ಮೊದಲು ಕೇವಲ ಸೈಡ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೌತ್ ಈ ಸ್ಟಾರ್ ನಟ
ದಕ್ಷಿಣ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ( Vijay Devarakonda) ಇಂದು ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. 9 ಮೇ 1989 ರಂದು ಹೈದರಾಬಾದ್‌ನಲ್ಲಿ ಜನಿಸಿದ ವಿಜಯ್ ಅವರು ರವಿ ಬಾಬು ಅವರ 'ನುವ್ವಿಲಾ' ಚಿತ್ರದ ಪೋಷಕ ನಟನಾಗಿ ನಟ 2011 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಇಂದು ಸೂಪರ್‌ಸ್ಟಾರ್ ಆಗಿರುವ ವಿಜಯ್ ದೇವರಕೊಂಡ ಅವರಿಗೆ ವೃತ್ತಿಜೀವನದ ಆರಂಭದಲ್ಲಿ ಪೋಷಕ ನಟನ ಪಾತ್ರವನ್ನು ನೀಡಲಾಯಿತು.
ವಿಜಯ್ ದೇವರಕೊಂಡ ಅವರನ್ನು 'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಪ್ರಮುಖ ನಟನಾಗಿ ಗುರುತಿಸಲಾಯಿತು. ಇದರ ನಂತರ, ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ.
ಡಿಯರ್ ಕಾಮ್ರೇಡ್, ಗೀತಾ ಗೋವಿಂದಂ ಮತ್ತು ಅರ್ಜುನ್ ರೆಡ್ಡಿ ಮುಂತಾದ ಹಿಟ್ ಚಿತ್ರಗಳಲ್ಲಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ದೇವರಕೊಂಡ ಅವರು.
ವಿಜಯ್ ದೇವರಕೊಂಡ ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಚಲನಚಿತ್ರೋದ್ಯಮದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರ ಲಿಗರ್ ಸಿನಿಮಾ ಫ್ಲಾಪ್ ಆಗಿದ್ದರು ಅವರು ಪ್ರೇಕ್ಷಕರ ಪ್ರೀತಿಯನ್ನು ಪಡೆಯುತ್ತಿದ್ದಾರೆ.
ವಿಜಯ್ ದೇವರಕೊಂಡ ಅವರ ಕ್ಯೂಟ್ ಸ್ಮೈಲ್ ಮತ್ತು ಹ್ಯಾಂಡಸಮ್ ಲುಕ್ ಸಖತ್ ಫೇಮಸ್. ಅದರಲ್ಲೂ ಈನಟ ಮಹಿಳಾ ಅಭಿಮಾನಿಗಳ ಹಾರ್ಟ್‌ಥ್ರೋಬ್ ಆಗಿದ್ದಾರೆ.
ಇವರ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ನಟ ಈಗ ಚಿತ್ರಕ್ಕಾಗಿ 10 ರಿಂದ 11 ಕೋಟಿ ರೂ ಚಾರ್ಜ್ ಮಾಡುತ್ತಾರೆ ಮತ್ತು ವಿಜಯ್ ಅವರ ನಿವ್ವಳ ಮೌಲ್ಯ ಸುಮಾರು 30 ಕೋಟಿ ರೂ ಎಂದು ವರದಿಯಾಗಿದೆ. ಅವರು ಅನೇಕ ವ್ಯವಹಾರಗಳು ಮತ್ತು ಜಾಹೀರಾತುಗಳ ಮೂಲಕ ಸಹ ಹಣ ಗಳಿಸುತ್ತಾರೆ.