ನಟ ನಿತಿನ್ ಸರಳ ಮದುವೆ: ಕಣ್ಸೆಳೆದ ಜೋಡಿ ನೋಡಿ!
ಟಾಲಿವುಡ್ ನಟ ನಿತಿನ್ ಮತ್ತು ಗೆಳತಿ ಶಾಲಿನಿ ಜುಲೈ 27ರಂದು ಹೈದರಾಬಾದ್‌ನ ತಾಜ್ ಫಲಕ್ನುಮಾ ಪ್ಯಾಲೇಸಿನಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಹೇಗಿತ್ತು ನೋಡಿ...
ತೆಲುಗು ನಟ ನಿತಿನ್ ಮತ್ತು ಬಹುದಿನಗಳ ಗೆಳತಿ ಶಾಲಿನಿ ಮದುವೆ.
ಡೆಸ್ಟಿನೇಷನ್ ಮದುವೆ ಆಗಬೇಕು ಎಂದುಕೊಂಡ ಜೋಡಿ, ಲಾಕ್‌ಡೌನ್ ನಿಯಮದಿಂದ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರೆವೇರಿತ್ತು.
ಏಪ್ರಿಲ್ ತಿಂಗಳಲ್ಲಿ ದುಬೈನಲ್ಲಿ ಡೆಸ್ಟಿನೇಷನ್ ಮದುವೆ ಪ್ಲ್ಯಾನ್ ಮಾಡಿದ್ದರು.
ಲಾಕ್‌ಡೌನ್ ಇದ್ದ ಕಾರಣ ದಿನಾಂಕ ಮುಂದೂಡಿದ್ದರು. ಆದರೆ ಕೊರೋನಾ ತೊಲಗದ ಕಾರಣ ಹೈದರಾಬಾದ್‌ನಲ್ಲಿಯೇ ಮದುವೆಯಾದರು.
ನಿತಿನ್ ಮತ್ತು ಶಾಲಿನಿ 8 ವರ್ಷಗಳಿಂದ ಪ್ರೀತಿಸುತ್ತಿದ್ದರು..
ವರುಣ್ ತೇಜ್, ಸಾಯಿ ಧರಮ್ ಸೇರಿದಂತೆ ಅನೇಕ ಸಿನಿ ಗಣ್ಯರು ಮದುವೆಯಲ್ಲಿ ಪಾಲ್ಗೊಂಡಿದ್ದರು.
ಗೋಲ್ಡ್ ರೇಷ್ಮೆ ಸೀರೆ ಹಾಗೂ ವಿಭಿನ್ನ ಆಭರಣ ಧರಿಸಿ ಶಾಲಿನಿ ಕಾಣಿಸಿಕೊಂಡರೆ, ನಿತಿನ್ ಕೆಂಪು ಶೇರ್ವಾನಿ ಧರಿಸಿದ್ದಾರೆ.
ನಿತಿನ್ ಅಭಿನಯದ 'ರಂಗ್ ದೇ' ಸಿನಿಮಾ ರಿಲೀಸ್ ಹಂತದಲ್ಲಿದೆ.
ರಂಗ್ ದೇ ಚಿತ್ರತಂಡ ಕಾಮಿಡಿ ಟೀಸರ್ ರಿಲೀಸ್ ಮಾಡುವ ಮೂಲಕ ನಿತಿನ್‌ಗೆ ಕ್ಯೂಟ್ ಗಿಫ್ಟ್ ನೀಡಿದ್ದಾರೆ.