ತ್ರಿಷಾ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ಕಥೆ ಕೇಳಿ 5 ತೊಲ ಬಂಗಾರ ಕೊಟ್ಟ ನಿರ್ಮಾಪಕ
ತ್ರಿಷಾ ಅವರ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್ ಬರಲಿದೆ. ಕಥೆ ಕೇಳಿದ ನಿರ್ಮಾಪಕರು ನಿರ್ದೇಶಕರಿಗೆ ತಕ್ಷಣವೇ 5 ತೊಲ ಬಂಗಾರ ನೀಡಿದ್ದಾರಂತೆ.

ನಿರ್ದೇಶಕ ಪ್ರೇಮ್ ಕುಮಾರ್ ನಿರ್ದೇಶನದಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ಒಟ್ಟಿಗೆ ನಟಿಸಿದ 96 ಚಿತ್ರ 2018 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸಿತು. ಕಲೆಕ್ಷನ್ ವಿಚಾರದಲ್ಲೂ ಭರ್ಜರಿ ಯಶಸ್ಸು ಕಂಡಿತು.
96 ಚಿತ್ರದ ನಟ-ನಟಿಯರು ಮತ್ತು ತಂತ್ರಜ್ಞರು
ಈ ಸಿನಿಮಾದಲ್ಲಿ ಗೌರಿ ಜಿ ಕಿಶನ್, ದೇವದರ್ಶಿನಿ, ನಿಯತಿ ಕದಂಬಿ, ಜನಕರಾಜ್, ಭಗವತಿ ಪೆರುಮಾಳ್, ರಮೇಶ್ ತಿಲಕ್ ಮುಂತಾದವರು ನಟಿಸಿದ್ದಾರೆ. ಗೋವಿಂದ್ ವಸಂತ ಸಂಗೀತ ನೀಡಿದ್ದಾರೆ. ಮದ್ರಾಸ್ ಎಂಟರ್‌ಪ್ರೈಸಸ್ ಸಂಸ್ಥೆ ನಿರ್ಮಿಸಿದೆ.
96 ಸೆಕೆಂಡ್ ಪಾರ್ಟ್ ಲವ್ ಸ್ಟೋರಿ ಅಲ್ಲ
ಈಗ 7 ವರ್ಷಗಳ ನಂತರ ನಿರ್ದೇಶಕ ಪ್ರೇಮ್ ಕುಮಾರ್ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಸಿದ್ಧರಾಗಿದ್ದಾರೆ. ಆದರೆ, ಮೊದಲ ಭಾಗದಂತೆ ಈ ಸಿನಿಮಾ ಪ್ರೇಮಕಥೆಯಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಈ ಸಿನಿಮಾವನ್ನು ಐಸರಿ ಗಣೇಶ್ ವೇಲ್ಸ್ ಸಂಸ್ಥೆ ನಿರ್ಮಿಸಲಿದೆ ಎನ್ನಲಾಗುತ್ತಿದೆ.
ಐಸರಿ ಕೆ. ಗಣೇಶ್ ಗೋಲ್ಡ್ ಗಿಫ್ಟ್
96 ಸಿನಿಮಾ ಎರಡನೇ ಭಾಗದ ಕಥೆ ಕೇಳಿದ ನಿರ್ಮಾಪಕ ಐಸರಿ ಗಣೇಶ್, ಕಥೆ ಕೇಳಿದ ಮರುದಿನವೇ ನಿರ್ದೇಶಕರನ್ನು ಕರೆದು 5 ತೊಲ ಬಂಗಾರದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ತಮ್ಮ ಸಿನಿ ಜೀವನದಲ್ಲಿ ಇಂತಹ ಕಥೆಯನ್ನು ಕೇಳಿಲ್ಲ, ಈ ಸಿನಿಮಾ ಹಿಟ್ ಆಗುತ್ತದೆ ಎಂದು ಹೇಳಿದ್ದಾರಂತೆ. ಡೈರೆಕ್ಟರ್ ಪ್ರೇಮ್ ಕುಮಾರ್ 96 ಸಿನಿಮಾ ಜೊತೆಗೆ, ಜಾನು ಎಂಬ ತೆಲುಗು ಸಿನಿಮಾ (96 ರಿಮೇಕ್), ಮೆಯ್ಯಜಗನ್ ಸಿನಿಮಾವನ್ನು ಸಹ ಡೈರೆಕ್ಟ್ ಮಾಡಿದ್ದಾರೆ. ಮೆಯ್ಯಜಗನ್ ಸಿನಿಮಾ ದೊಡ್ಡ ಮಟ್ಟದಲ್ಲಿ ರೀಚ್ ಆಗದಿದ್ದರೂ, ಮಿಕ್ಸೆಡ್ ರಿವ್ಯೂಸ್ ಪಡೆದುಕೊಂಡಿದೆ.
96 ಮೂವಿ 2nd ಪಾರ್ಟ್
96 ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದ್ದು, ಮೊದಲ ಭಾಗದಲ್ಲಿ ನಾಯಕನಾಗಿ ನಟಿಸಿದ್ದ ವಿಜಯ್ ಸೇತುಪತಿ ಈ ಸಿನಿಮಾದಲ್ಲೂ ನಟಿಸುತ್ತಾರಾ? ಈ ವಿಷಯದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ.
ಕನ್ನಡದಲ್ಲಿ 99 ಆಗಿ ಚಿತ್ರ ರಿಮೇಕ್ ಆಗಿತ್ತು. ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನಾ ನಟಿಸಿದ್ದರು. ರಾಮು ಸಿನಿಮಾಕ್ಕೆ ಬಂಡವಾಳ ಹಾಕಿದ್ದರು. ಪ್ರೀತಂ ಗುಬ್ಬಿ ಆಕ್ಷನ್ ಕಟ್ ಹೇಳಿದ್ದರು.