Trisha: ಕಾಲಿವುಡ್ ನಟಿ ತೃಷಾಗೆ ದುಬೈ ಗೋಲ್ಡನ್ ವೀಸಾ
ಗೋಲ್ಡನ್ ವೀಸಾ ಸ್ವೀಕರಿಸಿದ ಸೌತ್ ನಟಿ ತೃಷಾ(Trisha) ಕಾಲಿವುಡ್‌ನಲ್ಲಿ(Kollywood) ದುಬೈ(Dubai) ಗೋಲ್ಡನ್ ವೀಸಾ(Golden Visa) ಪಡೆದ ಮೊದಲ ಸ್ಟಾರ್

ಯುಎಇಯ ಗೋಲ್ಡನ್ ವೀಸಾ(Golden Visa) ಸಿಕ್ಕಿರುವುದಕ್ಕೆ ನಟಿ ತ್ರಿಶಾ ಸಂಭ್ರಮಿಸಿದ್ದಾರೆ. ಈ ಗೌರವ ಪಡೆದ ಮೊದಲ ತಮಿಳು ನಟಿ ತ್ರಿಷಾ(Trisha) ಎಂದು ವರದಿಯಾಗಿದೆ. ಗೋಲ್ಡನ್ ವೀಸಾ ಪಡೆದ ಮೊದಲ ತಮಿಳು ನಟಿ ಎಂಬುದಕ್ಕೆ ಸಂತೋಷವಿದೆ ಎಂದು ನಟ ಫೋಟೋ ಜೊತೆಗೆ ಬರೆದಿದ್ದಾರೆ. ಫೋಟೋದಲ್ಲಿ ತ್ರಿಷಾ ವೀಸಾ ಪಡೆಯುತ್ತಿರುವುದನ್ನು ಕಾಣಬಹುದು.
ತ್ರಿಶಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅವರ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ. ಕಾಲಿವುಡ್ ರಾಣಿ ಅಭಿನಂದನೆಗಳು, ಅಭಿನಂದನೆಗಳು. ನೀವು ಇದಕ್ಕೆ ಅರ್ಹರು ಎಂದು ಮತ್ತೊಬ್ಬ ಅಭಿಮಾನಿ ಕಮೆಂಟಿಸಿದ್ದಾರೆ.
ಇದುವರೆಗೆ ಹಲವಾರು ಸೆಲೆಬ್ರಿಟಿಗಳು ಗೋಲ್ಡನ್ ವೀಸಾ ಪಡೆದಿದ್ದಾರೆ. ಫರಾ ಖಾನ್, ಶಾರುಖ್ ಖಾನ್, ಬೋನಿ ಕಪೂರ್, ಅರ್ಜುನ್ ಕಪೂರ್, ಜಾಹ್ನವಿ ಕಪೂರ್, ನೇಹಾ ಕಕ್ಕರ್, ಅಮಲ್ ಮಲಿಕ್, ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಯುಎಇಯ ಗೋಲ್ಡನ್ ವೀಸಾ ಪಡೆದಿದ್ದಾರೆ.
ಯುಎಇ ಸರ್ಕಾರವು 2019 ರಲ್ಲಿ ಗೋಲ್ಡನ್ ವೀಸಾ ಪ್ರಾರಂಭಿಸಿದೆ. ಇದು ಹೂಡಿಕೆದಾರರು, ಉದ್ಯಮಿಗಳು, ವೃತ್ತಿಪರರು ಮತ್ತು ವಿಜ್ಞಾನ, ಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಪ್ರತಿಭೆಗಳು ಈ ವೀಸಾಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಗೋಲ್ಡನ್ ವೀಸಾಗಳನ್ನು ಐದು ಅಥವಾ ಹತ್ತುವರ್ಷಗಳವರೆಗೆ ನೀಡಲಾಗುತ್ತದೆ. ಇದನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.
ನಟಿ ತ್ರಿಷಾ ಪುನೀತ್ ಅವರು ಮಾಡಲಿದ್ದ ದ್ವಿತ್ವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಸಿನಿಮಾದ ಚಿತ್ರಕಥೆಯನ್ನೂ ನಟಿ ಕೇಳಿದ್ದರು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.