- Home
- Entertainment
- Cine World
- ಸಮಂತಾ ಸಾವು, ವಿಜಯ್ ದೇವರಕೊಂಡ ಆತ್ಮಹತ್ಯೆ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!
ಸಮಂತಾ ಸಾವು, ವಿಜಯ್ ದೇವರಕೊಂಡ ಆತ್ಮಹತ್ಯೆ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ವೇಣುಸ್ವಾಮಿ!
ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಸಿನಿಮಾ ಮತ್ತು ರಾಜಕೀಯ ನಾಯಕರ ಬಗ್ಗೆ ಭಯಾನಕ ಜ್ಯೋತಿಷ್ಯ ಹೇಳುವ ವಿವಾದಾತ್ಮಕ ಜ್ಯೋತಿಷಿ ವೇಣು ಸ್ವಾಮಿ, ಇದೀಗ ಸಮಂತಾ ಹಾಗೂ ವಿಜಯ ದೇವರಕೊಂಡ ಸಾವಿನ ಬಗ್ಗೆ ಭವಿಷ್ಯ ಹೇಳಿದ್ದಾರೆ. ಜೊತೆಗೆ ಪ್ರಭಾಸ್ ಸಿನಿಮಾ ಜೀವನ ಅಂತ್ಯದ ಬಗ್ಗೆಯೂ ತಿಳಿಸಿದ್ದಾರೆ. ಇಲ್ಲಿದೆ ಆಫ್ ದಿ ರೆಕಾರ್ಡ್ ಆಡಿಯೋದ ಅಸಲಿ ವಿಷಯ..

ವೇಣು ಸ್ವಾಮಿ ಎಂಥ ವಿವಾದಾತ್ಮಕ ಜ್ಯೋತಿಷಿ ಅಂತ ಬೇರೆ ಹೇಳಬೇಕಿಲ್ಲ. ಅವರ ವಿವಾದಾತ್ಮಕ ಕಾಮೆಂಟ್ಸ್‌ಗಳಿಂದ ವೇಣು ಸ್ವಾಮಿ ಹಲವು ಬಾರಿ ಟೀಕೆಗಳನ್ನು ಎದುರಿಸಿದ್ದಾರೆ. ಸೆಲೆಬ್ರಿಟಿಗಳ ಜಾತಕದ ಹೆಸರಲ್ಲಿ ಅವರ ಪರ್ಸನಲ್ ಲೈಫ್ ಬಗ್ಗೆಯೂ ಕಾಮೆಂಟ್ ಮಾಡುತ್ತಾರೆ. ನಾಗ ಚೈತನ್ಯ, ಶೋಭಿತಾ ಬಗ್ಗೆ ವೇಣು ಸ್ವಾಮಿ ಭಯಾನಕ ಕಾಮೆಂಟ್ಸ್ ಮಾಡಿದ್ದಕ್ಕೆ ಫಿಲಂ ಜರ್ನಲಿಸ್ಟ್‌ಗಳು ಕಂಪ್ಲೇಂಟ್ ಕೂಡ ಕೊಟ್ಟಿದ್ದರು.
ರಾಜಕೀಯದ ಬಗ್ಗೆ ವೇಣು ಸ್ವಾಮಿ ಹೇಳಿದ್ದು ಕಳೆದ ಚುನಾವಣೆಯಲ್ಲಿ ನಿಜ ಆಗಿಲ್ಲ. ನಾನು ಹೇಳಿದ್ದು ತಪ್ಪಾಯ್ತು ಅಂತ ವೇಣು ಸ್ವಾಮಿ ಕ್ಷಮೆ ಕೇಳಿದ್ದರು. ಈಗ ವೇಣು ಸ್ವಾಮಿ ಆಡಿಯೋ ಒಂದು ಲೀಕ್ ಆಗಿದೆ. ಈ ಹಿಂದೆ ವೇಣು ಸ್ವಾಮಿ ಟಾಲಿವುಡ್‌ನಲ್ಲಿ ಕೆಲವರು ಸಾಯುತ್ತಾರೆ ಎಂದು ಹೇಳಿದ್ದರು. ಈ ಲೀಕ್ ಆದ ವಿಡಿಯೋದಲ್ಲಿ ಸಾಯೋ ಸೆಲೆಬ್ರಿಟಿಗಳ ಹೆಸರನ್ನು ವೇಣು ಸ್ವಾಮಿ ಹೇಳಿದ್ದರು.
ಇದೀಗ ಒಬ್ಬ ಪತ್ರಕರ್ತರ ಜೊತೆ ವೇಣು ಸ್ವಾಮಿ ಆಫ್ ದಿ ರೆಕಾರ್ಡ್‌ನಲ್ಲಿ ಮಾನಾಡಿರುವರೋ ಆಡಿಯೋ ಲೀಕ್ ಆಗಿದೆ. ಟಾಲಿವುಡ್‌ನಲ್ಲಿ ಬೆಟ್ಟಿಂಗ್ ಆಪ್ಸ್ ವಿವಾದದಿಂದ ಈ ಆಡಿಯೋ ಲೀಕ್ ಆಗಿದೆ. ಪ್ರಭಾಸ್, ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ವೇಣು ಸ್ವಾಮಿ ಭಯಾನಕ ಭವಿಷ್ಯ ನುಡಿದ್ದಾರೆ.
'ನಾನು ಮೂವರು ಸಾಯುತ್ತಾರೆ ಅಂತ ಹೇಳಿದ್ದೆ. ಒಬ್ಬ ಹೀರೋ, ಒಬ್ಬ ಹೀರೋಯಿನ್ ಸಾಯುತ್ತಾರೆ. ಪ್ರಭಾಸ್, ವಿಜಯ್ ದೇವರಕೊಂಡ ಇಬ್ಬರೂ ಸಾಯುತ್ತಾರೆ ಎಂದು ಹೇಳಿದ್ದೆ. ಸಮಂತಾ ಸೂಸೈಡ್ ಮಾಡ್ಕೊಳ್ತಾರಾ ಅಂತ ಜರ್ನಲಿಸ್ಟ್ ಕೇಳಿದಾಗ, ಯಾರಾದರೂ ಒಬ್ಬರು ಮಾಡಿಕೊಳ್ಳುತ್ತಾರೆ. ನನ್ನ ಪ್ರಕಾರ ವಿಜಯ್ ದೇವರಕೊಂಡ ಮಾಡಿಕೊಳ್ತಾನೆ. ಚಿತ್ರರಂಗ ಇದರಿಂದ ಹೊರಗೆ ಬರೋಕೆ ಟೈಮ್ ಹಿಡಿಯುತ್ತದೆ ಎಂದು ಹೇಳಿದ್ದರು.
ಒಬ್ಬ ಹೀರೋಗೆ ಸೀರಿಯಸ್ ಇಂಜುರಿ ಇದೆ ಅಂತ ಹೇಳಿದ್ದರು. ನಿಜವಾಗ್ಲೂ ಪ್ರಾಬ್ಲೆಮ್ ಇದೆಯಾ ಅಂತ ಕೇಳಿದಾಗ, ತುಂಬಾ ಸಮಸ್ಯೆಗಳಿವೆ. ಅವನಿಗೆ ಎಲ್ಲಾ ಸಮಸ್ಯೆಗಳೇ. ಪ್ರಭಾಸ್ ಅವರಿಗೆ ಎಂದು ಕೇಳಿದಾಗ, ಎಲ್ಲಾ ಆದ್ಮೇಲೆ ಮಾತಾಡೋಣ ಅಂತ ವೇಣು ಸ್ವಾಮಿ ಹೇಳಿದ್ದಾರೆ. ಈ ಆಡಿಯೋ ಲೀಕ್ ಆಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಂದು ಟಿವಿ ಚಾನೆಲ್‌ನಲ್ಲಿ ಈ ಆಡಿಯೋ ಲೀಕ್ ಮಾಡಿದ್ದಾರೆ. ಇದರ ಬಗ್ಗೆ ಜರ್ನಲಿಸ್ಟ್ ಪ್ರಭು ರಿಯಾಕ್ಟ್ ಮಾಡಿದ್ದಾರೆ. ಇಂಥ ವಿಷಯಗಳನ್ನು ಅವರ ಫ್ಯಾಮಿಲಿ ಕೇಳಿದರೆ ಏನಾಗುತ್ತೆ ಅಂತ ಪ್ರಶ್ನಿಸಿದ್ದಾರೆ.
ಸ್ವಾಮಿಯ ಇಂತಹ ಹೇಳಿಕೆಗಳಿಗೆ ನಟರು ರಿಯಾಕ್ಟ್ ಮಾಡೋ ಅವಶ್ಯಕತೆ ಇಲ್ಲ. ಆದರೆ, ಅವರ ಫ್ಯಾಮಿಲಿ, ಫ್ಯಾನ್ಸ್ ಕಿವಿಗೆ ಬಿದ್ದರೆ ತುಂಬಾ ಬೇಜಾರಾಗುತ್ತದೆ ಎಂದು ಪತ್ರಕರ್ತ ಪ್ರಭು ಅವರು ಹೇಳಿದ್ದಾರೆ. ಇದೆಲ್ಲದರ ಜೊತೆಗೆ ವೇಣು ಸ್ವಾಮಿ ಹತ್ತಿರ ಕೆಲ ಸೆಲೆಬ್ರಿಟಿಗಳು ಪೂಜೆ ಮಾಡಿಸಿಕೊಳ್ಳುತ್ತಿರುವ ವಿಷಯ ಕೂಡ ಚರ್ಚೆಗೆ ಬಂದಿದೆ.