ಕುಂಟುತ್ತಾ ಛಾವಾ ಪ್ರಚಾರಕ್ಕೆ ಬಂದ ರಶ್ಮಿಕಾ ಮಂದಣ್ಣ ಕಾಲೆಳೆದ ವಿಕ್ಕಿ ಕೌಶಲ್
ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಫೋಟೋಗ್ರಾಫರ್‌ಗಳಿಗೆ ಪೋಸ್ ಕೊಡುವಾಗ ಅವರ ಚೇಷ್ಟೆಯ ಫೋಟೋಗಳು ವೈರಲ್ ಆಗಿವೆ. 'ಛಾವಾ' ಚಿತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ , ಕಾಲಿನ ಗಾಯದಿಂದಾಗಿ ಹಲವಾರು ಪ್ರಚಾರ ಕಾರ್ಯಕ್ರಮಗಳಿಗೆ ಗೈರುಹಾಜರಾಗಿದ್ದಾರೆ. ಈ ಹಿಂದೆ ವೀಲ್‌ಚೇರ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ.

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ಚೇಷ್ಟೆಗಳು ನೋಡಲೇಬೇಕಾದಂತಿತ್ತು. ರಶ್ಮಿಕಾ ಮಂದಣ್ಣ ಕಾರಿನಿಂದ ಇಳಿದ ತಕ್ಷಣ ಫೋಟೋಗ್ರಾಫರ್‌ಗಳಿಗೆ ಕೈ ಬೀಸಿದರು. ನಂತರ ನಿಧಾನವಾಗಿ ಕುಂಟುತ್ತಾ ಬಂದು ಪೋಸ್ ಕೊಟ್ಟರು. ರಶ್ಮಿಕಾ ಮಂದಣ್ಣ ಪೋಸ್ ಕೊಡುವಾಗ ಮೈ ಜಡ ತೆಗೆಯುವ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಈ ಬಗ್ಗೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಪೋಸ್ ಕೊಡುವಾಗ ತಲೆ ಬಾಗಿಸಿ ಫ್ಲೈಯಿಂಗ್ ಕಿಸ್ ಕೊಟ್ಟರು. ನಂತರ ಎರಡೂ ಕೈಗಳಿಂದ ಹಾರ್ಟ್ ಮಾಡಿ ಎಲ್ಲರ ಮನ ಗೆದ್ದರು. ಜನವರಿಯ ಆರಂಭದಲ್ಲಿ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಗಾಯಗೊಂಡಿದ್ದರು, ಇದರಿಂದಾಗಿ ಅವರಿಗೆ ಓಡಾಡಲು ಕಷ್ಟವಾಗುತ್ತಿತ್ತು. ಈಗ ಅವರ ಆರೋಗ್ಯದಲ್ಲಿ ಗಮನಾರ್ಹ ಬೆಳವಣಿಗೆ ಆಗಿದೆ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ 'ಛಾವಾ'ದ ಬಗ್ಗೆ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ವಿಕಿ ಕೌಶಲ್ ನಾಯಕನಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅಭಿನಯದ 'ಛಾವಾ' ಚಿತ್ರ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. 130 ಕೋಟಿ ಬಜೆಟ್‌ನ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಇದರಲ್ಲಿ ಅಕ್ಷಯ್ ಖನ್ನಾ, ಆಶುತೋಷ್ ರಾಣಾ ಮತ್ತು ದಿವ್ಯಾ ದತ್ತ ಕೂಡ ಇದ್ದಾರೆ.
ಇತ್ತೀಚೆಗೆ, ಮುಂಬೈನ ದಾದರ್‌ನ ಚಿತ್ರ ಸಿನಿಮಾದಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ಛಾವಾ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ವಿಕಿ ಕೌಶಲ್ ಅವರೊಂದಿಗೆ ಬಂದರು. ಹಿಂದಿನ ಹಲವಾರು ಪ್ರಚಾರ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿದ್ದ ನಟಿ, ತನ್ನ ಅಭಿಮಾನಿಗಳನ್ನು ಭೇಟಿ ಮಾಡಲು ತುಂಬಾ ಉತ್ಸುಕರಾಗಿದ್ದರು.
ಈ ಬಾರಿ ಪ್ರಚಾರದಲ್ಲಿ ತಾನು ಒಬ್ಬಂಟಿಯಾಗಿ ಇಲ್ಲದ ಕಾರಣ ವಿಕಿ ಕೂಡ, ನಾನು ಇಂದು ಒಬ್ಬಂಟಿಯಾಗಿ ಬಂದಿಲ್ಲ. ನಾನು ಹೈದರಾಬಾದ್‌ನಿಂದ ಮಹಾರಾಣಿಯನ್ನು ಕರೆತಂದಿದ್ದೇನೆ, ವಿಶೇಷವಾಗಿ ನಿಮಗಾಗಿ ಎಂದು ನರೆದಿದ್ದವರ ಬಳಿ ಹೇಳಿದರು.
ಛಾವಾ ಚಿತ್ರವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನದ ಬಗ್ಗೆ ಒಂದು ಐತಿಹಾಸಿಕ ಕಥೆಯಾಗಿದೆ. ಮರಾಠಾ ಸಾಮ್ರಾಜ್ಯದ ಸ್ಥಾಪಕರ ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರವನ್ನು ವಿಕಿ ಕೌಶಲ್ ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ಅಶುತೋಷ್ ರಾಣಾ ಮತ್ತು ದಿವ್ಯ ದತ್ತ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಛಾವಾ ಚಿತ್ರದ ಟ್ರೇಲರ್ ಮರಾಠರು ಮತ್ತು ಮೊಘಲರ ನಡುವಿನ ಕ್ರೂರ ಸಂಘರ್ಷವನ್ನು ಚಿತ್ರಿಸುತ್ತದೆ.
ಮುಂಬೈನ ದಾದರ್ ನಲ್ಲಿರುವ ಚಿತ್ರಾ ಸಿನಿಮಾಸ್ ನಲ್ಲಿ ಪ್ರಚಾರಕ್ಕಾಗಿ ಕಾಣಿಸಿಕೊಂಡರು. ಪಾಪರಾಜಿಗಾಗಿ ಪೋಸ್ ನೀಡುತ್ತಿದ್ದಾಗ, ಅವರ ಗಾಯದ ಬಗ್ಗೆ ಕೇಳಲಾಯಿತು, ಅದಕ್ಕೆ ಅವರು ತಮ್ಮ ಕಾಲು "ಗುಣವಾಗಿದೆ" ಎಂದು ಉತ್ತರಿಸಿದರು. ರಶ್ಮಿಕಾ ಪ್ರಸ್ತುತ ತಮ್ಮ 'ಪುಷ್ಪ 2: ದಿ ರೂಲ್' ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದಾರೆ, ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಕೂಡ ನಟಿಸಿದ್ದಾರೆ. ಅವರು ಮುಂದೆ ಸಲ್ಮಾನ್ ಖಾನ್ ಜೊತೆ ಸಿಕಂದರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.