ದುಲ್ಖರ್ ಸಲ್ಮಾನ್‌ಗೆ ಯುಎಇ ಗೋಲ್ಡನ್ ವೀಸಾ, ಏನಿದರ ವಿಶೇಷ?

ಇತ್ತೀಚೆಗೆ ಮಲಯಾಳಂ ನಟ ದುಲ್ಖರ್ ಸಲ್ಮಾನ್‌ಗೆ, ಅದಕ್ಕೂ ಮೊದಲು ಮಮ್ಮುಟ್ಟಿ ಹಾಗೂ ಮೋಹನ್‌ಲಾಲ್‌ಗೆ ಅರಬ್ ದೇಶ ಯುಎಇ ತನ್ನ ಗೋಲ್ಡನ್ ವೀಸಾ ನೀಡಿದೆ. ಏನಿದರ ವಿಶೇಷ, ಯಾರ್ಯಾರು ಪಡೆದಿದ್ದಾರೆ?

 

 

Specialty of UAE golden visa that Mollywood actor Dulkhar Salman gets

ಭಾರತದ ಹಲವಾರು ಸೆಲೆಬ್ರಿಟಿಗಳು, ಉದ್ಯಮಿಗಳು, ಶ್ರೀಮಂತರು ಅರಬ್ ಕಂಟ್ರಿ ಯುಎಇಯ ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ. ಇದೊಂದು ವಿಶೇಷ ವೀಸಾ. ಇದು ಸಿಗಲೆಂದು ತುಂಬಾ ಮಂದಿ ಹಾತೊರೆಯುತ್ತಾರೆ. ಇದುವರೆಗೆ ಈ ವೀಸಾ ಪಡೆದವರ ಪಟ್ಟಿ ಇಲ್ಲಿದೆ ನೋಡಿ- ಬಾಲಿವುಡ್ ನಟರಾದ ಸಂಜಯ್ ದತ್, ಶಾರುಖ್ ಖಾನ್, ಬೋನಿ ಕಪೂರ್ ಮತ್ತು ಅವರ ಫ್ಯಾಮಿಲಿಯ ಎಲ್ಲ ಸದಸ್ಯರು, ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಆಕೆಯ ಗಂಡ ಶೋಯಿಬ್, ಮಲಯಾಳಂ ನಟರಾದ ಮೋಹನ್‌ಲಾಲ್, ಮಮ್ಮುಟ್ಟಿ ಮತ್ತು ಅವರ ಪುತ್ರ ದುಲ್ಖರ್ ಸಲ್ಮಾನ್, ಮತ್ತಿತರರು. ಇವರಲ್ಲದೆ ಇನ್ನೂ ಅನೇಕ ಶ್ರೀಮಂತ ಉದ್ಯಮಿಗಳು, ಯುಎಇಯಲ್ಲಿ ಉದ್ಯಮ ವಹಿವಾಟು ಹೊಂದಿದ ಭಾರತೀಯರಿಗೆ ಇದನ್ನು ಕೊಡಲಾಗಿದೆ.

ಹಾಗಾದರೆ, ಗೋಲ್ಡನ್ ವೀಸಾ ಏನು ನೀಡುತ್ತದೆ?
ಗೋಲ್ಡನ್ ವೀಸಾ ವ್ಯವಸ್ಥೆಯು ಮೂಲಭೂತವಾಗಿ ಈ ಕೆಳಗಿನ ಗುಂಪುಗಳಿಗೆ ಸೇರಿದ ಜನರಿಗೆ ಯುಎಇಯಲ್ಲಿ ದೀರ್ಘಾವಧಿಯ ವಾಸ್ತವ್ಯವನ್ನು (5 ಮತ್ತು 10 ವರ್ಷಗಳು) ನೀಡುತ್ತದೆ- ಬಂಡವಾಳ ಹೂಡಿದವರು, ಉದ್ಯಮಿಗಳು, ಅತ್ಯುತ್ತಮ ಪ್ರತಿಭೆ ಹೊಂದಿರುವ ವ್ಯಕ್ತಿಗಳು, ಸಂಶೋಧಕರು, ಡಾಕ್ಟರ್ಸ್ ಮತ್ತು ಸರ್ಜನ್ಸ್, ವಿಜ್ಞಾನಿಗಳು, ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು. ವೀಸಾದ ಮುಖ್ಯ ಪ್ರಯೋಜನವೆಂದರೆ ಭವಿಷ್ಯದ ಭದ್ರತೆ. ಗೋಲ್ಡನ್ ವೀಸಾ ಹೊಂದಿದವರು ಕನಿಷ್ಠ ಪಕ್ಷ ಹತ್ತು ವರ್ಷ ಯುಎಇಯಲ್ಲಿ ವಾಸಿಸಬಹುದು, ಆ ಅವಧಿಯನ್ನು ವಿಸ್ತರಿಸಬಹುದು. ಗೋಲ್ಡನ್ ವೀಸಾಕ್ಕೆ ನೀವೂ ಯುಎಇ ಸರಕಾರದ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ನೀವು ಯುಎಇ ಜೊತೆ ಉದ್ಯಮ, ವಹಿವಾಟು, ಜನಸಂಪರ್ಕ, ಇತ್ಯಾದಿ ಏನಾದರೂ ಸಂಬಂಧ ಹೊಂದಿರಬೇಕಾಗುತ್ತದೆ. ಈತ ತಮ್ಮ ದೇಶಕ್ಕೆ ಉಪಯುಕ್ತ ವ್ಯಕ್ತಿ ಹೌದೋ ಅಲ್ಲವೋ ಎಂದು ತೀರ್ಮಾನಿಸಿದ ಬಳಿಕ ಅಲಲ್ಇನ ಸರಕಾರ ವೀಸಾ ನೀಡುವ ಅಥವಾ ಬಿಡುವ ನಿರ್ಧಾರ ತೆಗೆದುಕೊಳ್ಳುತ್ತದೆ.

ಪೋರ್ನ್ ವಿಡಿಯೋ ಕೇಸ್: ಪತಿ ರಾಜ್ ವಿರುದ್ಧ ಶಿಲ್ಪಾ ಶೆಟ್ಟಿ ಸಾಕ್ಷಿ

10 ವರ್ಷದ ವೀಸಾಕ್ಕಾಗಿ, ಬಂಡವಾಳ ಹೂಡಿಕೆ ನಿಧಿ ಅಥವಾ ಕಂಪನಿಯ ರೂಪದಲ್ಲಿ 10 ಮಿಲಿಯನ್‌ ದಿರ್‌ಹಮ್‌ (ಯುಎಇ ಕರೆನ್ಸಿ)ಗಿಂತ ಹೆಚ್ಚು ಮೌಲ್ಯದ ಸಾರ್ವಜನಿಕ ಹೂಡಿಕೆಯನ್ನು ಹೊಂದಿರುವ ಹೂಡಿಕೆದಾರರು ಅರ್ಜಿ ಸಲ್ಲಿಸಬಹುದು. ಒಟ್ಟು ಹೂಡಿಕೆ ಬರೀ ರಿಯಲ್ ಎಸ್ಟೇಟ್ ರೂಪದಲ್ಲಿ ಇರಬಾರದು. ಹೂಡಿಕೆದಾರರು ಕನಿಷ್ಠ ಮೂರು ವರ್ಷಗಳವರೆಗೆ ಹೂಡಿಕೆಯನ್ನು ಉಳಿಸಿಕೊಳ್ಳಬೇಕು. 10 ವರ್ಷಗಳ ದೀರ್ಘಾವಧಿಯ ವೀಸಾವನ್ನು ವ್ಯಾಪಾರ ಪಾಲುದಾರರನ್ನು ಸೇರಿಸಲು ವಿಸ್ತರಿಸಬಹುದು. ದೀರ್ಘಾವಧಿಯ ವೀಸಾದಲ್ಲಿ ವೀಸಾಹೋಲ್ಡರ್‌ನ/ಳ ಸಂಗಾತಿ, ಮಕ್ಕಳು ಹಾಗೂ ಒಬ್ಬ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಒಬ್ಬ ಸಲಹೆಗಾರ ಕೂಡ ಸೇರಬಹುದು.
 

Specialty of UAE golden visa that Mollywood actor Dulkhar Salman gets

ಉದ್ಯಮಿಗಳಲ್ಲದೆ, ವಿಶೇಷ ಪ್ರತಿಭೆ ಹೊಂದಿರುವ ವ್ಯಕ್ತಿಗಳು ಸಹ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅವರಲ್ಲಿ ವೈದ್ಯರು, ಸಂಶೋಧಕರು, ವಿಜ್ಞಾನಿಗಳು, ಹೂಡಿಕೆದಾರರು ಮತ್ತು ಕಲಾವಿದರು ಸೇರಿದ್ದಾರೆ. ಈ ವ್ಯಕ್ತಿಗಳು ತಮ್ಮ ಇಲಾಖೆಗಳು ಮತ್ತು ಕ್ಷೇತ್ರಗಳಿಂದ ಮಾನ್ಯತೆ ಪಡೆದ ನಂತರ 10 ವರ್ಷಗಳ ವೀಸಾವನ್ನು ಪಡೆಯಬಹುದು. ಈ ವೀಸಾವನ್ನೂ ಅವರ ಸಂಗಾತಿ ಮತ್ತು ಮಕ್ಕಳಿಗೆ ವಿಸ್ತರಿಸಲಾಗುತ್ತದೆ.

ಐಶ್ವರ್ಯಾರ ದುರಭ್ಯಾಸದ ಸಿಕ್ರೇಟ್‌ ರೀವಿಲ್‌ ಮಾಡಿದ ಶ್ವೇತಾ ಬಚ್ಚನ್‌!

ಅಸಾಧಾರಣ ಪ್ರತಿಭೆಯ ಪ್ರೌಢಶಾಲೆ ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯುಎಇಯಲ್ಲಿ 5 ವರ್ಷಗಳ ರೆಸಿಡೆನ್ಸಿ ವೀಸಾಕ್ಕೆ ಅರ್ಹರಾಗಿರುತ್ತಾರೆ. ಜೊತೆಗೆ, ಯುಎಇಯಲ್ಲಿ ತಮ್ಮ ವ್ಯಾಪಾರವನ್ನು ಸ್ಥಾಪಿಸಲು ಬಯಸುವ ವಿದೇಶಿ ಪ್ರಜೆಗಳು ಗೋಲ್ಡನ್ ಬಿಸಿನೆಸ್ ವೀಸಾ ಯೋಜನೆಯ ಮೂಲಕ ಶಾಶ್ವತ ನಿವಾಸಕ್ಕೆ (5 ವರ್ಷಗಳು) ಅರ್ಜಿ ಸಲ್ಲಿಸಬಹುದು. ವಿಜ್ಞಾನಿಗಳಿಗೆ ಎಮಿರೇಟ್ಸ್ ವಿಜ್ಞಾನಿಗಳ ಮಂಡಳಿ ಅಥವಾ ವೈಜ್ಞಾನಿಕ ಶ್ರೇಷ್ಠತೆಗಾಗಿ ಮೊಹಮ್ಮದ್ ಬಿನ್ ರಶೀದ್ ಪದಕವನ್ನು ಹೊಂದಿರುವವರು ಮಾನ್ಯತೆ ನೀಡಬೇಕು, ಸಂಸ್ಕೃತಿ ಮತ್ತು ಕಲೆಯಲ್ಲಿ ಸೃಜನಶೀಲ ವ್ಯಕ್ತಿಗಳು ಸಂಸ್ಕೃತಿ ಮತ್ತು ಜ್ಞಾನ ಅಭಿವೃದ್ಧಿ ಸಚಿವಾಲಯದಿಂದ ಮಾನ್ಯತೆ ಪಡೆಯಬೇಕು. ಇವುಗಳ ಹೊರತಾಗಿ, ಅಸಾಧಾರಣ ಪ್ರತಿಭೆಗಳನ್ನು ಪೇಟೆಂಟ್‌ಗಳು ಅಥವಾ ವಿಶ್ವ ದರ್ಜೆಯ ಜರ್ನಲ್‌ನಲ್ಲಿ ಪ್ರಕಟಿಸಿದ ವೈಜ್ಞಾನಿಕ ಸಂಶೋಧನೆಯಿಂದ ದಾಖಲಿಸಬೇಕು. ವೈದ್ಯರು ಮತ್ತು ತಜ್ಞರು ವಿಶ್ವದ ಅಗ್ರ 500 ವಿಶ್ವವಿದ್ಯಾಲಯಗಳಲ್ಲಿ ಒಂದರಿಂದ ಪಿಎಚ್‌ಡಿ ಪದವಿ, ಅರ್ಜಿದಾರರ ಕೆಲಸದ ಕ್ಷೇತ್ರದಲ್ಲಿ ಪ್ರಶಸ್ತಿ ಅಥವಾ ಮೆಚ್ಚುಗೆ ಪ್ರಮಾಣಪತ್ರಗಳು, ಸಂಬಂಧಿತ ಪ್ರಮುಖ ವೈಜ್ಞಾನಿಕ ಸಂಶೋಧನೆಗೆ ಕೊಡುಗೆ, ಪ್ರಕಟಿತ ವೈಜ್ಞಾನಿಕ ಪುಸ್ತಕಗಳು, ಆಯಾ ಕೆಲಸದ ಕ್ಷೇತ್ರದಲ್ಲಿ ವಿಶಿಷ್ಟ ಪ್ರಕಟಣೆಗಳು, ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ಸದಸ್ಯತ್ವ, ಪಿಎಚ್‌ಡಿ ಪದವಿ, ಜೊತೆಗೆ ಅವರ ಕ್ಷೇತ್ರದಲ್ಲಿ 10 ವರ್ಷಗಳ ವೃತ್ತಿಪರ ಅನುಭವ ಅಥವಾ ಆದ್ಯತೆಯ ಕ್ಷೇತ್ರಗಳಲ್ಲಿ ಪರಿಣತಿ ದಾಖಲಿಸಬೇಕು.

ಕತ್ರಿನಾ, ಅನುಷ್ಕಾರನ್ನು ಸೋಲಿಸಿದ ದೀಪಿಕಾ ಪಡುಕೋಣೆ! ಹೇಗೆ?

Latest Videos
Follow Us:
Download App:
  • android
  • ios