ಎನ್‌ಟಿಆರ್ ದೊಡ್ಡ ಫೋಟೋ ಮನೆಯಲ್ಲಿಟ್ಟು ಪೂಜಿಸುತ್ತಿದ್ದರಂತೆ ಈ ಸೂಪರ್ ಸ್ಟಾರ್: ಯಾರ ಮಾತು ಮಾತ್ರ ಕೇಳ್ತಿರಿಲ್ಲವಂತೆ
ಎನ್‌ಟಿಆರ್ ಅವರನ್ನು ಆ ಸೂಪರ್ ಸ್ಟಾರ್ ಎಷ್ಟೊಂದು ಅರಾಧಿಸುತ್ತಿದ್ದರೆಂದರೆ ಮನೆಯಲ್ಲಿ ದೊಡ್ಡ ಫೋಟೋ ಇಟ್ಟು ಪೂಜಿಸುತ್ತಿದ್ದರಂತೆ. ಆದರೆ ಅವರು ಮಾಡಿದ ಕೋರಿಕೆಯನ್ನ ಮಾತ್ರ ಒಪ್ಪಿಕೊಳ್ಳಲಿಲ್ಲವಂತೆ. ಹಾಗಾದ್ರೆ ಆ ಸೂಪರ್ ಸ್ಟಾರ್ ಯಾರು?
ತೆಲುಗು ಸಿನಿಮಾದ ದಿಕ್ಕನ್ನೇ ಬದಲಿಸಿದ ಮೊದಲ ತಲೆಮಾರಿನ ನಟರಲ್ಲಿ ನಂದಮೂರಿ ತಾರಕ ರಾಮರಾವ್ ಒಬ್ಬರು. ಎನ್‌ಟಿಆರ್, ಎಸ್‌ವಿಆರ್, ಎಎನ್‌ಆರ್ ಇವರೆಲ್ಲ ತೆಲುಗು ಚಿತ್ರರಂಗದ ಮೊದಲ ತಲೆಮಾರಿನ ನಟರೆಂದು ನಾವೆಲ್ಲಾ ಕೊಂಡಾಡುತ್ತೇವೆ, ಅಭಿಮಾನಿಸುತ್ತೇವೆ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಮದ್ರಾಸ್ ಕೇಂದ್ರವಾಗಿ ತೆಲುಗು ಸಿನಿಮಾ ಜನನವಾಯಿತು. ನಿಧಾನವಾಗಿ ಬೆಳೆಯುತ್ತಾ ಇಂದು ಭಾರತದಲ್ಲೇ ಟಾಪ್ ಇಂಡಸ್ಟ್ರಿಯಾಗಿ ಬೆಳೆದಿದೆ. ಆದರೆ ಈ ಮಟ್ಟಕ್ಕೆ ಬೆಳೆಯಲು ಬುನಾದಿ ಹಾಕಿದ್ದೇ ಎನ್‌ಟಿಆರ್ ಎಂದರೆ ತಪ್ಪಾಗಲಾರದು. ಮದ್ರಾಸ್ ಕೇಂದ್ರವಾಗಿದ್ದ ತೆಲುಗು ಚಿತ್ರರಂಗವನ್ನು ಹೈದರಾಬಾದ್‌ಗೆ ತಂದು ಅಭಿವೃದ್ಧಿ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರ ಜೊತೆಗೆ ಎಎನ್‌ಆರ್ ಸಮಾನವಾಗಿ ಶ್ರಮ ವಹಿಸಿದ್ದಾರೆ.
ಅವರ ಪರಂಪರೆಯನ್ನು ಇಂದು ಎಷ್ಟೋ ಕಲಾವಿದರು, ತಂತ್ರಜ್ಞರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೆಲ್ಲಾ ಬದಿಗಿಟ್ಟು ನೋಡಿದರೆ ನಟರಾಗಿ ಎನ್‌ಟಿಆರ್ ಅವರನ್ನು ಎಷ್ಟೋ ಜನ ಅರಾಧಿಸುತ್ತಾರೆ. ಅವರು ನಿರ್ವಹಿಸಿದ ಕೃಷ್ಣ, ರಾಮ ಪಾತ್ರಗಳನ್ನೇ ದೇವರೆಂದು ಭಾವಿಸುತ್ತಾರೆ. ರಾಮ, ಕೃಷ್ಣ ಎಂದರೆ ಹೀಗೇ ಇರುತ್ತಾರೆಂದು ಆರಾಧಿಸುತ್ತಾರೆ. ರಾಮನ ಸ್ಥಾನದಲ್ಲಿ ರಾಮರಾವ್ ಫೋಟೋ ಇಟ್ಟು ಪೂಜಿಸುವ ಅಭಿಮಾನಿಗಳು ಇಂದಿಗೂ ಇದ್ದಾರೆ. ಮದ್ರಾಸ್‌ನಲ್ಲಿದ್ದಾಗ ಅವರನ್ನು ನೋಡಲು ಎಷ್ಟೋ ಅಭಿಮಾನಿಗಳು ಪ್ರತಿದಿನ ಅವರ ಮನೆಗೆ ಹೋಗುತ್ತಿದ್ದರಂತೆ. ತಿರುಮಲ ಶ್ರೀನಿವಾಸನ ದರ್ಶನದಂತೆ ರಾಮರಾವ್ ಅವರನ್ನು ದರ್ಶನ ಮಾಡಿಕೊಂಡು ಹೋಗುತ್ತಿದ್ದರಂತೆ. ಆಗ ಇದನ್ನೆಲ್ಲಾ ಕಥೆ ಕಥೆಗಳಾಗಿ ಹೇಳಿಕೊಳ್ಳುತ್ತಿದ್ದರು. ಇಂದಿಗೂ ಹೇಳುತ್ತಾರೆ. ಎನ್‌ಟಿ ರಾಮರಾವ್ ಎಂದರೆ ಅವರಿಗೆ ಅಷ್ಟೊಂದು ಅಭಿಮಾನ. ಹೀಗೆ ಆರಾಧಿಸುವವರಲ್ಲಿ ಸಿನಿಮಾ ಜನರು ಇದ್ದಾರೆ, ಅವರ ನಂತರದ ತಲೆಮಾರಿನ ನಾಯಕರು, ಸೂಪರ್ ಸ್ಟಾರ್‌ಗಳು ಇದ್ದಾರೆ.
ತೆಲುಗು ಚಿತ್ರರಂಗದಲ್ಲಿ ಸೋಗ್ಗಾಡಿಯಾಗಿ ಮಿಂಚಿದ ಶೋಭನ್ ಬಾಬು ಅವರಿಗೂ ಎನ್‌ಟಿಆರ್ ಎಂದರೆ ಪ್ರೀತಿ, ಅಭಿಮಾನ ತುಂಬಾ ಜಾಸ್ತಿ. ಆ ಅಭಿಮಾನ ಎಷ್ಟೆಂದರೆ ತಮ್ಮ ಮನೆಯ ಹಾಲ್‌ನಲ್ಲಿ ದೊಡ್ಡದೊಂದು ಎನ್‌ಟಿಆರ್ ಫೋಟೋ ಇಟ್ಟು ಪೂಜಿಸುವಷ್ಟು ಅಭಿಮಾನ. ಅವರ ಮನೆಗೆ ಎಂಟ್ರಿ ಇತ್ತ ಕ್ಷಣವೇ ಮೊದಲು ಕಾಣಿಸುತ್ತಿದ್ದದ್ದೇ ರಾಮರಾವ್ ಫೋಟೋ ಎಂದು ಒಂದು ಕಾರ್ಯಕ್ರಮದಲ್ಲಿ ಕೃಷ್ಣಂ ರಾಜು ತಿಳಿಸಿದ್ದಾರೆ. ಪೂಜಾ ಮಂದಿರದಲ್ಲಿ ಎನ್‌ಟಿ ರಾಮರಾವ್ ಫೋಟೋ ಇರುತ್ತದೆ ಎಂದು ತಿಳಿಸಿದ್ದಾರೆ. ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡೇ ಶೋಭನ್‌ಬಾಬು ಸಿನಿಮಾ ರಂಗಕ್ಕೆ ಬಂದರಂತೆ. ಅಷ್ಟೊಂದು ಅರಾಧಿಸುವ ಶೋಭನ್‌ಬಾಬು.. ಎನ್‌ಟಿಆರ್ ಮಾತನ್ನು ಮಾತ್ರ ತಿರಸ್ಕರಿಸಿದರಂತೆ. ಅವರು ಮಾಡಿದ ಕೋರಿಕೆಗೆ ನೇರವಾಗಿ ಇಲ್ಲ ಎಂದರಂತೆ. ಹೋಗಿ ಬಾ ಎಂದರಂತೆ.
ಮದ್ರಾಸ್ ಕೇಂದ್ರವಾಗಿದ್ದ ತೆಲುಗು ಚಿತ್ರರಂಗವನ್ನು ಹೈದರಾಬಾದ್‌ನಲ್ಲಿ ಅಭಿವೃದ್ಧಿ ಮಾಡಬೇಕೆಂದು ತೆಲುಗು ಕಲಾವಿದರು, ನಿರ್ಮಾಪಕರು ನಿರ್ಧರಿಸಿದರು. ಹೀಗಾಗಿ ಹೈದರಾಬಾದ್‌ಗೆ ಶಿಫ್ಟ್ ಆಗಲು ನಿರ್ಧರಿಸಿದರು. ಇಲ್ಲಿ ಆಗಿನ ಆಂಧ್ರಪ್ರದೇಶ ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದರು. ಇಲ್ಲಿ ಸ್ಟುಡಿಯೋ ನಿರ್ಮಿಸಿಕೊಳ್ಳಲು ಜಾಗ ಕೊಡಲಾಯಿತು. ಮನೆ ನಿರ್ಮಿಸಿಕೊಳ್ಳಲು ಜಾಗವನ್ನೂ ಕೊಟ್ಟರು. ನಿಧಾನವಾಗಿ ಹೈದರಾಬಾದ್‌ನಲ್ಲಿ ಟಾಲಿವುಡ್ ಅಭಿವೃದ್ಧಿಯಾಯಿತು. ಇಂದು ದೇಶದಲ್ಲೇ ಅತಿ ದೊಡ್ಡ ಚಿತ್ರರಂಗವಾಗಿ ತೆಲುಗು ಚಿತ್ರರಂಗ ಬೆಳದಿದೆ ಎಂಬುದು ವಿಶೇಷ. ಆದರೆ ಆಗ ಎಲ್ಲರೂ ಹೈದರಾಬಾದ್‌ಗೆ ಬರುತ್ತಿದ್ದಾಗ, ಆಗಲೇ ಸೂಪರ್ ಸ್ಟಾರ್ ಆಗಿದ್ದ ಶೋಭನ್ ಬಾಬು ಮಾತ್ರ ಚೆನ್ನೈನಲ್ಲೇ ಉಳಿದು ಬಿಟ್ಟರು.
ಅವರನ್ನು ಎನ್‌ಟಿಆರ್ ಹೈದರಾಬಾದ್‌ಗೆ ಬರುವಂತೆ ಕೇಳಿಕೊಂಡರಂತೆ. ಆದರೆ ಶೋಭನ್‌ಬಾಬು ತಿರಸ್ಕರಿಸಿದರಂತೆ. ಎಷ್ಟೋ ಬಾರಿ ಕೇಳಿಕೊಂಡರೂ ಇಲ್ಲ ಎಂದೇ ಹೇಳಿದರಂತೆ. ನನ್ನ ಆಸ್ತಿಪಾಸ್ತಿ ಎಲ್ಲ ಇಲ್ಲಿದೆ, ಕುಟುಂಬ ಇಲ್ಲೇ(ಮದ್ರಾಸ್) ಸ್ಥಿರವಾಗಿದೆ, ಇದನ್ನೆಲ್ಲಾ ಬಿಟ್ಟು ಬರಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿ ಬಿಟ್ಟರಂತೆ. ಅಭಿಮಾನ ಬೇರೆ, ವೈಯಕ್ತಿಕ ಜೀವನ ಬೇರೆ ಎಂದು ನಿರೂಪಿಸಿದರು ಶೋಭನ್‌ಬಾಬು. ಇನ್ನು ಏನು ಮಾಡಲು ಸಾಧ್ಯ ಸುಮ್ಮನಾದರು ರಾಮರಾವ್.
ಈ ವಿಷಯವನ್ನು ಚಂದ್ರಮೋಹನ್ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಶೋಭನ್‌ಬಾಬು ಜೊತೆ ತಾನೂ ಅಲ್ಲೇ ಇದ್ದಿದ್ದೆ, ಇಬ್ಬರೂ ಆತ್ಮೀಯ ಸ್ನೇಹಿತರು ಎಂದು ಹೇಳಿದ್ದಾರೆ ಚಂದ್ರಮೋಹನ್. ಆಸ್ತಿ ಸಂಪಾದಿಸುವ ವಿಚಾರದಲ್ಲಿ ತನಗೆ ಎಷ್ಟೋ ಸಲಹೆ ನೀಡಿದ್ದಾರೆ, ಯಾವುದಾದರೂ ಆಸ್ತಿ ಖರೀದಿಸಬೇಕೆಂದರೆ ತನ್ನಲ್ಲೇ ಸಾಲ ತೆಗೆದುಕೊಂಡು ಮುಂಗಡ ಹಣ ಕೊಡುತ್ತಿದ್ದರು, ನನ್ನ ಕೈಯನ್ನು ಶೋಭನ್‌ಬಾಬು ಅದೃಷ್ಟದ ಕೈ ಎಂದು ಭಾವಿಸುತ್ತಿದ್ದರು ಎಂದು ಆ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಮ್ಮ ಮಧ್ಯೆ ಹೋಗೋ ಬಾರೋ ಎಂದು ಕರೆಯುವಷ್ಟು ಆತ್ಮೀಯತೆ, ಸ್ನೇಹ ಇತ್ತು ಎಂದು ಹೇಳಿದ್ದಾರೆ ಚಂದ್ರಮೋಹನ್.