ರಾಣಾ ದಗ್ಗುಬಾಟಿ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀರೆಡ್ಡಿ
ಹೈದರಾಬಾದ್: ಮೂರು ದಿನಗಳ ಹಿಂದಷ್ಟೆ ವಾಣಿಜ್ಯ ಮಂಡಳಿ ಮುಂದೆ ಅರೆಬೆತ್ತಲೆಯಾಗಿ ದೇಶಾದ್ಯಂತ ಸುದ್ದಿ ಮಾಡಿದ್ದ ತೆಲುಗು ನಟಿ ಶ್ರೀರೆಡ್ಡಿ, ತೆಲುಗಿನ ಖ್ಯಾತ ನಿರ್ಮಾಪಕನ ಪುತ್ರನ ವಿರುದ್ಧ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಆರೋಪಿಸಿದ್ದಾರೆ.
ತೆಲಗು ಚಿತ್ರ ನಿರ್ದೇಶಕ ಸುರೇಶ್ ಬಾಬು ಪುತ್ರ ಹಾಗೂ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್, ಸರ್ಕಾರಿ ಸ್ಟುಡಿಯೊವೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆಂದು ಶ್ರೀರೆಡ್ಡಿ ಆರೋಪಿಸಿದ್ದಾರೆ.
ತಾನು ಆತನ ಜೊತೆ ಸಿನಿಮಾ ಸಂಬಂಧವಾಗಿ ಮಾತನಾಡಲು ತೆರಳಿದ್ದೆ. ಆದರೆ ನನ್ನನ್ನು ಕರೆದುಕೊಂಡು ಹೋಗಿದ್ದು ಕಾಮಕ್ರೀಡೆಗೆ ಬಳಸಿಕೊಳ್ಳಲು ಎಂದು. ಸ್ಟುಡಿಯೋಗಳು ಇತ್ತೀಚಿಗೆ ವೇಶ್ಯಾಗೃಹಗಳಾಗಿ ಬದಲಾಗುತ್ತಿವೆ. ಉತ್ತರ ಭಾರತದ ನಟಿಯರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಕಾರಣ ಅವರು ಸೆಕ್ಸ್'ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕಳೆದ 10-15 ವರ್ಷಗಳಿಂದ ಅವರೆ ನಾಯಕಿರಾಗುತ್ತಿರುವುದಕ್ಕೆ ನಿರ್ಮಾಪಕರೊಂದಿಗೆ ಹೊಂದಾಣಿಕೆಯೆ ಪ್ರಮುಖ ಕಾರಣವಾಗಿದೆ' ಎಂದು ಅವರು ಆರೋಪಿಸಿದ್ದಾರೆ.
