ಮಾಲ್ಡೀವ್ಸ್‌ನಿಂದ ವಾಪಾಸ್ ಆದ ರಶ್ಮಿಕಾ-ವಿಜಯ್ ದೇವರಕೊಂಡ; ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ
ನಟಿ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ರಶ್ಮಿಕಾ ಏರ್ಪೋರ್ಟ್‌ಗೆ ಎಂಟ್ರಿ ಕೊಟ್ಟ ಕೆಲವೇ ಕ್ಷಣದಲ್ಲಿ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ರಶ್ಮಿಕಾ ಏರ್ಪೋರ್ಟ್‌ಗೆ ಎಂಟ್ರಿ ಕೊಟ್ಟ ಕೆಲವೇ ಕ್ಷಣದಲ್ಲಿ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗುವಾಗಲು ಇಬ್ಬರೂ ಕೆಲವೇ ಕ್ಷಣಗಳ ಅಂತರದಲ್ಲಿ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ವಾಪಾಸ್ ಆದಾಗಲು ಸಹ ಕಲವೇ ಕ್ಷಣಗಳ ಅಂತರದಲ್ಲಿ ಏರ್ಪೋರ್ಟ್ ನಲ್ಲಿ ಸೆರೆಯಾಗಿದ್ದಾರೆ.
ಈ ಸೆನ್ಸೇಷನ್ ಜೋಡಿ ಎಲ್ಲಿಯೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿಲ್ಲ. ಆದರೆ ಏರ್ಪೋರ್ಟ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಬ್ಬರ ಮಾಲ್ಡೀವ್ಸ್ ಗುಟ್ಟು ರಟ್ಟಾಗಿದೆ.
ವಿಜಯ್ ದೇವರಕೊಂಡ ಬ್ಲ್ಯಾಕ್ ಶರ್ಟ್ ಧರಿಸಿದ್ದರು. ರಶ್ಮಿಕಾ ಬಳಿ ಬಣ್ಣದ ಬಟ್ಟೆ ಧರಿಸಿದ್ದರು. ಇಬ್ಬರೂ ಏರ್ಪೋರ್ಟ್‌ನಿಂದ ಹೊರಬರುವಾಗ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಬಳಿಕ ಇ್ಬಬರೂ ಪ್ರತ್ಯೇಕವಾಗಿ ಕಾರು ಹತ್ತಿ ಹೊರಟರು.
ಅಂದಹಾಗೆ ರಶ್ಮಿಕಾ ಮಾಲ್ಡೀವ್ಸ್‌ನಿಂದ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಶ್ಮಿಕಾ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ವಿಜಯ್ ದೇವರಕೊಂಡ ಯಾವುದೇ ಫೋಟೋ ಶೇರ್ ಮಾಡಿಲ್ಲ. ರಶ್ಮಿಕಾ ಫೋಟೋ ಶೇರ್ ಮಾಡಿದ ಬಳಿಕ ನೆಟ್ಟಿಗರು ಇದು ಪಕ್ಕಾ ವಿಜಯ್ ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಎಂದು ಕಾಮೆಂಟ್ ಮಾಡುತ್ತಿದ್ದರು.
ರಶ್ಮಿಕಾ ಗುಡ್‌ಬೈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮಾಲ್ಡೀವ್ಸ್ ಫ್ಲೈಟ್ ಹತ್ತಿದ್ದರು. ಶ್ಮಿಕಾ ಮೊದಲ ಹಿಂದಿ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಸಲ್ಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ ಮಾಲ್ಡೀವ್ಸ್ ಪ್ರವಾಸ ವಸ್ತ್ ಮಜಾ ಮಾಡಿದರು.
ರಶ್ಮಿಕಾ ಬಳಿ ಕೈ ತುಂಬಾ ಸಿನಿಮಾಗಳಿವೆ. ಹಿಂದಿಯಲ್ಲಿ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಮುದಿಸಿದ್ದು ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ರಣಬೀರ್ ಕಪೂರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಪುಷ್ಪ-2 ಹಾಗೂ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.