MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸಲ್ಮಾನ್‌ಖಾನ್‌ಗೆ ನಾಯಕಿಯಾಗಿದ್ದ ರಾಯಲ್‌ ಫ್ಯಾಮಿಲಿ ಕುಡಿ, ನಟನಿಗಿಂತ ಐದು ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ರು!

ಸಲ್ಮಾನ್‌ಖಾನ್‌ಗೆ ನಾಯಕಿಯಾಗಿದ್ದ ರಾಯಲ್‌ ಫ್ಯಾಮಿಲಿ ಕುಡಿ, ನಟನಿಗಿಂತ ಐದು ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ರು!

ಸಲ್ಮಾನ್‌ಖಾನ್‌ಗೆ ನಾಯಕಿಯಾಗಿದ್ದ ರಾಯಲ್‌ ಫ್ಯಾಮಿಲಿ ಕುಡಿ, ನಟನಿಗಿಂತ ಐದು ಪಟ್ಟು ಹೆಚ್ಚು ಸಂಭಾವನೆ ಪಡೆದುಕೊಂಡಿದ್ದರು. ಈ ನಟಿಯ ಫೇಮ್‌ನಿಂದ ಸಲ್ಮಾನ್ ಖಾನ್ ತಿಂಗಳಾನುಗಟ್ಟಲೆ ಕೆಲಸವಿಲ್ಲದೆ ಇರಬೇಕಾಯಿತು. ಯಾರು ಆ ನಟಿ?

2 Min read
Author : Vinutha Perla
Published : Oct 13 2023, 10:57 AM IST
Share this Photo Gallery
  • FB
  • TW
  • Linkdin
  • Whatsapp
19

ಬಾಲಿವುಡ್‌ನ ಖ್ಯಾತ ನಟರಲ್ಲೊಬ್ಬರು ಸಲ್ಮಾನ್‌ ಖಾನ್‌. 90ರ ದಶಕದಿಂದ ಆರಂಭಿಸಿ ಇಲ್ಲಿಯವರೆಗೆ ಹಲವಾರು ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಹಲವಾರು ನಟಿಯರೊಂದಿಗೆ ನಟಿಸಿದ್ದಾರೆ. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ರಾಣಿ ಮುಖರ್ಜಿ, ಪ್ರೀತಿ ಝಿಂಟಾ ಮೊದಲಾದವರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಆದರೆ ಹೆಸರಾಂತ ರಾಜಕುಮಾರಿಯೊಬ್ಬರು ಇವರ ಸಿನಿಮಾದಲ್ಲಿ ನಟಿಸಿದ್ದರು ಅನ್ನೋದು ನಿಮ್ಗೆ ಗೊತ್ತಿದ್ಯಾ?

29

ಹೌದು, ನಂಬೋಕೆ ಸ್ಪಲ್ಪ ಕಷ್ಟವೆನಿಸಿದರೂ ಇದು ನಿಜ. ಹೆಸರಾಂತ ರಾಜಮನೆತನದ ರಾಜಕುಮಾರಿಯೊಬ್ಬರು ಸಲ್ಮಾನ್ ಖಾನ್ ಜೊತೆ ಹೀರೋಯಿನ್ ಆಗಿ ನಟಿಸಿದ್ದರು. ಮಾತ್ರವಲ್ಲ  ತಮ್ಮ ಚೊಚ್ಚಲ ಚಿತ್ರಕ್ಕಾಗಿ ನಟನಿಗಿಂತ 5 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದರು. ತಿಂಗಳುಗಳ ಕಾಲ ಸಲ್ಮಾನ್ ಖಾನ್‌ ನಿರುದ್ಯೋಗಿಯಾಗಲು ಕಾರಣರಾದರು. ಆ ನಟಿ ಬೇರೆ ಯಾರೂ ಅಲ್ಲ ಭಾಗ್ಯಶ್ರೀ.

39

ಮಹಾರಾಷ್ಟ್ರದ ಸಾಂಗ್ಲಿಯ ರಾಜಮನೆತನದಿಂದ ಬಂದವರು ಭಾಗ್ಯಶ್ರೀ. ರಾಣಿ ರಾಜ್ಯಲಕ್ಷ್ಮಿ ಪಟವರ್ಧನ್ ಅವರ ಪುತ್ರಿ. ರಾಜ್ಯಲಕ್ಷ್ಮಿ, ಸಾಂಗ್ಲಿಯ ನಾಲ್ಕನೇ ಮತ್ತು ಕೊನೆಯ ರಾಜ ಮಹಾರಾಜ ವಿಜಯಸಿಂಗ್ರಾಜೆ ಪಟವರ್ಧನ್ ಅವರ ಪತ್ನಿ. ಭಾಗ್ಯಶ್ರೀ ಸಹೋದರಿಯರು ಪೂರ್ಣಿಮಾ ಮತ್ತು ಮಧುವಂತಿ. 

49

ಈ ಹಿಂದೆ ಸಂದರ್ಶನವೊಂದರಲ್ಲಿ ಭಾಗ್ಯಶ್ರೀ, ತಮ್ಮ ಮೊದಲ ಸಾಕು ಪ್ರಾಣಿ ಆನೆ ಎಂಬುದಾಗಿ ಹೇಳಿಕೊಂಡಿದ್ದರು. ಬಾಂಬೆಯ ಜೀವನವು ವರ್ಷದಲ್ಲಿ ನಾವು ನಮ್ಮ ಊರಿಗೆ ನಿಯಮಿತವಾಗಿ ಹೋಗುತ್ತಿದ್ದಾಗಲೂ ಬಹಳ ಭಿನ್ನವಾಗಿತ್ತು. ಜನರು ನಮ್ಮನ್ನು ತುಂಬಾ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದರು. ನಮ್ಮ ಉಡುಪು, ಆಭರಣವನ್ನು ಗಮನಿಸುತ್ತಿದ್ದರು. ಹೀಗಾಗಿ ನಾನು ಸೀರೆಯುಟ್ಟು ಮಾತ್ರ ಸಾಂಗ್ಲಿಗೆ ಹೋಗುತ್ತಿದ್ದೆ' ಎಂದು ಭಾಗ್ಯಶ್ರೀ ತಿಳಿಸಿದ್ದರು. 

59

ಭಾಗ್ಯಶ್ರೀ ಅವರು 1989ರಲ್ಲಿ ಸಲ್ಮಾನ್ ಖಾನ್ ಅವರ ಮೈನೆ ಪ್ಯಾರ್ ಕಿಯಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸಲ್ಮಾನ್ ಖಾನ್‌ಗೆ ಈ ಚಿತ್ರಕ್ಕಾಗಿ 31000 ರೂಪಾಯಿಗಳನ್ನು ಪಾವತಿಸಲಾಯಿತು. ಆದರೆ ಭಾಗ್ಯಶ್ರೀ ಚಿತ್ರಕ್ಕೆ 1.5 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡರು. ಇದು ನಟನಿಗಿಂತ 5 ಪಟ್ಟು ಹೆಚ್ಚಾಗಿದೆ.

69

IIFA ಪ್ರಶಸ್ತಿ ಸಮಾರಂಭದಲ್ಲಿ, ಒಮ್ಮೆ ಸಲ್ಮಾನ್ ಖಾನ್ ಅವರು ಯಾವುದೇ ಕೆಲಸವಿಲ್ಲದ ಸಮಯವನ್ನು ನೆನಪಿಸಿಕೊಂಡರು. ಮೈನೆ ಪ್ಯಾರ್ ಕಿಯಾ ನಂತರ, ಭಾಗ್ಯಶ್ರೀಗೆ ಚಿತ್ರದ ಎಲ್ಲಾ ಕ್ರೆಡಿಟ್ ಹೋಯಿತು. ಹೀಗಾಗಿ ಕೆಲ ತಿಂಗಳುಗಳ ಕಾಲ ನನಗೆ ಯಾವುದೇ ನಟನೆಯ ಆಫರ್ ಬಂದಿರಲ್ಲಿಲ್ಲ ಎಂದು ತಿಳಿಸಿದ್ದರು. 

79

ರಾಜಮನೆತನಕ್ಕೆ ಸೇರಿದ ಭಾಗ್ಯಶ್ರೀ ತಾವು ಪ್ರೀತಿಸಿದವರನ್ನು ಮದುವೆಯಾಗಲು ತಮ್ಮ ಕುಟುಂಬವನ್ನು ತೊರೆದರು. ಮನೆಯವರ ಇಚ್ಛೆಗೆ ವಿರುದ್ಧವಾಗಿ ಹಿಮಾಲಯ ದಾಸಾನಿಯನ್ನು ಮದುವೆಯಾದರು. ಪ್ರೀತಿಗಾಗಿ ರಾಜಮನೆತನವನ್ನು ಬಿಟ್ಟು ಬಂದಿದ್ದಾಗಿ ನಾನ್ಯಾವತ್ತೂ ಬೇಸರ ಪಟ್ಟುಕೊಳ್ಳುವುದಿಲ್ಲ ಎಂದು ಭಾಗ್ಯಶ್ರೀ ಹೇಳಿದ್ದಾರೆ.

89

ಭಾಗ್ಯಶ್ರೀ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ . ಮಗಳು ಅವಂತಿಕಾ ದಾಸಾನಿ ಮತ್ತು ಒಬ್ಬ ಮಗ ಅಭಿಮನ್ಯು ದಾಸಾನಿ. ನಟಿ 2000ರ ದಶಕದಲ್ಲಿ ಉದ್ಯಮಕ್ಕೆ ಮರಳಿದರು. ಮಾ ಸಂತೋಷಿ ಮಾ (2003), ಹಮ್ಕೋ ದೀವಾನಾ ಕರ್ ಗಯೆ (2006), ಮತ್ತು ರೆಡ್ ಅಲರ್ಟ್: ದಿ ವಾರ್ ವಿಥಿನ್ (2010) ನಂತಹ ಚಲನಚಿತ್ರಗಳಲ್ಲಿ ನಟಿಸಿದರು.

99

ನಟಿ ಮುಂದಿನ ಸಿನಿಮಾ 'ಸಜಿನಿ ಶಿಂಧೆ ಕಾ ವೈರಲ್ ವಿಡಿಯೋ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಿಖಿಲ್ ಮುಸಲೆ ನಿರ್ದೇಶನದ ಚಿತ್ರದಲ್ಲಿ ರಾಧಿಕಾ ಮದನ್, ನಿಮ್ರತ್ ಕೌರ್, ಸುಮೀತ್ ವ್ಯಾಸ್, ಸುಬೋಧ್ ಭಾವೆ, ಸೋಹಂ ಮಜುಂದಾರ್, ಚಿನ್ಮಯ್ ಮಾಂಡೇಕರ್, ಶ್ರುತಿ ವ್ಯಾಸ್, ಅಶುತೋಷ್ ಗಾಯಕ್ವಾಡ್ ಮತ್ತು ರಶ್ಮಿ ಅಗ್ಡೇಕರ್ ನಟಿಸಿದ್ದಾರೆ. ಈ ಚಿತ್ರವು ಅಕ್ಟೋಬರ್ 27ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

VP
Vinutha Perla
ಬಾಲಿವುಡ್
ಸಲ್ಮಾನ್ ಖಾನ್

Latest Videos
Recommended Stories
Recommended image1
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
Recommended image2
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image3
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved