ರಶ್ಮಿಕಾ ಜೊತೆಯ 'ಸರಿಲೇರು ನೀಕೆವ್ವರು' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ ಮಹೇಶ್ ಬಾಬು!
ಕನ್ನಡ ಕಿರುತೆರೆಗೆ ಕಾಲಿಟ್ಟ ತೆಲುಗು ಸೂಪರ್ ಹಿಟ್ ಸಿನಿಮಾ 'ಸರಿಲೇರು ನೀಕೆವ್ವರು' ಸಿನಿಮಾ. ತಮ್ಮ ಸಿನಿಮಾವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಸಿನಿ ಪ್ರೇಮಿಗಳಿಗೆ ಮೆಚ್ಚುಗೆ ಪಡೆದ ಸೂಪರ್ ಸ್ಟಾರ್ ಮಹೇಶ್ ಬಾಬು .
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ಅಭಿನಯಿಸುತ್ತಾ ಸಿನಿ ವೀಕ್ಷಕರ ಪ್ರೀತಿ ಪಡೆದುಕೊಂಡಿರುವ ರಶ್ಮಿಕಾ ಮಂದಣ್ಣ.
ಇತ್ತೀಚಿಗೆ ಟಾಲಿವುಡ್ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಜೋಡಿಯಾಗಿ 'ಸರಿಲೇರು ನೀಕೆವ್ವರು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಮಹೇಶ್ ಬಾಬುಗೆ ಜೋಡಿಯಾಗಿ ಕಾಣಿಸಿಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟುವುದರಲ್ಲಿ ವಿಫಲವಾಗಿತ್ತು.
ಆದರೆ ಈ ಸಿನಿಮಾ ಮನರಂಜನೆಯ ದೃಷ್ಟಿಯಿಂದ ಪ್ರೇಕ್ಷಕರ ಪ್ರೀತಿ ಪೆಡದುಕೊಂಡ ಕಾರಣ ಕಿರುತೆರೆಯಲ್ಲಿ ಪ್ರಸಾರವಾಗಿದೆ.
'ಮೇಜರ್ ಅಜಯ್ ಕೃಷ್ಣ' ಎಂಬ ಶೀರ್ಷಿಕೆಯಲ್ಲಿ ಈ ಚಿತ್ರ ಪ್ರಸಾರವಾಗಿದೆ.
ಜುಲೈ 25ರಂದು ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಿದೆ.
ಮಹೇಶ್ ಬಾಬು ಅವರ ಈ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಪ್ರಸಾರಗೊಂಡಿರುವುದು ಅಭಿಮಾನಿಗಳು ಪ್ರೀತಿಯಿಂದ ಸ್ವಾಗಿತಿದ್ದಾರೆ .
ಇದರ ಜೊತೆಗೆ ರಶ್ಮಿಕಾ ಅಭಿನಯದ 'ಗೀತಾ ಗೋವಿಂದಂ' ಚಿತ್ರ ಕೂಡ ಡಬ್ ಆಗಿರುವುದು ಮತ್ತೊಂದು ವಿಶೇಷ.
'ಸೆಲ್ಫಿ ಶುರುಮಾಡಿದ ಲವ್ ಸ್ಟೋರಿ' ಶೀರ್ಷಿಕೆ ಇಟ್ಟ ಕಾರಣ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಟ್ರೋಲ್ ಮಾಡಲಾಗಿತ್ತು.
ಲಾಕ್‌ಡೌನ್ ಟೈಮ್‌ನಲ್ಲಿ ಸಿನಿಮಾ ಡಬ್ ಮಾಡಿ ಪ್ರಸಾರ ಮಾಡಿದರೆ ಟಿಆರ್‌ಪಿ ಹೆಚ್ಚು ಬರಬಹುದು ಎಂಬ ಲೆಕ್ಕಾಚಾರದಲ್ಲಿವೆ ವಾಹಿನಿಗಳು .