ಕೋಟಿ ಆಸ್ತಿ ಒಡತಿ; ಮೆಗಾ ಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಇವ್ರೇ ನೋಡಿ....
ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಮೆಗಾ ಸ್ಟಾರ್. ರಾಮ್ ಚರಣ್ ಮತ್ತು ಉಪಾಸನಾ ಫೋಟೋ ಸಖತ್ ವೈರಲ್....
ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಮೊದಲ ಪುತ್ರ ರಾಮ್ ಚರಣ್ ಮತ್ತು ಸೊಸೆ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಿಹಿ ಸುದ್ದಿ ಹಂಚಿಕೊಂಡಿದ್ದರು.
ರಾಮ್ ಚರಣ್ ಮತ್ತು ಉಪಾಸನಾ ಪೋಷಕರಾಗುತ್ತಿರುವ ವಿಚಾರ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಇವರಿಬ್ಬರ ಲವ್ ಸ್ಟೋರಿ, ಮ್ಯಾರೇಜ್ ಫೋಟೋ ಮತ್ತು ರೊಮ್ಯಾಂಟಿಕ್ ಫೊಟೋ ಹುಡುಕಲು ಶುರು ಮಾಡಿದ್ದಾರೆ.
ಉದ್ಯಮಿಗಳ ಕುಟುಂಬದಿಂದ ಬಂದಿರುವ ಉಪಾಸನಾ ಅವರು ತಮ್ಮ ಮಾವ ಚಿರಂಜೀವಿ ಮತ್ತು ಪತಿ ರಾಮ್ ಚರಣ್ ಅವರನ್ನು ಮೊದಲು ಭೇಟಿ ಮಾಡಿದ್ದು ಸ್ಪೂರ್ಟ್ಸ್ ಕ್ಲಬ್‌ನಲ್ಲಿ ಎಂದಿದ್ದಾರೆ.
ಆರಂಭದಲ್ಲಿ ರಾಮ್ ಮತ್ತು ಉಪಾಸನಾ ತುಂಬಾನೇ ಜಗಳವಾಡುತ್ತಿದ್ದರಂತೆ. ಅಪರಿಚಿತರು ಸ್ನೇಹಿತರಾಗಿ ಆನಂತರ ಪ್ರೀತಿಸಲು ಆರಂಭಿಸಿದ್ದರು.
5 ವರ್ಷಗಳ ಕಾಲ ರಾಮ್ ಚರಣ್ ಮತ್ತು ಉಪಾಸನಾ ಪ್ರೀತಿಸಿದ್ದಾರೆ. ಆನಂತರ ತಮ್ಮ ಎರಡೂ ಕುಟುಂಬಗಳಿಗೆ ಪ್ರೀತಿ ವಿಚಾರ ಹೇಳಿ ಒಪ್ಪಿಗೆ ಪಡೆದು ಮದುವೆಯಾಗಲು ಮುಂದಾದ್ದರು.
ಡಿಸೆಂಬರ್ 11, 2011ರಂದು ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಜೂನ್ 14, 2012ರಲ್ಲಿ ಗುರು ಹಿರಿಯ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ತೆಗುಲು ಚಿತ್ರರಂಗದಲ್ಲಿ ದುಬಾರಿ ಮದುವೆ ಇದಾಗಿತ್ತು.
ಜೀವನಶೈಲಿ ಹಾಗೂ ಆರೋಗ್ಯ ನಿಯತಕಾಲಿಕ B Positive Magazineನ ಮುಖ್ಯ ಸಂಪಾದಕರು ಉಪಾಸನಾ ಹಾಗೂ ಅಪೊಲೋ ಲೈಫ್‌ನ ಚಾರಿಟಿ ವೈಸ್ ಪ್ರೆಸಿಡೆಂಟ್.2019ರಲ್ಲಿ philanthropist of the year ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.