54ನೇ ವಯಸ್ಸಿಗೇ ಕೊನೆ ವಿದಾಯ ಹೇಳಿದ ಅದ್ಭುತ ನಟ ಇರ್ಫಾನ್ ಖಾನ್
ಇರ್ಫಾನ್ ಎಂದೇ ಫೇಮಸ್ ಆಗಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್. ಹಿಂದಿ ಸಿನಿಮಾದ ಜೊತೆ ಬ್ರಿಟಿಷ್ ಹಾಗೂ ಹಾಲಿವುಡ್ ಚಲನಚಿತ್ರ ರಂಗದಲ್ಲಿ ಫೇಮಸ್ ಹೆಸರು. ಸುಮಾರು ಮೂರು ದಶಕಗಳ ಕಾಲ ಚಲನಚಿತ್ರ ವೃತ್ತಿಜೀವನದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು ಇರ್ಫಾನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಇವರ ಮುಡಿಗೇರಿತ್ತು. ಇರ್ಫಾನ್ ಅವರ ಸಜಹ ಅಭಿನಯಕ್ಕೆ ಎಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರ ಸಾಲಿನಲ್ಲಿ ಸೇರುವ ಇವರು ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿದ್ದರು. ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ನಟ ಇರ್ಫಾನ್, ಮುಂಬೈನಲ್ಲಿ ಬದುಕಿಗೆ ಕೊನೆಯ ವಿದಾಯ ಹೇಳಿದ್ದಾರೆ. ಇರ್ಫಾನ್‌ನಂತಹ ಪ್ರತಿಭಾವಂತ ನಟನ ಸಾವು ತುಂಬಲಾರದ ನಷ್ಟ.ಈ ಅದ್ಭುತ ನಟನ ಬಗ್ಗೆ ಮತ್ತೊಂದಿಷ್ಟು...
7 ಜನವರಿ 1967ರಲ್ಲಿ ಜನಸಿದ್ದ ಇರ್ಫಾನ್.
29 ಏಪ್ರಿಲ್ 2020 ಮುಂಬೈನ ಕೋಕಿಲಾಬೆನ್ ಧಿರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನ.
ಧೀರ್ಘ ಕಾಲದಿಂದ ಕರುಳಿನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 54ನೇ ವಯಸ್ಸಿನ ಬಾಲಿವುಡ್ ನಟ ಇರ್ಫಾನ್ ಖಾನ್.
ದೇಹದ ವಿವಿಧ ಭಾಗಗಳಿಗೆ ಹರಡುವ ಅಪರೂಪದ ಕ್ಯಾನ್ಸರ್ ನ್ಯೂರೋಎಂಡೋಕ್ರೈನ್ ಟ್ಯೂಮರ್ ಪತ್ತೆ ಮಾಡಿದ್ದಾರೆ ಎಂದಿದ್ದ ಇರ್ಫಾನ್ ಖಾನ್ ಮಾರ್ಚ್ 2018ರಲ್ಲಿಯೇ ಚಿಕಿತ್ಸೆ ಪಡೆದಿದ್ದರು.
2019ರಲ್ಲಿ ಹಲವು ತಿಂಗಳು ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು ಖಾನ್.
ಭಾರತದಲ್ಲಿ ಲಾಕ್‌ಡೌನ್ ಹೇರುವ ವಾರ ಮೊದಲು ಬಿಡುಗಡೆಯಾದ ಆಂಗ್ರೇಜಿ ಮಿಡಿಯಂ ಇವರು ಕಾಣಿಸಿಕೊಂಡ ಲಾಸ್ಟ್ ಸಿನಿಮಾ.
ಆನಾರೋಗ್ಯದಿಂದಾಗಿ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ ಇರ್ಫಾನ್. ಚಿತ್ರದ ಟ್ರೈಲರ್ ಬಿಡುಗಡೆಯ ಮುನ್ನ ವೀಡಿಯೊ ಸಂದೇಶದ ಮೂಲಕ ಫ್ಯಾನ್‌ಗಳೊಂದಿಗೆ ಮಾತನಾಡಿದ್ದರು ಇರ್ಫಾನ್.
ಸ್ಲಮ್‌ಡಾಗ್ ಮಿಲಿಯನೇರ್, ಜುರಾಸಿಕ್ ವರ್ಲ್ಡ್, ದಿ ಅಮೇಜಿಂಗ್ ಸ್ಪೈಡರ್ಮ್ಯಾನ್, ಲೈಫ್ ಅಫ್ ಪೈ ಇರ್ಫಾನ್ ನಟಿಸಿದ ಹಾಲಿವುಡ್ ಚಿತ್ರಗಳು.
ಟ್ವಿಟರ್‌ನಲ್ಲಿ ಚಲನಚಿತ್ರ ನಿರ್ಮಾಪಕ ಶೂಜಿತ್ ಸಿರ್ಕಾರ್, ನಟ ಅಮಿತಾಭ್ ಬಚ್ಚನ್ ಸೇರಿ ಅನೇಕ ಗಣ್ಯರು ಇರ್ಫಾನ್ ಅವರ ನಿಧನಕ್ಕೆ ಸಂತಾಪ ಮತ್ತು ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಪತ್ನಿ ಸುತಪಾ ಜೊತೆ ಇಬ್ಬರು ಗಂಡು ಮಕ್ಕಳನ್ನು ಆಗಲಿದ್ದಾರೆ ಈ ಪ್ರತಿಭಾನ್ವಿತ ನಟ.
ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿ ಇಡೀ ಭಾರತವೇ ಅದ್ಭುತ ನಟನನ್ನು ಕಳೆದುಕೊಂಡಿದ್ದಕ್ಕೆ ಸಂತಾಪ ಸೂಚಿಸಿದೆ.