- Home
- Entertainment
- Cine World
- ಮೈತುಂಬ ಬಟ್ಟೆ ಧರಿಸಿ ಬಂದ ತುಂಡುಡುಗೆಯ ಉರ್ಫಿ; ಮೊದಲ ದಿನದ ಮುಟ್ಟಿನ ಅನುಭವ ಬಿಚ್ಚಿಟ್ಟ ನಟಿ
ಮೈತುಂಬ ಬಟ್ಟೆ ಧರಿಸಿ ಬಂದ ತುಂಡುಡುಗೆಯ ಉರ್ಫಿ; ಮೊದಲ ದಿನದ ಮುಟ್ಟಿನ ಅನುಭವ ಬಿಚ್ಚಿಟ್ಟ ನಟಿ
ನಟಿ ಉರ್ಫಿ ಮೈತುಂಬಾ ಬಟ್ಟೆ ಧರಿಸಿ ಪೋಸ್ ನೀಡಿದ್ದಾರೆ. ಉರ್ಫಿಯನ್ನು ಈ ರೀತಿಯ ಸರಳ ಧಿರಿಸಿನಲ್ಲಿ ಯಾರು ನೋಡಿರಲಿಲ್ಲ. ಮೊದಲ ಬಾರಿಗೆ ಬಿಳಿ ಬಣ್ಣದ ಬಟ್ಟೆಗೆ ನೀಲಿ ದುಪಟ್ಟಾ ಧರಿಸಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಉರ್ಫಿಯ ಈ ಸಪ್ರೈಸ್ ಅವತಾರ ನೆಟ್ಟಿಗರ ಗಮನ ಸೆಳೆದಿದೆ.

ವಿಚಿತ್ರ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಇದೀಗ ಮೈತುಂಬಾ ಬಟ್ಟೆ ಧರಿಸಿ ಬಂದಿದ್ದನ್ನು ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಚಿತ್ರ ವಿಚಿತ್ರವಾಗಿ ಬಟ್ಟೆ, ತುಂಡುಡುಗೆಯಲ್ಲೇ ಸದಾ ಕಾಣಿಸಿಕೊಳ್ಳುತ್ತಿದ್ದ ನಟಿ ಉರ್ಫಿ ಮೊದಲ ಬಾರಿಗೆ ಈ ರೀತಿ ಮೈ ತುಂಬ ಬಟ್ಟೆ ಧರಿಸಿ ಪೋಸ್ ನೀಡಿದ್ದಾರೆ.
ನಟಿ ಉರ್ಫಿ ಜಾವೆದ್ ಅವರನ್ನು ಈ ರೀತಿಯ ಸರಳ ಧಿರಿಸಿನಲ್ಲಿ ಯಾರು ನೋಡಿರಲಿಲ್ಲ. ಮೊದಲ ಬಾರಿಗೆ ಬಿಳಿ ಬಣ್ಣದ ಬಟ್ಟೆಗೆ ನೀಲಿ ಬಣ್ಣದ ದುಪಟ್ಟಾ ಧರಿಸಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಉರ್ಫಿಯ ಈ ಸಪ್ರೈಸ್ ಅವತಾರ ನೆಟ್ಟಿಗರ ಗಮನ ಸೆಳೆದಿದೆ.
ಉರ್ಫಿಯ ಈ ಹೊಸ ಅವತಾರ ನೋಡಿ ನೆಟ್ಟಿಗರು ಹಾಡಿಹೊಗಳುತ್ತಿದ್ದಾರೆ. ಸುಂದರವಾಗಿ ಕಾಣಿಸುತ್ತಿದ್ದಾರೆ ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದರೆ ಮತ್ತೋರ್ವ ವ್ಯಕ್ತಿ ಮೊದಲ ಬಾರಿಗೆ ಸಂಪೂರ್ಣವಾಗಿ ಬಟ್ಟೆ ಧರಿಸಿದನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ ಸಂಪೂರ್ಣ ಬಟ್ಟೆ ಧರಿಸಿದ್ದಕ್ಕೆ ಅಭಿನಂದನೆಗಳು ಎಂದಿದ್ದಾರೆ.
ಅಂದಹಾಗೆ ಉರ್ಫಿ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಜೊತೆ ಸಂವಾದ ನಡೆಸಿದ್ದಾರೆ. ಆ ಸಮಯಲ್ಲಿ ನಟಿ ಮುಟ್ಟಿನ ಮೊದಲ ದಿನ ಎಂದು ಹೇಳಿದ್ದಾರೆ.
ಛಾಯಾಗ್ರಾಹಕರೊಬ್ಬರು ಉರ್ಫಿ ಬಳಿ ಮುಟ್ಟಾದ ಮಹಿಳೆಯರನ್ನು ಈಗಲೂ ಅಸ್ಪೃಶ್ಯರ ಹಾಗೆ ನೋಡುತ್ತಾರೆ, ಈಗಲೂ ಇದನ್ನು ನಂಬುತ್ತಾರೆ ಅಂತ ಕೇಳಿದರು. ಅದಕ್ಕೆ ಉರ್ಫಿ ಅಲ್ಲಿದ್ದ ಛಾಯಾಗ್ರಾಹಕರನ್ನು ಮುಟ್ಟಿದರು. ನನಗೆ ಆ ರೀತಿಯ ಅನುಭವ ಆಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಇತ್ತೀಚಿಗಷ್ಟೆ ನಟಿ ಉರ್ಫಿ ಬಗ್ಗೆ ನೆಟ್ಟಿಗರು, ಉರ್ಫಿ ಸಾಯಬೇಕು ಎನ್ನುವ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ, ಜನರು ನಾನು ಸಾಯಬೇಕೆಂದು ಬಯಸುತ್ತಾರೆ ಎನ್ನುವುದು ನನಗೆ ಗೊತ್ತು. ಯಾರ ಕೊಲೆಗೂ ಸಾವಿಗೂ ನನಗೆ ಸಂಬಂಧವಿಲ್ಲ. ಆ ಕಾಮೆಂಟ್ ನನಗೆ ತುಂಬಾ ನೋವಾಗಿತ್ತು ಎಂದಿದ್ದಾರೆ.
ಅರೆಬರೆ ಬಟ್ಟೆ ತೊಟ್ಟು ಸದಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ.
ನಟಿ ಉರ್ಫಿ ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಒಟಿಟಿ ಮೂಲಕ ಮತ್ತಷ್ಟು ಪ್ರಖ್ಯಾತಿಗಳಿಸಿದರು. ಬಿಗ್ ಬಾಸ್ ಬಳಿಕ ಉರ್ಫಿ ಮತ್ತೆ ಯಾವದೇ ಶೋ ಅಥವಾ ಸಿನಿಮಾಗಳಲ್ಲಿ ನಟಿಲ್ಲ. ಹಾಗಾಗಿ ಉರ್ಫಿಯ ಮುಂದಿನ ಯೋಜನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.