳೆಯರಿಗೆ ಬರಬೇಕು. ಯಾರಾದರೂ ನಮ್ಮ ಬಳಿ ದೂರು ನೀಡಿದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶಾಲ್ ಹೇಳಿದರು.
ಇದೇ ವೇಳೆ ನಿಮ್ಮ ಮೇಲೆ ಶ್ರೀರೆಡ್ಡಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ವಿಶಾಲ್, ಶ್ರೀರೆಡ್ಡಿ ಯಾರೆಂದು ನನಗೆ ತಿಳಿದಿಲ್ಲ, ಅವರ ಪ್ರಚಾರಕ್ಕಾಗಿ ಮಾಡಿದ ಸಾಹಸಗಳು ಮಾತ್ರ ನನಗೆ ತಿಳಿದಿದೆ ಎಂದು ಹೇಳಿದರು
ಶ್ರೀರೆಡ್ಡಿಯನ್ನು ಲೈಂಗಿಕವಾಗಿ ಬಳಸಿಕೊಂಡ ಬಾಹುಬಲಿ ಸೂಪರ್’ಸ್ಟಾರ್ ಸಹೋದರ?
ಐದು ವರ್ಷದ ಹಿಂದೆ ನಟಿ ಶ್ರೀರೆಡ್ಡಿ ಫೇಸ್‌ಬುಕ್ ಪೋಸ್ಟ್ ಮೂಲಕ ಗಂಭೀರ ಆರೋಪವನ್ನು ಮಾಡಿದ್ದರು. ಸಿನಿಮಾ ಅವಕಾಶಗಳನ್ನು ಪಡೆಯಲು ಹಲವರು ವಿಶಾಲ್ ಮುಂದೆ ಶರಣಾಗಬೇಕಾಗುತ್ತದೆ. ನಟ ವಿಶಾಲ್ ಒಬ್ಬ ಮೋಸಗಾರ. ನಿಮಗೆ ಧೈರ್ಯವಿದ್ದರೆ ಯಾವ ಮಹಿಳೆಯೂ ದೌರ್ಜನ್ಯಕ್ಕೆ ಒಳಗಾಗಿಲ್ಲ ಎಂದು ಸಾಬೀತು ಮಾಡಲಿ ಎಂದು ಶ್ರೀರೆಡ್ಡಿ ಸವಾಲು ಹಾಕಿದ್ದರು.
ವಿಶಾಲ್ ಹುಟ್ಟುಹಬ್ಬ
ನಿರ್ಮಾಪಕರ ಸಂಘ ಮುಷ್ಕರ ನಡೆಸಲಿದೆ ಎಂಬ ಪ್ರಶ್ನೆಗೆ, ಏಕೆ ಮುಷ್ಕರ ನಡೆಸಬೇಕು, ಚಿತ್ರೀಕರಣ ನಿಲ್ಲಿಸಿದರೆ ಇಲ್ಲಿ ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ನೀವು ಮುಷ್ಕರ ಮಾಡುವುದರಿಂದ ಏನು ಪ್ರಗತಿ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿರ್ಮಾಪಕರ ಸಂಘ ನಡೆಸಲಿರುವ ಈ ಮುಷ್ಕರಕ್ಕೆ ನಟರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಗಮನಾರ್ಹ.
ಕತ್ತಲೆ ರೂಮಿಗೆ ಕರೆದು ಬಳೆಗಳ ಜೊತೆ ಆಟ ಆಡಿದ್ದ ನಿರ್ದೇಶಕ: ಮಲಯಾಳಂ ಚಿತ್ರರಂಗದ 'ಕಾಮಕಾಂಡ' ಮತ್ತಷ್ಟು ಬಯಲು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.