MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಿಜಯ್ ದೇವರಕೊಂಡ-ರಶ್ಮಿಕಾ ನಡುವೆ ಎಲ್ಲವೂ ಸರಿಯಿಲ್ವಾ? Instagram ಆನ್‌ಫಾಲೋ ಮಾಡಿದ್ದೇಕೆ? ದಂಪತಿ ಬಗ್ಗೆ ಹರಿದಾಡ್ತಿದೆ ಶಾಕಿಂಗ್ ರೂಮರ್!

ವಿಜಯ್ ದೇವರಕೊಂಡ-ರಶ್ಮಿಕಾ ನಡುವೆ ಎಲ್ಲವೂ ಸರಿಯಿಲ್ವಾ? Instagram ಆನ್‌ಫಾಲೋ ಮಾಡಿದ್ದೇಕೆ? ದಂಪತಿ ಬಗ್ಗೆ ಹರಿದಾಡ್ತಿದೆ ಶಾಕಿಂಗ್ ರೂಮರ್!

ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯ್ ತನ್ನ ಇನ್‌ಸ್ಟಾಗ್ರಾಂನಿಂದ ಪತ್ನಿ ರಶ್ಮಿಕಾ ಆನ್‌ಫಾಲೋ ಮಾಡಿರುವುದು ಸೋಶಃಇಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರಾ? ಫ್ಯಾನ್ಸ್ ಅನುಮಾನ ಸರಿಯಾ?

2 Min read
Author : Ravi Janekal
Published : Oct 25 2026, 08:33 AM IST
Share this Photo Gallery
  • FB
  • TW
  • Linkdin
  • Whatsapp
18
ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಮ್ ಆನ್‌ಫಾಲೋ! ಏನು ಸಂದೇಶ?
Image Credit : PR Team

ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಮ್ ಆನ್‌ಫಾಲೋ! ಏನು ಸಂದೇಶ?

ಸಿನಿಮಾ ನಟ-ನಟಿಯರು ವಿಚ್ಛೇದನಕ್ಕೆ ಮುನ್ನ ಹಲವು ಸಿದ್ಧತೆಗಳನ್ನ ಮಾಡಿಕೊಳ್ತಾರೆ. ಅದರಲ್ಲೂ ಮೊದಲಿಗೆ ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲ ಸೋಷಿಯಲ್‌ ಮೀಡಿಯಾಗಳಲ್ಲಿಂದ ಪರಸ್ಪರ ಅಥವಾ ಇಬ್ಬರಲ್ಲಿ ಒಬ್ಬರು ಆನ್‌ಫಾಲೋ(Unfollow) ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ಈ ಹಿಂದೆ ಹಲವು ಸೆಲೆಬ್ರಿಟಿಗಳ ಸಂಬಂಧ ಮುರಿದುಬಿದ್ದಾಗ ಈ ರೀತಿ ಆನ್‌ಫಾಲೋ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಯಾವಾಗಲೂ ಯಾರು ಯಾರನ್ನ ಆನ್‌ಫಾಲೋ ಮಾಡ್ಕೊಳ್ತಾರೆ ಎಂಬುದರ ಮೇಲೆ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಹುಟ್ಟುಹಾಕುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ರಶ್ಮಿಕಾ ಇನ್‌ಸ್ಟಾಗ್ರಾಮ್ ಆನ್‌ಫಾಲೋ, ಫ್ಯಾನ್ಸ್ ಗೆ ಅನುಮಾನ!
Image Credit : Vijay Devarakonda/Instagram

ರಶ್ಮಿಕಾ ಇನ್‌ಸ್ಟಾಗ್ರಾಮ್ ಆನ್‌ಫಾಲೋ, ಫ್ಯಾನ್ಸ್ ಗೆ ಅನುಮಾನ!

ಹೌದು ಇದೀಗ ಅಂತಹದ್ದೇ ಘಟನೆ ನಡೆದಿರೋದು. ಇಲ್ಲಿ ಕಳೆದ ವರ್ಷವಷ್ಟೇ ಮದುವೆಯಾಗಿರೋ, ಮದುವೆಗೆ ಹಚ್ಚಿದ ಮೆಹಂದಿ ಮಾಸದಿರೋ ಈ ನವಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ಗುಲ್ಲೆಬ್ಬಿಸಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣವಾದರೂ ಏನು ಅಂತೀರಾ? ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣ ಅವರನ್ನ ಆನ್‌ಫಾಲೋ ಮಾಡಿದ್ದಾರೆಂಬುದು!

Related Articles

Related image1
ದಿನಕ್ಕೆ ನೂರು ಬಾರಿ ಐ ಲವ್ ಯೂ ಹೇಳೋದು ಯಾರು? ಯಾವ ಕಾರಣಕ್ಕೆ ನಡೆಯುತ್ತೆ Rashmika – Vijay ಮಧ್ಯೆ ಜಗಳ?
Related image2
ವಿಜಯ್‌ ದೇವರಕೊಂಡ ಬಳಿ ರಶ್ಮಿಕಾ 100 ಬಾರಿ ಕೇಳಿದ್ದೇನು? ಕಾಫಿ ವಿತ್ ಕರಣ್ ಶೋ ಪ್ರೋಮೋದಲ್ಲಿ ಮದುವೆ ಸೀಕ್ರೆಟ್ ಲೀಕ್!
38
ವಿಜಯ್ ದೇವರಕೊಂಡ Instagram ರಶ್ಮಿಕಾ ಮಂದಣ್ಣ ಆನ್‌ಫಾಲೋ ಮಾಡಿದ್ದೇಕೆ?
Image Credit : Asianet News

ವಿಜಯ್ ದೇವರಕೊಂಡ Instagram ರಶ್ಮಿಕಾ ಮಂದಣ್ಣ ಆನ್‌ಫಾಲೋ ಮಾಡಿದ್ದೇಕೆ?

ವಿಜಯ್ ದೇವರಕೊಂಡ(Vijay Devarakonda) ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಎಷ್ಟೆಂದರೆ ಇದರಲ್ಲಿ ಅವರ ಪತ್ನಿ ರಶ್ಮಿಕಾ ಮಂದಣ್ಣ ಅವರ ಖಾತೆಯನ್ನು ಕೂಡ ಆನ್‌ಫಾಲೋ ಮಾಡಿರುವುದು, ವಿಜಯ ದೇವರಕೊಂಡ ಅವರ ಇನ್ಸ್‌ಟಾಗ್ರಾಂ ಫಾಲೋವರ್ ಸಂಖ್ಯೆ ಜೀರೋ ಇರುವುದು ಫ್ಯಾನ್ಸ್‌ ತಲೆಯಲ್ಲಿ ಅನುಮಾನದ ಹುಳು ಹೊಕ್ಕಂತಾಗಿದೆ.

48
ಸದ್ಯದಲ್ಲೇ ವಿಜಯ್ ದೇವರಕೊಂಡ ರಶ್ಮಿಕಾ ವಿಚ್ಚೇದನ?
Image Credit : Asianet News

ಸದ್ಯದಲ್ಲೇ ವಿಜಯ್ ದೇವರಕೊಂಡ ರಶ್ಮಿಕಾ ವಿಚ್ಚೇದನ?

ಆನ್‌ಫಾಲೋ ಮಾಡಲಾಗಿದೆ ಎಂಬ ಒಂದೇ ಕಾರಣ ಇಟ್ಕೊಂಡು ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಶುರು ಮಾಡಿದ್ದಾರೆ! ಕೆಲವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 'ಮತ್ತೊಂದು ವಿಚ್ಛೇದನಕ್ಕೆ ರೆಡಿ ಆಗ್ತಿದೆ..' ಎಂದೆಲ್ಲ ಬರೆದಿದ್ದಾರೆ. ಅದರರ್ಥ ವಿಜಯ್ ರಶ್ಮಿಕಾ ನಡುವಿನ ಸಂಬಂಧ ಮುರಿದಿದ್ದು ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಧಾಟಿಯಲ್ಲಿದೆ.

58
ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಆನ್‌ಫಾಲೋ ಮಾಡಿರೋದೇಕೆ?
Image Credit : Asianet News

ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಆನ್‌ಫಾಲೋ ಮಾಡಿರೋದೇಕೆ?

ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣರನ್ನು ಸೇರಿಸಿ ಯಾರನ್ನೂ ಫಾಲೋ ಮಾಡುತ್ತಿಲ್ಲ, ಇದೊಂದೇ ಕಾರಣ ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಚರ್ಚೆ ನಡೆಸಲಾಗುತ್ತಿದೆ. ಯಾರನ್ನೂ ಫಾಲೋ ಮಾಡದಿದ್ರೂ ಪತ್ನಿಯನ್ನಾದ್ರೂ ಫಾಲೋ ಮಾಡಬೇಕಿತ್ತು. ಆದರೆ ಪತ್ನಿಯನ್ನ ಕೂಡ ವಿಜಯ್ ದೇವರಕೊಂಡ ಆನ್‌ಫಾಲೋ ಮಾಡಿರೋದು ಏಕೆ? ಎಂದು ಫ್ಯಾನ್ಸ್ ಊಹಿಸಲು ಶುರು ಮಾಡಿದ್ದಾರೆ.

ಅಲ್ಲದೆ ವಿಜಯ್ ದೇವರಕೊಂಡ ಬಳಿಕ ರಶ್ಮಿಕಾ ಕೂಡ ಅನ್‌ಫಾಲೋ ಮಾಡಿದ್ದಾರೆ ಎಂದೂ ಅಭಿಮಾನಿಯೊಬ್ಬ ಬರೆದುಕೊಂಡಿದ್ದಾನೆ. 'ಆಘಾತಕಾರಿ! ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಆನ್‌ಫಾಲೋ ಮಾಡಿಕೊಂಡಿದ್ದಾರೆ, ಇಬ್ಬರ ನಡುವೆ ಏನೋ ಸಮಸ್ಯೆಗಳಿರಬಹುದು ಎಂಬ ವದಂತಿಗಳು ಕೇಳಿಬರುತ್ತಿವೆ' ಅವನ ಪೋಸ್ಟ್ ಕೂಡ ಆಘಾತಕಾರಿಯಾಗಿದೆ.

68
ಪರಸ್ಪರ ಆನ್‌ಫಾಲೋ ಮಾಡಿದ್ರೆ ಸಂಬಂಧ ಮುರಿದಿದೆ ಅಂತರ್ಥನಾ?
Image Credit : Asianet News

ಪರಸ್ಪರ ಆನ್‌ಫಾಲೋ ಮಾಡಿದ್ರೆ ಸಂಬಂಧ ಮುರಿದಿದೆ ಅಂತರ್ಥನಾ?

ಆದರೆ ಅವನ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಫ್ಯಾನ್ಸ್, 'ಅವರು ಈಗ ಆನ್‌ಫಾಲೋ ಮಾಡಿರೋದಲ್ಲ, ಪ್ರಾರಂಭದಿಂದಲೂ ಪರಸ್ಪರ ಫಾಲೋ ಮಾಡುತ್ತಿರಲಿಲ್ಲ, ಈಗಲೂ ಅಷ್ಟೇ, ಪರಸ್ಪರ ಫಾಲೋ ಮಾಡ್ತಿಲ್ಲ ಅಂದ ಮಾತ್ರಕ್ಕೆ ಅವರ ಸಂಬಂಧದಲ್ಲಿ ಸಮಸ್ಯೆ ಇದೆ ಅಂತಾನಾ? ಸೋಷಿಯಲ್ ಮೀಡಿಯಾದಲ್ಲಿ ಆನ್‌ಫಾಲೋ ಮಾಡುವುದರ ಮೇಲೆ ಸಂಬಂಧಗಳನ್ನ ನಿರ್ಧರಿಸಬೇಕಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಪರಿಶೀಲಿಸಿದಾಗ ಕಂಡಿದ್ದೇನೆಂದರೆ. ವಿಜಯ್ ರಶ್ಮಿಕಾ ಮಂದಣ್ಣರ ಖಾತೆಯಷ್ಟೇ ಅಲ್ಲ, ಯಾರನ್ನೂ ಫಾಲೋ ಮಾಡುತ್ತಿಲ್ಲ . ಆದರೆ ರಶ್ಮಿಕಾ ಮಾತ್ರ ತಮ್ಮ ಪತಿ ವಿಜಯ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

78
ನನ್ನ ಹೊಟ್ಟೆ ಸವರುತ್ತಾರೆ.. ವಿಜಯ್ ಬಗ್ಗೆ ರಶ್ಮಿಕಾ ಹೇಳಿದ್ದೇನು?
Image Credit : Asianet News

ನನ್ನ ಹೊಟ್ಟೆ ಸವರುತ್ತಾರೆ.. ವಿಜಯ್ ಬಗ್ಗೆ ರಶ್ಮಿಕಾ ಹೇಳಿದ್ದೇನು?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಕಾಫಿ ವಿತ್ ಕರಣ್ 9 ಕಾರ್ಯಕ್ರಮದಲ್ಲಿ ರಶ್ಮಿಕಾ ತನ್ನನ್ನು ಮದುವೆಯಾಗುವಂತೆ ಸುಮಾರು 100 ಬಾರಿ ಕೇಳಿಕೊಂಡಿದ್ದರು ಎಂದು ವಿಜಯ್ ಹೇಳಿಕೊಂಡಿದ್ದರು. ಈ ಹೇಳಿಕೆಯ ಬಳಿಕ ನಟನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟ್ರೋಲ್ ಮಾಡಿದ್ದರು. ಅವರ ಸಂಬಂಧಗಳನ್ನ ಕೆಲವರು ರೆಡ್‌ಫ್ಲ್ಯಾಗ್ ಎಂದಿದ್ದರು.

88
ಕಾಫಿ ವಿತ್ ಕರಣ್ 9: ಆ ಹೇಳಿಕೆಯಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ ವಿಜಯ್-ರಶ್ಮಿಕಾ
Image Credit : Asianet News

ಕಾಫಿ ವಿತ್ ಕರಣ್ 9: ಆ ಹೇಳಿಕೆಯಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ ವಿಜಯ್-ರಶ್ಮಿಕಾ

ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ 9 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿಕಾ, ವಿಜಯ್ ಅವರನ್ನು ಮದುವೆಯಾಗುವಂತೆ ತಾನು ಒಂದು ವರ್ಷದಿಂದ ಪದೇಪದೆ ಕೇಳಿಕೊಳ್ಳುತ್ತಿದ್ದ ಬಗ್ಗೆ ಮಾತನಾಡಿದ್ದರು. 'ನಾವು ಮದುವೆಯಾಗೋಣ' ಎಂದು ವಿಜಯ್‌ಗೆ ಹೇಳುತ್ತಿದ್ದುದನ್ನು ನೆನಪಿಸಿಕೊಂಡ ರಶ್ಮಿಕಾ ತಮ್ಮ ಸಂಬಂಧದಲ್ಲಿ ಮದುವೆಯ ವಿಚಾರವಾಗಿ ನಾನೇ ಮೊದಲು ಪ್ರಸ್ತಾಪಿಸಿದ್ದು ಎಂದು ಹೇಳಿಕೊಂಡಿದ್ದರು.

ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ವಿಜಯ್, ಈ ವಿಚಾರಕ್ಕಾಗಿ ಜನರು ತಮ್ಮನ್ನು ಟ್ರೋಲ್ ಮಾಡುತ್ತಾರೆ ಎಂಬುದು ತನಗೆ ಗೊತ್ತಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು ಇಂದಿಗೂ ಆ ಬಗ್ಗೆ ಚರ್ಚೆ, ಟ್ರೋಲ್ ನಡೆಯುತ್ತಲೇ ಇದೆ. ಈ ನಡುವೆ ಇದೀಗ ಆನ್‌ಫಾಲೋ ವಿಚಾರ ಮುನ್ನಲೆ ತಂದು ವಿಜಯ್-ರಶ್ಮಿಕಾ ಜೋಡಿ ಸದ್ಯದಲ್ಲೇ ವಿಚ್ಛೇದನ ನೀಡಲಿದ್ದಾರೆಂಬ ಗುಲ್ಲೆಬ್ಬಿಸಿರೋ ಈ ಹುಡುಗರಿಗೆ ಏನು ಹೇಳೋಣ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ
ಮನರಂಜನಾ ಸುದ್ದಿ
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ಹೀರೋಯಿನ್ ಅವಕಾಶಕ್ಕಾಗಿ ಕಾಯುತ್ತಿರುವ ಬಿಗ್‌ ಬಾಸ್ ದಿವಿ: ಸೀರೆ ಲುಕ್ ಮಾತ್ರ ಸಖತ್ ವೈರಲ್!
Recommended image2
ಕೋಟಿ ಆಸ್ತಿಯ ಒಡತಿ ಲಕ್ಸುರಿ ಕಾರು ಬಿಟ್ಟು ಆಟೋದಲ್ಲಿ ಓಡಾಟ: ಈ ಸ್ಟಾರ್ ನಟಿ ಯಾರು ಗೊತ್ತಾ?
Recommended image3
ಮೈಸೂರಿನವರಾದರೂ ನಟಿ ಅಮೃತಾ ಅಯ್ಯಂಗಾರ್‌ಗೆ ದಸರಾಗೆ ಆಹ್ವಾನಿಸಲಿಲ್ಲ ಏಕೆ? ಬೇಸರ ವ್ಯಕ್ತಪಡಿಸಿದ ನಟಿ
Related Stories
Recommended image1
ದಿನಕ್ಕೆ ನೂರು ಬಾರಿ ಐ ಲವ್ ಯೂ ಹೇಳೋದು ಯಾರು? ಯಾವ ಕಾರಣಕ್ಕೆ ನಡೆಯುತ್ತೆ Rashmika – Vijay ಮಧ್ಯೆ ಜಗಳ?
Recommended image2
ವಿಜಯ್‌ ದೇವರಕೊಂಡ ಬಳಿ ರಶ್ಮಿಕಾ 100 ಬಾರಿ ಕೇಳಿದ್ದೇನು? ಕಾಫಿ ವಿತ್ ಕರಣ್ ಶೋ ಪ್ರೋಮೋದಲ್ಲಿ ಮದುವೆ ಸೀಕ್ರೆಟ್ ಲೀಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved