ತೆಲುಗು ಬರಲ್ಲ ಅಂತ ಅತ್ತೆ-ಮಾವ ಒತ್ತಾಯ ಹಾಕಿಲ್ಲ: ಉಪಾಸನಾ ಕೊನಿಡೆಲಾ
ತೆಲುಗು ಭಾಷೆ ಬರಲ್ಲ ಅಂತ ಕೊನಿಡೆಲಾ ಫ್ಯಾಮಿಲಿ ಒತ್ತಾಯ ಹಾಕಿಲ್ಲ ಎಂದ ಉಪಾಸನಾ. ಉರ್ದು ಭಾಷೆ ಸ್ವಲ್ಪ ಸ್ವಲ್ಪ ಬರುತ್ತಂತೆ.
ನನ್ನ ತಾತ ಫ್ಯಾಮಿಲಿ ಇದ್ದಿದ್ದು ದೂಮಕೊಂಡದಲ್ಲಿ. ಆ ಊರಿನ ಜನರು ಹೆಚ್ಚಿಗೆ ಉರ್ದು ಮಾತನಾಡುತ್ತಾರೆ. ನನ್ನ ತಂದೆ ಅಲ್ಲೇ ಓದಿ ಬೆಳೆದ ಕಾರಣ ಅವರು ಸುಲಭವಾಗಿ ಉರ್ದು ಮಾತನಾಡುತ್ತಾರೆ.
ನನ್ನ ಅಜ್ಜಿ ಸಿಕಂದರ್‌ಬಾದ್‌ನವರು..ಆ ಕಾಲದಲ್ಲಿ ಕಾನ್ವೆಂಟ್‌ನಲ್ಲಿ ಓದಿದ್ದ ಕಾರಣ ಇಂಗ್ಲಿಷ್ ಹೆಚ್ಚಿಗೆ ಬಳಸುತ್ತಿದ್ವಿ. ಹೀಗಾಗಿ ಮನೆಯಲ್ಲಿ ತೆಲುಗು ಮಾತನಾಡಲು ಅವಕಾಶ ಇರಲಿಲ್ಲ.
ನನ್ನ ತಾಯಿ ಚೆನ್ನೈನವರು. ನಾವು ಅಲ್ಲಿ ತಮಿಳು ಮಾತನಾಡುತ್ತಿದ್ವಿ. ಹೀಗಾಗಿ ನನ್ನ ಸುತ್ತು ತೆಲುಗು ಮಾತನಾಡುತ್ತಿದ್ದವರು ಹೆಚ್ಚು. ಸ್ಕೂಲ್ ಕಾಲೇಜ್‌ನಲ್ಲಿ ಹಿಂದಿ ಮಾತನಾಡಿ ಕಲಿಯುತ್ತಿದ್ದೆ.
ಹಿಂದಿ ಮತ್ತು ತೆಲುಗು ಸಿನಿಮಾ ನೋಡುತ್ತಿದ್ದೆ. ಬಾಲಿವುಡ್ ಸಿನಿಮಾಗಳು ತುಂಬಾ ಇಷ್ಟ ಆಗುತ್ತದೆ. ಮೆಗಾ ಸ್ಟಾರ್ ಕುಟುಂಬಕ್ಕೆ ಸೇರುವ ಮುನ್ನವೇ ತೆಲುಗು ಸಿನಿಮಾ ನೋಡುತ್ತಿದ್ದೆ.
ದೂರದರ್ಶನ್ ಎರಡು ಸಿನಿಮಾ ಬರುತ್ತಿತ್ತು. ಅಜ್ಜಿ ಜೊತೆ ಕುಳಿತುಕೊಂಡು ಹಿಂದಿ ಮತ್ತು ತೆಲುಗು ಸಿನಿಮಾ ನೋಡಿರುವ ನೆನಪಿದೆ. ತೆಲುಗು ಅರ್ಥ ಆಗುತ್ತಿತ್ತು ಎಂದು ಖಾಸಗಿ ತೆಲುಗು ಸಂದರ್ಶನದಲ್ಲಿ ಉಪಾಸನಾ ಹೇಳಿದ್ದಾರೆ.
ನನ್ನ ಅತ್ತೆ ಮಾವ ಯಾವತ್ತೂ ಭಾಷೆ ಕಲಿಯಬೇಕು ಹೀಗೆ ಇರಬೇಕು ಅನ್ನೋ ಒತ್ತಾಯ ಹಾಕಲಿಲ್ಲ. ದಿನ ಕಳೆಯುತ್ತಿದ್ದಂತೆ ನಾನು ತೆಲುಗು ಮಾತನಾಡಲು ಶುರು ಮಾಡಿದೆ.