ಈಗಾಗ್ಲೆ ಮದ್ವೆಯಾಗಿರೋ ಲಾವಣ್ಯ ತ್ರಿಪಾಟಿಗೆ ಮತ್ತೊಂದು ಮ್ಯಾರೇಜ್ ಪ್ರಪೋಸಲ್… ನಟಿ ಏನಂದ್ರು ಗೊತ್ತಾ?
ಇತ್ತೀಚೆಗಷ್ಟೇ ಮದುವೆಯಾಗಿ ವೈವಾಹಿಕ ಜೀವನವನ್ನು ಎಂಜಾಯ್ ಮಾಡ್ತಿರೋ ಲಾವಣ್ಯ ತ್ರಿಪಾಠಿಗೆ ಮತ್ತೊಂದು ಮದುವೆ ಪ್ರಪೋಸಲ್ ಬಂದಿದೆಯಂತೆ. ಈ ಪ್ರೊಪೋಸಲ್ ಗೆ ಲಾವಣ್ಯ ಸಖತ್ತಾಗಿ ಉತ್ತರಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಆದ್ರೆ, ತೆಲುಗು ಸಿನಿಮಾದಲ್ಲಿ ಫೇಮಸ್ ಆಗಿರೋ ನಟಿ ಲಾವಣ್ಯ ತ್ರಿಪಾಠಿ (Lavanya Tripathi) ವರುಣ್ ತೇಜ್ ಅವರೊಂದಿಗೆ ಹಲವು ವರ್ಷಗಳಿಂದ ಸಿಕ್ರೇಟ್ ಆಗಿ ರಿಲೇಶನ್ ಶಿಪ್ ನಲ್ಲಿದ್ದು, ಮದ್ವೆನೂ ಆಗಿದ್ದಾರೆ ಈ ಜೋಡಿ. ಮಿಸ್ಟರ್ ಚಿತ್ರದಲ್ಲಿ ಇಬ್ಬರು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಮತ್ತೊಂದು ಚಿತ್ರದಲ್ಲಿ ಜೊತೆಯಾಗಿದ್ದರು, ಈ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಬದಲಾಯ್ತು, ಆದ್ರೆ ಮದುವೆಯಾಗೋವರೆಗೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸೈಲೆಂಟ್ ಆಗಿಯೇ ಇದ್ದರು.
ಕೆಲವು ವಿಷಯಗಳು ಎಷ್ಟೇ ಮರೆಮಾಚಿದರೂ ಅದನ್ನ ಮುಚ್ಚಿಡೋದಕ್ಕೆ ಸಾಧ್ಯವೇ ಇಲ್ಲ. ಹಾಗೇ ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಇದಾಗಿ ಸ್ವಲ್ಪ ಸಮಯದಲ್ಲೇ ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಂತು. ಆದರೆ ಲಾವಣ್ಯ ತ್ರಿಪಾಠಿ ಈ ರೂಮರ್ಸ್ ತಳ್ಳಿಹಾಕಿದ್ದರು. ಇದಾಗಿ ಸ್ವಲ್ಪ ಸಮಯದಲ್ಲೇ ವರುಣ್ ತೇಜ್ (Varun Tej)-ಲಾವಣ್ಯ ಅವರ ನಿಶ್ಚಿತಾರ್ಥ ನಡೆದು, ಕಳೆದ ನವೆಂಬರ್ ನಲ್ಲಿ ಇಬ್ಬರ ಮದ್ವೆ ಅದ್ಧೂರಿಯಾಗಿ ನಡೆಯಿತು.
ಟಾಲಿವುಡ್ ನ ಈ ಮುದ್ದಾದ ದಂಪತಿಗಳು ತಮ್ಮ ವೈವಾಹಿಕ ಜೀವನವನ್ನು (Married Life) ಸಂತೋಷದಿಂದ ಎಂಜಾಯ್ ಮಾಡ್ತಿದ್ದಾರೆ. ಇಬ್ಬರೂ ತಮ್ಮ ನೆಚ್ಚಿನ ಸ್ಥಳಗಳಿಗೆ ಟ್ರಾವೆಲ್ ಮಾಡ್ತಾ ಜೀವನವನ್ನ ಖುಷೀ ಖುಷಿಯಾಗಿ ಕಳಿತ್ತಿದ್ದಾರೆ. ಇದೆಲ್ಲದರ ನಡುವೆ ಲಾವಣ್ಯಗೆ ಅಕ್ಸಿಡೆಂಟ್ ಆಗಿ, ಅವರ ಕಾಲಿಗೆ ಗಾಯವಾಗಿತ್ತು. ಇದಕ್ಕೆ ಚಿಕಿತ್ಸೆ ಹಾಗೂ ರೆಸ್ಟ್ ಬೇಕಾಗಿರೋದ್ರಿಂದ ನಟಿ ಸದ್ಯ ಮನೆಯಲ್ಲೇ ಇರುವಂತಾಗಿದೆ.
ಸುಮ್ಮನೆ ಮನೆಯಲ್ಲಿ ದಿನದೂಡುತ್ತಿರೋ ಲಾವಣ್ಯ ಆನ್ ಲೈನ್ ಪ್ರಶ್ನೋತ್ತರಗಳನ್ನ ಕೇಳೋ ಮೂಲಕ, ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ. ಈ ಸಂದರ್ಭದಲ್ಲಿ ಲಾವಣ್ಯ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ವಿಶೇಷವೆಂದರೆ ಈ ಪ್ರಶ್ನೋತ್ತರದ ವೇಳೆ ಈಗಾಗಲೇ ಮದುವೆಯಾಗಿರೋ ನಟಿ ಲಾವಣ್ಯಗೆ ವ್ಯಕ್ತಿಯೊಬ್ಬರು ಪ್ರಪೋಸ್ ಮಾಡಿದ್ದಾರೆ. ನಟಿಗೆ ನನ್ನ ಫೇವರಿಟ್ ಲಾವಣ್ಯ, ಈ ಜನ್ಮದಲ್ಲಿ ನಿಮಗೆ ಬೇರೆ ಮದ್ವೆಯಾಗಿದೆ, ಮುಂದಿನ ಜನ್ಮದಲ್ಲಾದರೂ ನಾವಿಬ್ಬರು ಮದ್ವೆ ಆಗೋಣ ಎಂದಿದ್ದಾರೆ.
ಈ ಪ್ರಶ್ನೆಗೆ ಲಾವಣ್ಯ ತ್ರಿಪಾಠಿ ತುಂಬಾನೆ ಸುಂದರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಹಿಂದೂ ಶಾಸ್ತ್ರದ ಪ್ರಕಾರ, ಮದುವೆ (Marriage) ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವ ನಂಬಿಕೆ ಇದೆ. ಒಂದು ಸಲ ಮದುವೆಯಾದರೆ ಈ ಜನ್ಮಕ್ಕೆ ಮಾತ್ರವಲ್ಲ, ಮುಂದಿನ ಏಳೇಳು ಜನ್ಮಕ್ಕೂ ಅದೇ ಜೋಡಿ ಜೊತೆಯಾಗಿರ್ತಾರೆ ಎಂದಿದ್ದಾರೆ ನಟಿ. ಲಾವಣ್ಯ ಪ್ರತಿಕ್ರಿಯಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಉತ್ತರವು ಲಾವಣ್ಯ ತನ್ನ ಪತಿ ವರುಣ್ ನನ್ನು ಎಷ್ಟು ಪ್ರೀತಿಸುತ್ತಾಳೆ ಅನ್ನೋದನ್ನು ತೋರಿಸುತ್ತೆ ಎಂದು ಜನ ಹೇಳ್ತಿದ್ದಾರೆ.
ಮತ್ತೊಬ್ಬ ಅಭಿಮಾನಿ... ನೀವು ನಟಿಸಿದ ಚಿತ್ರಗಳಲ್ಲಿ (difficult cinema) ತುಂಬಾನೆ ಕಷ್ಟ ಅನಿಸಿದ ಚಿತ್ರ ಯಾವುದು? ಎಂದು ಕೇಳಿದ್ದಾರೆ. ಅದಕ್ಕೆ ಲಾವಣ್ಯ ನನ್ನ ಮೊದಲ ಚಿತ್ರ ನನಗೆ ತುಂಬಾನೆ ಕಷ್ಟ ಅನಿಸಿತ್ತು ಅನ್ನೋದನ್ನು ಹೇಳಲೇಬೇಕು. ಆಗ ಒಂದು ಕಾರವಾನ್ ಕೂಡ ಇರಲಿಲ್ಲ. ಮೇಕಪ್ ಮಾಡೋಕು ಯಾರು ಇಲ್ಲ, ಹೇರ್ ಸ್ಟೈಲಿಶ್ ಕೂಡ ಇರಲಿಲ್ಲ. ಆದರೆ ಆ ಪಾತ್ರವನ್ನು ನಾನು ನಿಜವಾಗಿಯೂ ಎಂಜಾಯ್ ಮಾಡಿದೆ ಎಂದು ಲಾವಣ್ಯ ಉತ್ತರಿಸಿದ್ದಾರೆ..
ಹಿಂದಿ ಕಿರುತೆರೆಯಲ್ಲಿ ಮಿಂಚಿದ ನಟಿ ಲಾವಣ್ಯ ತ್ರಿಪಾಠಿ ಆಂಡಾಲ ರಾಕ್ಷಸಿ (Andala Rakshasi) ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಿರ್ದೇಶಕ ಹನು ರಾಘವಪುಡಿ ಈ ಚಿತ್ರದ ನಿರ್ದೇಶಕರಾಗಿದ್ರು. ಆಂಡಾಲ ರಾಕ್ಷಸಿ, ಟ್ರೈ ಆಂಗಲ್ ಟ್ರಾಜಿಕ್ ಲವ್ ಸ್ಟೋರಿಯಾ