ದೀಪಿಕಾ ರಣವೀರ್ ಮದುವೆಯ ಅನ್‌ಸೀನ್ ಫೋಟೋಸ್ ವೈರಲ್!
ಸಂಜಯ್ ಲೀಲಾ ಬನ್ಸಾಲಿಯ ರಾಮ್ ಲೀಲಾ ಶೂಟಿಂಗ್ ಸಮಯದಲ್ಲಿ ಪ್ರೀತಿಯಲ್ಲಿ ಸಿಲುಕಿದರು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್. ಕೆಲವು ವರ್ಷಗಳ ಕಾಲ ಡೇಟ್ ಮಾಡಿದ ನಂತರ ಈ ಜೋಡಿ ಇಟಲಿಯ ಲೇಕ್ ಕೋಮೋದಲ್ಲಿ ವಿವಾಹವಾದರು. ಬಾಲಿವುಡ್‌ನ ಮೊಸ್ಟ್ ಫೇವರೇಟ್ ಕಪಲ್‌ಗಳಾದ ಇವರ ಮದುವೆಯ ಕೆಲವು ಫೋಟೋಗಳು ಈ ನಡುವೆ ಸಖತ್ ವೈರಲ್ ಆಗಿದೆ. ಇಲ್ಲಿವೆ ನೋಡಿ ದೀಪಿಕಾ ರಣವೀರ್ ಮದುವೆಯ ಅನ್‌ಸೀನ್ ಫೋಟೋಗಳು.
2018ರ ನವೆಂಬರ್ 14 ರಂದು ಇಟಲಿಯ ಲೇಕ್ ಕೋಮೋದಲ್ಲಿ ಸಪ್ತಪದಿ ತುಳಿದ ದೀಪಿಕಾ ರಣವೀರ್.
ಇದು ಬಾಲಿವುಡ್‌ನ ಬಹುನಿರೀಕ್ಷಿತ ವಿವಾಹವಾಗಿತ್ತು.
ಬೆಂಗಳೂರಿನ ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನೂ ಹಮ್ಮಿಕೊಂಡಿದ್ದರು.
ಈ ಜೋಡಿ ಸೆಲೆಬ್ರಿಟಿಗಳ ವಿವಾಹದ ಕಲ್ಪನೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋದರು.
ಇಟಲಿಯಲ್ಲಿ ನೆಡೆದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಕೆಲವೇ ಆಯ್ದ ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಈ ಜೋಡಿ ಎರಡು ರೀತಿಯ ಮದುವೆಯ ವಿಧಿಗಳನ್ನು ಆಚರಿಸಿದ್ದರು. ಆನಂದ್ ಕರಾಜ್ ಮತ್ತು ಮಂಗಳೂರು ಶೈಲಿಯ ವಿವಾಹ.
ಮಂಗಳೂರು ಪದ್ದತಿಯ ವಿವಾಹ ಆಚರಣೆಯಲ್ಲಿ ದೀಪಿಕಾ ರಣವೀರ್.
ಮದುವೆಯ ಕೆಲವು ಫೋಟೋಗಳು ಈ ನಡುವೆ ಸಖತ್ ವೈರಲ್ ಆಗಿದೆ.