ವಿದ್ಯಾ ಬಾಲನ್-ಶಾಹಿದ್ ಕಪೂರ್ ಲಿಂಕ್-ಅಪ್: ಈ ಬಗ್ಗೆ ನಟಿ ಹೇಳಿದ್ದೇನು?
ಬಾಲಿವುಡ್‌ನ ಮೋಸ್ಟ್ ಪ್ರತಿಭಾನ್ವಿತ ನಟಿಯರ ಸಾಲಿಗೆ ವಿದ್ಯಾಬಾಲನ್ ಸೇರುತ್ತಾರೆ. ತಮ್ಮ ಅದ್ಭುತ ಅಭಿನಯದ ಮೂಲಕ ಜನರನ್ನು ಸೆಳೆಯುವಲ್ಲಿ ವಿದ್ಯಾ ಸದಾ ಯಶಸ್ವಿಯಾಗಿದ್ದಾರೆ. ಬಹಳ ಹಿಂದೆ ಇವರ ಹೆಸರು ನಟ ಶಾಹಿದ್ ಕಪೂರ್ ಜೊತೆ ಕೇಳಿಬಂದಿತ್ತು. ಈ ಲಿಂಕ್‌ಅಪ್ ಬಗ್ಗೆ ಕಾಫಿ ವಿತ್ ಕರಣ್ ಚಾಟ್ ಶೋನಲ್ಲಿ, ವಿದ್ಯಾ ಬಾಲನ್ ಮಾತಾನಾಡಿದ್ದರು. ಏನು ಹೇಳಿದ್ದಾರೆ ನಟಿ?
ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ಶಾಹಿದ್ ಕಪೂರ್ ಮತ್ತು ಕರೀನಾ ಕಪೂರ್ ಬ್ರೇಕಪ್ ನಂತರ, ಶಾಹಿದ್ ವಿದ್ಯಾ ಬಾಲನ್‌ಗೆ ಹತ್ತಿರವಾಗಿದ್ದ ಸುದ್ದಿಗಳು ಹರಿದಾಡಿದ್ದವು.
ಶಾಹಿದ್ ಮತ್ತು ವಿದ್ಯಾ ಜೊತೆಯಾಗಿ ನಟಿಸಿದ ಕಿಸ್ಮತ್ ಕನೆಕ್ಷನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಈ ರೂಮರ್ ಬಿಟೌನ್‌ನ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು.
ಇದರ ಬಗ್ಗೆ ಕರಣ್ ಜೋಹರ್ ಚಾಟ್ ಶೋನಲ್ಲಿ ಬಹಿರಂಗಪಡಿಸಿದರು ಕಹಾನಿ ಫೇಮ್‌ನ ನಟಿ ವಿದ್ಯಾ .
ಕರಣ್ ಅವರ ಕಾಫಿ ವಿಥ್ ಕರಣ್ ಕಾರ್ಯಕ್ರಮದ ಒಂದು ಎಪಿಸೋಡ್‌ನಲ್ಲಿ, ವಿದ್ಯಾ ಮತ್ತು ರಾಣಿ ಮುಖರ್ಜಿ ಒಟ್ಟಿಗೆ ಕಾಣಿಸಿಕೊಂಡರು.
ಒನ್ ಕಿಲ್ಡ್ ಜೆಸ್ಸಿಕಾ ಸಿನಿಮಾದ ಪ್ರಮೋಷನ್‌ಗಾಗಿ ಬಂದಿದ್ದರು. ಇಬ್ಬರೂ ತಮ್ಮ ಸಾಲಿಡ್ ಕೆಮಿಸ್ಟ್ರಿಯ ಬಗ್ಗೆ ಮಾತನಾಡಿದರು ಮತ್ತು ಶೂಟಿಂಗ್ ಸಮಯದಲ್ಲಿನ ಇಗೋ ಮತ್ತು ಜಗಳದ ಬಗ್ಗೆ ಇದ್ದ ರೂಮರ್‌ಗಳಿಗೂ ತೆರೆ ಎಳೆದರು.
ಈ ಸಮಯದಲ್ಲಿ, ವಿದ್ಯಾ ಜಾನ್ ಅಬ್ರಹಾಂ ಮತ್ತು ಶಾಹಿದ್ ಅವರೊಂದಿಗೆ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದರು.
'ಹಾಗಾದರೆ ಈ ಸಂದರ್ಭದಲ್ಲಿ ಹೊಗೆ ಅಥವಾ ಬೆಂಕಿ ಇರಲಿಲ್ಲವೇ?' ಶಾಹಿದ್ ಜೊತೆ ಸಂಬಂಧದ ಬಗ್ಗೆ ಕರಣ್ ಕೇಳಿದಾಗ, 'ಇಲ್ಲ, ಇಲ್ಲ. ನಾನು ಹೊಗೆ ಇಲ್ಲ ಮತ್ತು ಬೆಂಕಿ ಇಲ್ಲ ಎಂದು ಹೇಳುತ್ತಿಲ್ಲ. ಆ ಬೆಂಕಿಯನ್ನು ಯಾರು ಹಚ್ಚಿದರೆಂದೂ ನಿಮಗೆ ಹೇಳುತ್ತಿಲ್ಲ, ಎಂದು ಹೇಳುತ್ತಿದ್ದೇನೆ' ಎಂದು ನಟಿ ಕರಣ್ ಜೋಹರ್ ಪ್ರಶ್ನೆಗೆ ಉತ್ತರಿಸಿದರು.
ಶಾಹಿದ್ ಇನ್ನೊಂದು ರಿಲೆಷನ್‌ಶಿಪ್‌ಗೆ ಶಿಫ್ಟ್ ಆಗಿದ್ದು ಕಾರಣವಾ ಎಂದು ಕರಣ್ ಹೇಳಿದಾಗ, 'ನಿಮಗೆ ಗೊತ್ತಾ, ಈ ಲಿಂಕ್‌ಅಪ್‌ಗೆ ಎರಡು ವರ್ಷಗಳಾಗಿವೆ. ನಾನು ಶಾಹಿದ್ ಕಪೂರ್ ಎಂಬ ಹೆಸರಿನಿಂದ ಬೇಸರಗೊಂಡಿದ್ದೇನೆ. ಬೇರೆಯವರೊಂದಿಗೆ ಸಂಬಂಧ ಹೊಂದಲು ಬಯಸುತ್ತೇನೆ' ಎಂದು ಹೇಳಿದ್ದರು ಡರ್ಟಿ ಪಿಕ್ಚರ್‌ನ ಬೋಲ್ದ್ ನಟಿ ವಿದ್ಯಾ.
ವಿದ್ಯಾ ದೀರ್ಘಕಾಲದ ಡೇಟಿಂಗ್ ನಂತರ ಯುಟಿವಿ ಮೋಷನ್ ಪಿಕ್ಚರ್ಸ್‌ನ ಸಿಇಒ ಸಿದ್ಧಾರ್ಥ್ ರಾಯ್ ಕಪೂರ್‌ನ್ನು ವಿವಾಹವಾದರು.
ಡಿಸೆಂಬರ್ 14, 2012 ರಂದು ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು.
ಅನು ಮೆನನ್ ನಿರ್ದೇಶನದ 'ಶಕುಂತಲಾ ದೇವಿ' ಚಿತ್ರದಲ್ಲಿ ವಿದ್ಯಾ ನೆಕ್ಸ್ಟ್ ಕಾಣಿಸಿಕೊಳ್ಳಲಿದ್ದಾರೆ.