ಅಪ್ಪು ಜೊತೆಗೆ ಪವರ್ ಶೇರ್ ಮಾಡಿದ್ದ ನಟಿ ತ್ರಿಶಾ ಕೃಷ್ಣನ್ ಆಸ್ತಿ ಎಷ್ಟಿದೆ ಗೊತ್ತಾ?
ದಕ್ಷಿಣ ಭಾರತ ಚಿತ್ರರಂಗವನ್ನು ಕಳೆದ ಎರಡು ದಶಕಗಳಿಂದ ಆಳುತ್ತಿರುವ ನಟಿಯರ ಪೈಕಿ ತ್ರಿಷಾ ಮುಂಚೂಣಿಯಲ್ಲಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸಿದ ನಟಿ ತ್ರಿಷಾಗೆ ಇದೀಗ 42 ವರ್ಷ. ಆದರೂ ಗ್ಲಾಮರ್ ಕಳೆದುಕೊಳ್ಳದೇ ಬೇಡಿಕೆ ಉಳಿಸಿಕೊಂಡಿರುವ ನಟಿಯ ಆಸ್ತಿ ಮೌಲ್ಯ, ದುಬಾರಿ, ಕಾರು, ಬಂಗಲೆಗಳು ಎಷ್ಟಿವೆ ಗೊತ್ತಾ? ಇಲ್ಲಿದೆ ಒಮ್ಮೆ ನೋಡಿ..

ಸಿನಿಮಾಗಳಲ್ಲಿ ಹೀರೋಗಳಂತೆ ನಟಿಯರು ಹೆಚ್ಚು ಕಾಲ ಉಳಿಯಬಹುದೇ ಎಂಬ ಚರ್ಚೆ ಬರುವಾಗಲೆಲ್ಲಾ, ನಟಿ ತ್ರಿಷಾ ಅವರನ್ನು ಕಣ್ಣಮುಂದೆ ನಿಲ್ಲಿಸಿ ನೋಡಬಹುದು. ಸುಮಾರು 25 ವರ್ಷಗಳಿಂದ ಸಿನಿಮಾದಲ್ಲಿ ಕಾಲಿವುಡ್ ಕ್ವೀನ್ ಆಗಿ ತ್ರಿಷಾ ಮೆರೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ಕಾಲಿಡುವುದಿಲ್ಲ ಎಂದು ತನ್ನ ಕಾಲೇಜು ದಿನಗಳಲ್ಲಿ ಹೇಳಿದ್ದ ತ್ರಿಷಾ, ಇಂದು ತಮಿಳು ಸಿನಿಮಾದಲ್ಲಿ ಐಕಾನ್ ಆಗಿ ಮೆರೆಯುತ್ತಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗವನ್ನು ಕಳೆದ ಎರಡು ದಶಕಗಳಿಂದ ಆಳುತ್ತಿರುವ ನಟಿಯರ ಪೈಕಿ ತ್ರಿಷಾ ಮುಂಚೂಣಿಯಲ್ಲಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ನಟಿಸಿದ ನಟಿ ತ್ರಿಷಾಗೆ ಇದೀಗ 42 ವರ್ಷ. ಆದರೂ ಗ್ಲಾಮರ್ ಕಳೆದುಕೊಳ್ಳದೇ ಬೇಡಿಕೆ ಉಳಿಸಿಕೊಂಡಿರುವ ನಟಿಯ ಆಸ್ತಿ ಮೌಲ್ಯ, ದುಬಾರಿ, ಕಾರು, ಬಂಗಲೆಗಳು ಎಷ್ಟಿವೆ ಗೊತ್ತಾ? ಇಲ್ಲಿದೆ ಒಮ್ಮೆ ನೋಡಿ..
ಮಾಡೆಲಿಂಗ್‌ನಲ್ಲಿ ಸಾಧನೆ ಮಾಡಿದ ತ್ರಿಷಾ
ಕೃಷ್ಣನ್ - ಉಮಾ ದಂಪತಿಗಳ ಒಬ್ಬಳೇ ಮಗಳು ತ್ರಿಷಾ, 1983ರ ಮೇ 4ರಂದು ಚೆನ್ನೈನಲ್ಲಿ ಜನಿಸಿದರು. ಚೆನ್ನೈನ ಚರ್ಚ್ ಪಾರ್ಕ್‌ನಲ್ಲಿರುವ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ತ್ರಿಷಾ, ಚೆನ್ನೈನ ಎಥಿರಾಜ್ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದರು. ಶಾಲಾ ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು ತ್ರಿಷಾ. ಬಳಿಕ 1999ರಲ್ಲಿ ಮಿಸ್ ಸೇಲಂ, ಮಿಸ್ ಮದ್ರಾಸ್ ಪ್ರಶಸ್ತಿಗಳನ್ನು ಗೆದ್ದರು.
ತ್ರಿಷಾ ಮೊದಲ ಚಿತ್ರ
ಒಂದು ಆಭರಣದ ಅಂಗಡಿಯ ಜಾಹೀರಾತಿನ ಮೂಲಕ ತ್ರಿಷಾ ಅವರಿಗೆ ಮೊದಲ ಚಿತ್ರದ ಅವಕಾಶ ಸಿಕ್ಕಿತು. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಅದೇ ಆಭರಣದ ಅಂಗಡಿಯ ಜಾಹೀರಾತಿನಲ್ಲಿ ತ್ರಿಷಾ ಅವರ ಸ್ನೇಹಿತೆಯಾಗಿ ಸಮಂತಾ ನಟಿಸಿದ್ದರು. ತನ್ನ ಜೀವನದಲ್ಲಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳುತ್ತಿದ್ದ ತ್ರಿಷಾ, ನಟಿ ಸಿಮ್ರನ್ ಅವರ ಸ್ನೇಹಿತೆಯಾಗಿ ಜೋಡಿ ಚಿತ್ರದ ಮೂಲಕ ಮೊದಲ ಬಾರಿಗೆ ನಟಿಯಾಗಿ ಪರಿಚಯವಾದರು.
ಮೌನಂ ಪೇಸಿಯದೆ ನಾಯಕಿ ತ್ರಿಷಾ:
ಈ ಒಂದು ಸಿನಿಮಾ ಮೂಲಕ ತ್ರಿಷಾಳನ್ನು ಬಹುಬೇಗನೇ ತಮಿಳು ಸಿನಿಮಾ ತನ್ನತ್ತ ಸೆಳೆದುಕೊಂಡಿತು. ನಂತರ ಲೇಸಾ ಲೇಸಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಂದ ಮಾಡಿಕೊಂಡರು. ಆದರೆ ಅದಕ್ಕೂ ಮೊದಲು ಮೌನಂ ಪೇಸಿಯದೆ ಬಿಡುಗಡೆಯಾದ್ದರಿಂದ, ಅದು ಅವರ ಚೊಚ್ಚಲ ಚಿತ್ರವಾಯಿತು. ಆ ಚಿತ್ರದಲ್ಲಿ ಯಾವುದೇ ಆಡಂಬರವಿಲ್ಲದೆ, ನಗರಗಳಲ್ಲಿರುವ ಸಾಮಾನ್ಯ ಹುಡುಗಿಯ ಛಾಯೆಯನ್ನು ಪರದೆಯ ಮೇಲೆ ತಂದರು ತ್ರಿಷಾ. ಆ ಚಿತ್ರದಲ್ಲಿ ಬರುವ 'ತನಿಯಾವಾ... ಪೇಸಲಾಮೇ' ಎಂದು ತ್ರಿಷಾ ಹೇಳುವ ಸಂಭಾಷಣೆ ಇಂದಿಗೂ ಪ್ರಸಿದ್ಧವಾಗಿದೆ.
ತಿರುವು ನೀಡಿದ ಘಿಲ್ಲಿ:
ತ್ರಿಷಾಳನ್ನು ತಮಿಳು ಸಿನಿಮಾ ಮತ್ತು ಅಭಿಮಾನಿಗಳು ಹೆಚ್ಚು ಗಮನಿಸುವಂತೆ ಮಾಡಿದ ಚಿತ್ರ ಸಾಮಿ. ಅದರಲ್ಲಿ ಹಾಸ್ಯ, ಪ್ರಣಯ ಹೀಗೆ ಎಲ್ಲಾ ರೀತಿಯ ನಟನೆಯನ್ನೂ ಭುವನಾ ಪಾತ್ರದಲ್ಲಿ ಅಡಿ ಇಟ್ಟಿದ್ದರು ತ್ರಿಷಾ. ಅದಕ್ಕೆ ಅಲೈ, ಎನಕ್ಕು 20 ಉನಕ್ಕು 18, ಸಮ್‌ಥಿಂಗ್ ಸಮ್‌ಥಿಂಗ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ ಇವರು ಬೇರೆ ಭಾಷೆಯ ಚಿತ್ರಗಳಲ್ಲೂ ಕಾಲಿಟ್ಟರು. ತ್ರಿಷಾ ಅವರ ಸಿನಿಮಾ ಜೀವನದಲ್ಲಿ ಮಹತ್ವದ ತಿರುವು ನೀಡಿದ ಚಿತ್ರ ಘಿಲ್ಲಿ.
ವಿಜಯ್ - ತ್ರಿಷಾ ಜೋಡಿ:
ಘಿಲ್ಲಿ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿ ಧನಲಕ್ಷ್ಮಿಯಾಗಿ ತ್ರಿಷಾ ಪಾತ್ರ ಮಾಡಿದ್ದರು. ಇದರಲ್ಲಿ ಪ್ರಣಯ ದೃಶ್ಯಗಳು, ಪ್ರಕಾಶ್ ರೈ ಜೊತೆಗಿನ ದೃಶ್ಯಗಳು ಹೀಗೆ ಎಲ್ಲದರಲ್ಲೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಘಿಲ್ಲಿ ಚಿತ್ರ ವಿಜಯ್, ಪ್ರಕಾಶ್ ರೈ ಅವರನ್ನು ಎಷ್ಟು ಗಮನ ಸೆಳೆಯಿತೋ, ಅಷ್ಟೇ ತ್ರಿಷಾ ಅವರನ್ನೂ ಗಮನ ಸೆಳೆಯಿತು. ನಂತರ ವಿಜಯ್ ಜೊತೆ ತಿರುಪಾಚಿ, ಆದಿ, ಗುರುವಿ, ಲಿಯೋ ಸೇರಿದಂತೆ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದರು.
ಅಜಿತ್ - ತ್ರಿಷಾ ಕಾಂಬಿನೇಷನ್:
ದಳಪತಿ ವಿಜಯ್ ಒಂದು ಕಡೆಯಾದರೆ, ತಲ ಅಜಿತ್ ಜೊತೆಯೂ ಜೋಡಿಯಾಗಿ ತ್ರಿಷಾ ನಟಿಸಿದರು. ಕ್ರೀಡಂ, ಮಂಕಾಥಾ, ಎನ್ನೈ ಅರಿಂದಾಲ್, ವಿಡಾಮುಯರ್ಚಿ, ಗುಡ್ ಬ್ಯಾಡ್ ಅಗ್ಲಿ ಚಿತ್ರಗಳಲ್ಲಿ ಅಜಿತ್ ಜೊತೆ ಜೋಡಿ ಸೇರಿ ಚಿತ್ರದ ಯಶಸ್ಸನ್ನು ಹಂಚಿಕೊಂಡರು. ಅಭಿಯುಂ ನಾನುಂ ಚಿತ್ರದಲ್ಲಿ ಮುದ್ದು ಮಗಳು ಅಭಿಯಾಗಿ, ಸಮ್‌ಥಿಂಗ್ ಸಮ್‌ಥಿಂಗ್ ಚಿತ್ರದಲ್ಲಿ ತಂಗಿ ಕವಿತಾಳಾಗಿ... ಭೀಮ ಚಿತ್ರದಲ್ಲಿ ಶಾಲಿನಿಯಾಗಿ... ಸರ್ವಂ ಚಿತ್ರದಲ್ಲಿ ಸಂಧ್ಯಾಳಾಗಿ... 96ರಲ್ಲಿ ಜಾನುವಾಗಿ... ಪೊನ್ನಿಯಿನ್ ಸೆಲ್ವನ್‌ನಲ್ಲಿ ಕುಂದವೈಯಾಗಿ ಹೀಗೆ ಎಲ್ಲಾ ಪಾತ್ರಗಳಲ್ಲೂ ತಮ್ಮ ನೈಜ ನಟನೆಯನ್ನು ಪ್ರದರ್ಶಿಸಿ ಅಭಿಮಾನಿಗಳ ಮನದಲ್ಲಿ ಸಿಂಹಾಸನವನ್ನೇರಿದ್ದಾರೆ.
ತ್ರಿಷಾ ಅವರ 42ನೇ ಹುಟ್ಟುಹಬ್ಬ:
ಕಮಲ್ ಹಾಸನ್, ಅಜಿತ್, ವಿಜಯ್ ಸೇರಿದಂತೆ ಹಲವು ನಟರ ಜೊತೆಯಾಗಿ ನಟಿಸಿದ ತ್ರಿಷಾ, ಹಲವು ವರ್ಷಗಳ ನಂತರ ಪೇಟ ಚಿತ್ರದ ಮೂಲಕ ರಜನಿಕಾಂತ್ ಜೊತೆ ನಟಿಸಿದರು. ಇನ್ನು ಚಿತ್ರರಂಗದ ಹೊರತಾಗಿ ನಟಿ ತ್ರಿಷಾ ಯೋಗ, ಸಾಕುಪ್ರಾಣಿಗಳು, ವಿದೇಶ ಪ್ರವಾಸ ಹೀಗೆ ಅವರಿಗೆ ಇಷ್ಟವಾದ ಅಂಶಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಾಡಿಗೆ ಮತ್ತು ಮೋಡಿಗೆ ಮಾತ್ರ ನಾಯಕಿಯರು ಎಂಬು ಗಡಿಯನ್ನು ಮುರಿದು, ಚಿತ್ರಕ್ಕೆ ಬಲವಾಗಿ ನಿಂತು ಇಂದಿಗೂ ಸಿನಿಮಾದಲ್ಲಿ ಮುಂಚೂಣಿಯಲ್ಲಿರುವ ನಟಿ ತ್ರಿಷಾ ಇಂದು ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ತ್ರಿಷಾ ಆಸ್ತಿ ಮೌಲ್ಯ:
ತಮಿಳು ಸಿನಿಮಾದ ಶ್ರೀಮಂತ ನಟಿಯರಲ್ಲಿ ಒಬ್ಬರಾದ ತ್ರಿಷಾ ಅವರ ಆಸ್ತಿ ಮೌಲ್ಯ 130 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಒಂದು ಚಿತ್ರಕ್ಕೆ 12 ಕೋಟಿ ರೂ.ವರೆಗೆ ಸಂಭಾವನೆ ಪಡೆಯುತ್ತಾರೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಅದರ ಮೌಲ್ಯ ಮಾತ್ರ 16 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಬೆಂಜ್, ಬಿಎಂಡಬ್ಲ್ಯು, ರೇಂಜ್ ರೋವರ್‌ನಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.