OTTಯಲ್ಲಿನ ಸೂಪರ್ ಹಿಟ್ ಆಗಿರುವ ಟಾಪ್ 5 ಸಿನಿಮಾ & ವೆಬ್ ಸೀರೀಸ್
ಕಳೆದ ವಾರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಸ್ತಿ ಜನ ನೋಡಿದ ಸಿನಿಮಾ ಮತ್ತು ವೆಬ್ ಸೀರೀಸ್‌ಗಳ ಲಿಸ್ಟ್‌ನ್ನ ಓರ್‌ಮ್ಯಾಕ್ಸ್ ರಿಲೀಸ್ ಮಾಡಿದೆ.

OTTಗಳ ಬೆಳವಣಿಗೆಯಿಂದ ಥಿಯೇಟರ್‌ನಲ್ಲಿ ಸಿನಿಮಾ ನೋಡೋರು ಕಡಿಮೆ ಆಗ್ತಿದ್ದಾರೆ. ರಿಲೀಸ್ ಆದ 28 ದಿನಗಳಲ್ಲಿ ಸಿನಿಮಾ OTTಗೆ ಬರ್ತಿದೆ. ಹಾಗಾಗಿ, ಮನೆಯಲ್ಲೇ ಕೂತು OTTಯಲ್ಲಿ ಸಿನಿಮಾ ನೋಡೋದಕ್ಕೆ ಜನ ಇಷ್ಟ ಪಡ್ತಾರೆ.
ಓರ್‌ಮ್ಯಾಕ್ಸ್ ಪ್ರಕಾರ, ಮೇ 36 ರಿಂದ ಜೂನ್ 1ರ ವರೆಗೆ OTTಯಲ್ಲಿ ಜಾಸ್ತಿ ಜನ ನೋಡಿದ ಸಿನಿಮಾ & ವೆಬ್ ಸೀರೀಸ್‌ಗಳ ಲಿಸ್ಟ್ ಇಲ್ಲಿದೆ.
Netflixನಲ್ಲಿ ಸ್ಟ್ರೀಮ್ ಆಗ್ತಿರೋ ಜಾನ್ ಅಬ್ರಹಾಂರ 'ದಿ ಡಿಪ್ಲೊಮ್ಯಾಟ್' 5ನೇ ಸ್ಥಾನದಲ್ಲಿದೆ. ಕಳೆದ ವಾರ 19 ಲಕ್ಷ ವೀಕ್ಷಣೆ ಪಡೆದಿದೆ. ಮಲಯಾಳಂನ 'ಮರಣಮಾಸ್' ಸಿನಿಮಾ 4ನೇ ಸ್ಥಾನದಲ್ಲಿದೆ. SonyLIVನಲ್ಲಿ ಸ್ಟ್ರೀಮ್ ಆಗ್ತಿರೋ ಈ ಸಿನಿಮಾ 23 ಲಕ್ಷ ವೀಕ್ಷಣೆ ಪಡೆದಿದೆ.
ಸಲ್ಮಾನ್ ಖಾನ್ 'ಸಿಕಂದರ್' 3ನೇ ಸ್ಥಾನದಲ್ಲಿದೆ. Netflixನಲ್ಲಿ 26 ಲಕ್ಷ ವೀಕ್ಷಣೆ ಪಡೆದಿದೆ. ತೆಲುಗು ಸಿನಿಮಾ 'ಜಾಕ್' 2ನೇ ಸ್ಥಾನದಲ್ಲಿದೆ. Netflixನಲ್ಲಿ 28 ಲಕ್ಷ ವೀಕ್ಷಣೆ ಪಡೆದಿದೆ. ಮೋಹನ್‌ಲಾಲ್ ಅವರ 'ತುಡರುಮ್' ಮೊದಲ ಸ್ಥಾನದಲ್ಲಿದೆ. Hotstarನಲ್ಲಿ 29 ಲಕ್ಷ ವೀಕ್ಷಣೆ ಪಡೆದಿದೆ.
SonyLIVನ 'ಕಂಖಜುರ' 18 ಲಕ್ಷ ವೀಕ್ಷಣೆ ಪಡೆದಿದೆ. Hotstarನ 'ಹೈ ಜುನೂನ್' 20 ಲಕ್ಷ ವೀಕ್ಷಣೆಯೊಂದಿಗೆ 4ನೇ ಸ್ಥಾನದಲ್ಲಿದೆ. 'ದಿ ಲಾಸ್ಟ್ ಆಫ್ ಅಸ್' ಸೀಸನ್ 2, 21 ಲಕ್ಷ ವೀಕ್ಷಣೆಯೊಂದಿಗೆ 3ನೇ ಸ್ಥಾನದಲ್ಲಿದೆ. 'ಹಾರ್ಟ್ ಬೀಟ್' ಸೀಸನ್ 2, 22 ಲಕ್ಷ ವೀಕ್ಷಣೆಯೊಂದಿಗೆ 2ನೇ ಸ್ಥಾನದಲ್ಲಿದೆ.
'ಕ್ರಿಮಿನಲ್ ಜಸ್ಟೀಸ್: ಎ ಫ್ಯಾಮಿಲಿ ಮ್ಯಾಟರ್' 84 ಲಕ್ಷ ವೀಕ್ಷಣೆಯೊಂದಿಗೆ ಮೊದಲ ಸ್ಥಾನದಲ್ಲಿದೆ.