- Home
- Entertainment
- Cine World
- Urfi Javed Latest Look: ಬಟ್ಟೆಗಿಂತ ತೂತುಗಳೇ ಹೆಚ್ಚು, ಚಳಿಯಾಗಲ್ವಾ ಎಂದ ನೆಟ್ಟಿಗರು
Urfi Javed Latest Look: ಬಟ್ಟೆಗಿಂತ ತೂತುಗಳೇ ಹೆಚ್ಚು, ಚಳಿಯಾಗಲ್ವಾ ಎಂದ ನೆಟ್ಟಿಗರು
ಉರ್ಫಿ ಜಾವೇದ್ ಸ್ಟೈಲ್ ಎಲ್ಲರಿಗೂ ಗೊತ್ತು. ಫ್ಯಾಷನ್ ಅಂತ ನಟಿ ಧರಿಸೋ ವಿಚಿತ್ರ ಬಟ್ಟೆಗಳು ಅವರಿಗಿಂತಲೂ ಸೂಪರ್ ಫೇಮಸ್. ಈ ಬಾರಿ ನಟಿ ಚೂಸ್ ಮಾಡಿದ್ದು ಡ್ರೆಸ್ ಮಾತ್ರವಲ್ಲ ಜೊತೆಗೆ ಉದ್ದನೆ ಜೆಡೆಯೂ ಇದೆ

ಉರ್ಫಿ ಜಾವೇದ್ ಫ್ಯಾಷನ್ ಬಗ್ಗೆ ಹೇಳುವುದೇ ಬೇಕಾಗಿಲ್ಲ. ಸದ್ಯ ಎಲ್ಲರಿಗೂ ಚಿರಪರಿಚಿತ. ತಮ್ಮ ಡ್ರೆಸ್‌ನಿಂದಲೇ ಭಾರೀ ಫೇಮಸ್ ಆದರು ಉರ್ಫಿ. ಬಹುಶಃ ನಟನೆಯಿಂದಲೂ ಅವರು ಇಷ್ಟು ರೀಚ್ ಆಗೋದು ಇಷ್ಟು ಬೇಗ ಸಾಧ್ಯವಿರಲಿಲ್ಲ. ಆದರೆ ಅವರ ಡ್ರೆಸ್ & ಫ್ಯಾಷನ್ ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಲೇ ಇದೆ.
ಟಿವಿ ಪರದೆಯ ಮೇಲೆ ಪ್ರೇಕ್ಷಕರನ್ನು ಆಕರ್ಷಿಸುವುದರ ಜೊತೆಗೆ ನಟಿ ಉರ್ಫಿ ಜಾವೇದ್(Urfi Javed) ಅವರು ತಮ್ಮ ಆಕರ್ಷಕ ನೋಟದಿಂದ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ, ಕಪ್ಪು ಕಟ್-ಔಟ್ ಬಾಡಿಕಾನ್ ಡ್ರೆಸ್‌ನಲ್ಲಿ ನಟಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಡಿಸೆಂಬರ್ 22 ರಂದು ಬಿಗ್ ಬಾಸ್ OTT ಸ್ಟಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ದುರದೃಷ್ಟವಶಾತ್ ಆಕೆಯ ಇತ್ತೀಚಿನ ಸ್ಟೈಲ್ ಎಲ್ಲೆಡೆ ವೈರಲ್ ಆಗಿದೆ. ಉದ್ದನೆ ಜೆಡೆಯೂ ಸೇರಿಕೊಂಡಿದೆ.
ನಟಿ ಲ್ಯಾವೆಂಡರ್ ಕಲರ್ ಪ್ಯಾಂಟ್-ಸೂಟ್ ಅನ್ನು ಆರಿಸಿಕೊಂಡಿದ್ದಾರೆ. ಅದು ಕಟ್-ಔಟ್ ಅನ್ನು ಡ್ರೆಸ್ ಆಗಿದ್ದು ನ್ಯೂಡ್ ಲಿಪ್ಸ್, ಉದ್ದವಾದ ಪೋನಿಟೇಲ್ ನಟಿಯ ಲುಕ್ ಕಂಪ್ಲೀಟ್ ಮಾಡಿದೆ.
ವಿಡಿಯೋ ನೋಡಿ ಕಮೆಂಟ್ ಮಾಡಿದ ಜನರು ಅಲ್ಲಾ ನಿಮಗೆ ಚಳಿ ಆಗಲ್ವಾ ? ಇದೆಂಥಾ ಫ್ಯಾಷನ್ ಎಂದು ಕಾಲೆಳೆದಿದ್ದಾರೆ. ಈ ಬಾರಿಯೂ ನಟಿ ಟ್ರೋಲ್ ಆಗೋದು ತಪ್ಪಿಲ್ಲ ನೋಡಿ