ವಾವ್, ವಿದ್ಯಾರ ಅದ್ಭುತ ಪ್ರತಿಭೆಯಂತೆ ಮನೆಯೂ ವಂಡರ್‌ಪುಲ್!

First Published 1, Aug 2020, 6:13 PM

ವಿದ್ಯಾ ಬಾಲನ್ ಅವರ ಹೊಸ ಚಿತ್ರ 'ಶಕುಂತಲಾ ದೇವಿ' ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ಸಖತ್ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಅನು ಮೆನನ್ ನಿರ್ದೇಶನದ  ಈ ಚಿತ್ರದಲ್ಲಿ ವಿದ್ಯಾ ಬಾಲನ್ ಅಭಿನಯಕ್ಕೆ ಮೆಚ್ಚುಗೆ ಕೇಳಿಬರುತ್ತಿದೆ. 'ಶಕುಂತಲಾ ದೇವಿ' ಸಿನಿಮಾವನ್ನು ನೋಡುತ್ತಾ ತಮ್ಮ ಮನೆಯಲ್ಲಿ ಕುಳಿತಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ವಿದ್ಯಾ. ಮನೆಯಲ್ಲಿ ದೊಡ್ಡ ಟಿವಿ ಗೋಡೆಗಳ ಮೇಲೆ ಸುಂದರವಾದ ಚಿತ್ರಕಲೆಗಳನ್ನು ಹೊಂದಿರುವ ಕಹಾನಿ ಫೇಮ್ ನಟಿಯ ಐಷಾರಾಮಿ ಮನೆ ಫೋಟೋಗಳು ಇಲ್ಲಿವೆ.

ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ಜುಹು ತಾರಾ ರೋಡ್‌ನಲ್ಲಿರುವ ಮನೆ ಪ್ರಣೇತಾ'ದಲ್ಲಿ ವಾಸಿಸುತ್ತಾರೆ ವಿದ್ಯಾ ಬಾಲನ್.

ವಿದ್ಯಾ ಬಾಲನ್ 2012ರಿಂದ ಸೀ ಫೇಸಿಂಗ್‌ ಅಪಾರ್ಟ್‌‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. 2014ರಲ್ಲಿ ಇದೇ ಬಿಲ್ಡಿಂಗ್‌ನಲ್ಲಿ  ಸುಮಾರು 32 ಕೋಟಿ ಮೌಲ್ಯದ ಒಂದು ಫ್ಲಾಟ್ ಖರೀದಿಸಿದ್ದಾರೆ ಶಾಹಿದ್ ಕಪೂರ್ ಕೂಡ.

Filmfare ಅವಾರ್ಡ್‌ ಸಮಯದಲ್ಲಿ ಬ್ಯಾಕ್‌ಸ್ಟೇಜ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು ವಿದ್ಯಾ ಬಾಲನ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್.  ನಂತರ ಇವರಿಬ್ಬರ ಕಾಮನ್‌ ಫ್ರೆಂಡ್‌ ಕರಣ್ ಜೋಹರ್‌ ಇಬ್ಬರನ್ನು ಭೇಟಿ ಮಾಡಿಸಿದ್ದರು.

ಸಿದ್ಧಾರ್ಥ್ ಮತ್ತು ವಿದ್ಯಾ ಇಬ್ಬರೂ ಉದ್ಯಮದಲ್ಲಿ ಪ್ರಸಿದ್ಧರಾಗಿದ್ದರು, ಆದ್ದರಿಂದ ಹೊರಗೆ ಹೆಚ್ಚು ಮೀಟ್‌ ಮಾಡಲು ಆಗುತ್ತಿರಲಿಲ್ಲ.ಈ ಕಾರಣದಿಂದ ಇಬ್ಬರೂ  ಭೇಟಿಯಾಗಿದ್ದು ಕಡಿಮೆ. ಆದರೆ ಹೆಚ್ಚು ಮಾತನಾಡುತ್ತಿದ್ದರು. ಕ್ರಮೇಣ ಕ್ಲೋಸ್‌ ಆದರು.

ನಂತರ ಸಿದ್ಧಾರ್ಥ್ ಮದುವೆಗೆ ಪ್ರಪೋಸ್‌ ಮಾಡಿದರು. ಕುಟುಂಬದ ಒಪ್ಪಿಗೆಯೊಂದಿಗೆ ಇಬ್ಬರೂ ಸೌತ್‌ ಮತ್ತು ಪಂಜಾಬಿ ಪದ್ಧತಿಯಂತೆ ಸಪ್ತಪದಿ ತುಳಿದರು.

ಸಿದ್ಧಾರ್ಥ್-ವಿದ್ಯಾ ಮುಂಬೈನ ಬಾಂದ್ರಾದ ಗ್ರೀನ್ ಗಿಫ್ಟ್ ಬಂಗಲೆಯಲ್ಲಿ ಡಿಸೆಂಬರ್ 14, 2012 ರಂದು ವಿವಾಹವಾದರು.

ವಿವಾಹ ವಿಧಿಗಳು ಪಂಜಾಬಿ ಮತ್ತು ತಮಿಳು ಪದ್ಧತಿಗಳಂತೆ ಇತ್ತು.

ಮೊದಲು ಎರಡು ಬಾರಿ ವಿಚ್ಚೇದನ ಪಡೆದ  ಸಿದ್ಧಾರ್ಥ್‌ಗೆ ವಿದ್ಯಾ ಮೂರನೇ ಪತ್ನಿ.

ವಿದ್ಯಾ ಮನೆ ಇಂಟೀರಿಯರ್ ನೋಡಿ..

ವಿದ್ಯಾ ಮನೆ ಇಂಟೀರಿಯರ್ ನೋಡಿ..

ಬಾಲ್ಯದ ಸ್ನೇಹಿತೆ ಆರತಿ ಬಜಾಜ್ ಜೊತೆಯ ಸಿದ್ಧಾರ್ಥ್ ಫಸ್ಟ್‌ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಟಿವಿ ನಿರ್ಮಾಪಕ ಕವಿತಾಳನ್ನು ಮದುವೆಯಾಗಿದ್ದರು ಸಿದ್ಧಾರ್ಥ್. ಆದರೆ ಅದೂ ಡಿವೋರ್ಸ್‌ನಲ್ಲಿ ಅಂತ್ಯವಾಯಿತು.

ತಮಿಳುನಾಡಿನಲ್ಲಿ ಹುಟ್ಟಿ, ಕೇರಳದಲ್ಲಿ ಬೆಳದು, ಬಾಲಿವುಡ್‌ನಲ್ಲಿ ನೆಲೆ ಕಂಡು ಕೊಂಡ ವಿದ್ಯಾಗೆ ಪ್ರತಿಭೆಯೊಂದು ಬಿಟ್ಟು ಬೇರೇನೂ ಇರಲಿಲ್ಲ. ಆದರೆ, ಅವರು ಬೆಳೆದ ಪರಿ ಎಂಥವರನ್ನೂ ಅಚ್ಚರಿಗೊಳಿಸುತ್ತದೆ.

ಅಭಿನಯ ಹಾಗೂ ಪಾತ್ರಗಳ ಆಯ್ಕೆ ಎರಡರಲ್ಲೂ ಪಳಗಿದ ನಟಿ ಬಾಲನ್‌. ಕಹಾನಿ, ಡರ್ಟಿ ಫಿಕ್ಚರ್‌, ಮಿಷನ್‌ ಮಂಗಲ್‌ ಮುಂತಾದವುಗಳು ಕೆಲವು ಉದಾಹರಣೆಗಳು.

ಡಿಜಿಟಲ್‌ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಇವರ ಹೊಸ ಚಿತ್ರ 'ಶಕುಂತಲಾ ದೇವಿ' ಸಖತ್‌ ಮೆಚ್ಚುಗೆ ಗಳಿಸುತ್ತಿದೆ. ಎಂದಿನಂತೆ ವಿದ್ಯಾಬಾಲನ್‌ ನಟನೆಗ ಅಭಿಮಾನಿಗಳು  ಫಿದಾ ಆಗಿದ್ದಾರೆ.

loader