Lakshmi Manchu Pregnancy: ಸರೋಗೆಸಿ ಮೂಲಕ ಮಗು ಪಡೆದ ಮೊದಲ ತಮಿಳು ನಟಿ!
ನಟಿ, ನಿರೂಪಕಿಯಾಗಿ ಲಕ್ಷ್ಮಿ ಮಂಚು ಅವರನ್ನು ಬಹುತೇಕರು ಇಷ್ಟ ಪಡುತ್ತಾರೆ. ಹೀಗಾಗಿ ಅವರ ವೈಯಕ್ತಿ ಜೀವನದ ಬಗ್ಗೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ನಿಮಗೆ ಗೊತ್ತಿರದ ಲಕ್ಷ್ಮಿ ಲೈಫ್ ಸ್ಟೋರಿ....

ನಟ ಮೋಹನ್ ಬಾಬು ಮತ್ತು ವಿದ್ಯಾ ದೇವಿ ಏಕೈಕ ಪುತ್ರಿ ಲಕ್ಷ್ಮಿ ಮಂಚು ಹುಟ್ಟಿದ್ದು ಅಕ್ಟೋಬರ್ 8, 1970ರಲ್ಲಿ. ಬಾಲ್ಯದಿಂದಲೂ ಲಕ್ಷ್ಮಿ ತುಂಬಾನೇ ಡೇರಿಂಗ್.
ಹೈದರಾಬಾದ್‌ನ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಓದುವಾದ ಸ್ನೇಹಿತನನ್ನೇ ಪ್ರೀತಿಸಿ ಮದುವೆಯಾದರು. ಕೆಲವೊಂದು ಕಾರಣಗಳಿಂದ ಮದುವೆ ಆದ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡರು.
ನಟನೆಯಲ್ಲಿ ತರಬೇತಿ ಪಡೆಯಬೇಕೆಂದು ಅಮೆರಿಕಗೆ ಹಾರಿದ ಲಕ್ಷ್ಮಿ, ಅಲ್ಲಿನ ಎನ್‌ಆರ್‌ಐ ಶ್ರೀನಿವಾಸನ್ ಅವರನ್ನು ಪ್ರೀತಿಸಿ, ಎರಡನೇ ಸಲ ಮದುವೆಯಾದರು.
ತಮಿಳು ಚಿತ್ರರಂಗದಲ್ಲಿ Surrogacy ಮೂಲಕ ಮಗು ಪಡೆದುಕೊಂಡ ಮೊದಲ ನಟಿಯೇ ಲಕ್ಷ್ಮಿ ಮಂಚು. ಆರೋಗ್ಯ ಸಮಸ್ಯೆಗಳಿಂದ ಮಗು ಮಾಡಿಕೊಳ್ಳಲಾಗದೇ ಕಷ್ಟ ಅನುಭವಿಸುತ್ತಿದ್ದವರಿಗೆ ಲಕ್ಷ್ಮಿ ಮಾದರಿ ಆದರು.
ಕಿರುತೆರೆ ರಿಯಾಲಿಟಿ ಶೋಗಳ ಜೊತೆ ತಂದೆ ನಿರ್ಮಾಣ ಮಾಡಿದ ಸಿನಿಮಾಗಳಲ್ಲಿ ಲಕ್ಷ್ಮಿ ನಟಿಸಿದ್ದರು. ಆಂಧ್ರ ಪ್ರದೇಶ ಸರ್ಕಾರ ಇವರಿಗೆ ಪ್ರತಿಷ್ಠಿತ ನಂದಿ ಅವಾರ್ಡ್ ನೀಡಿ ಗೌರವಿಸಿದೆ.
ಸ್ವಂತ ಕಾಲಿನ ಮೇಲಿ ನಿಲ್ಲಬೇಕು ಎಂದು ನಿರ್ಮಾಣ ಸಂಸ್ಥೆ ತೆರೆದಿದ್ದರು. ಮಂಚು ಎಂಟರ್ಟೈನ್‌ಮೆಂಟ್ಸ್ ಮೂಲಕ ದೊಂಗಾಟ,ಗುಂಡೆಳೋ ಗೋದಾವರಿ ಸೇರಿ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ರಿಯಾಲಿಟಿ ಶೋ ಮೂಲಕ ಬರುವ ಹಣವನ್ನು ಅನೇಕ ಸಮಾಜ ಮುಖಿ ಕಾರ್ಯಗಳಿಗೆ ದಾನ ಮಾಡುತ್ತಾರೆ. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಟಿಯರಲ್ಲಿ ಲಕ್ಷ್ಮಿ ಒಬ್ಬರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.