ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋ ವಿಜಯ್ ಬಳಿಯಲ್ಲಿದೆ ವಿಮಾನದಂತಿರೋ ಕಾರ್; ಬೆಲೆ ಎಷ್ಟು?
ವಿಜಯ್ ಅವರ ಹೊಸ ಲೆಕ್ಸಸ್ LM 350h ಕಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. 48 ಇಂಚಿನ ಟಿವಿ, 23 ಸ್ಪೀಕರ್‌ಗಳ ಆಡಿಯೊ ಸಿಸ್ಟಮ್, ಮಸಾಜ್ ಸೀಟ್ ಇತ್ಯಾದಿ. ಈ ಕಾರಿನ ಬೆಲೆ ಎಷ್ಟು ಗೊತ್ತಾ?
ಕಾರುಗಳನ್ನು ಇಷ್ಟಪಡದವರು ಯಾರೂ ಇಲ್ಲ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಕಾರುಗಳ ಅಭಿಮಾನಿಗಳು. ಕೋಟಿಗಟ್ಟಲೆ ಹಣ ಖರ್ಚು ಮಾಡಿ ಕಾರುಗಳನ್ನು ಖರೀದಿಸುತ್ತಾರೆ. ತಮಿಳು ಚಿತ್ರರಂಗದಲ್ಲಿ ಅಜಿತ್‌ಗೆ ಕಾರ್ ರೇಸಿಂಗ್ ಅಂದರೆ ಇಷ್ಟವಾದರೆ, ವಿಜಯ್‌ಗೆ ಹೊಸ ಕಾರುಗಳನ್ನು ಖರೀದಿಸುವುದು ಇಷ್ಟ. ಹೊಸ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳು ಬಂದರೆ ತಕ್ಷಣ ಖರೀದಿಸುವ ವಿಜಯ್ ಬಳಿ ಸುಮಾರು 20 ಕ್ಕೂ ಹೆಚ್ಚು ಕಾರುಗಳಿವೆ. ಅವುಗಳಲ್ಲಿ 2 ಕೋಟಿಗೂ ಹೆಚ್ಚು ಮೌಲ್ಯದ 5 ಕ್ಕೂ ಹೆಚ್ಚು ಕಾರುಗಳಿವೆ.
2012 ರಲ್ಲಿ ಲಂಡನ್‌ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಆಮದು ಮಾಡಿಕೊಂಡ ವಿಜಯ್, ಅದಕ್ಕೆ ಸರಿಯಾಗಿ ತೆರಿಗೆ ಪಾವತಿಸಿಲ್ಲ ಎಂಬ ಆರೋಪಗಳು ಬಂದವು. ಈ ಪ್ರಕರಣ ನ್ಯಾಯಾಲಯದವರೆಗೂ ಹೋಯಿತು. ಆ ಕಾರನ್ನು ಮಾರಿದ ನಂತರ ಲೆಕ್ಸಸ್ LM 350h ಖರೀದಿಸಿದರು. ಈ ಕಾರು ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬಂದಿತ್ತು. ಮುಂಚಿತವಾಗಿ ಬುಕ್ ಮಾಡಿ ತಕ್ಷಣವೇ ಡೆಲಿವರಿ ಪಡೆದಿದ್ದಾರಂತೆ. ಈ ಕಾರಿನಲ್ಲಿ ಏನು ವಿಶೇಷವಿದೆ ಎಂದು ನೋಡೋಣ.
ಐಷಾರಾಮಿ ಕಾರುಗಳಲ್ಲಿ ಆಡಿ, ಬಿಎಂಡಬ್ಲ್ಯೂ, ರೋಲ್ಸ್ ರಾಯ್ಸ್‌ಗಳಂತಹ ಕಾರುಗಳಿಗೆ ಪೈಪೋಟಿಯಾಗಿ ಲೆಕ್ಸಸ್ ಹೊಸ ಕಾರನ್ನು ತಯಾರಿಸಿದೆ. ಇದಕ್ಕೂ ವಿಮಾನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ನಾಲ್ಕು ಮತ್ತು ಏಳು ಸೀಟುಗಳ ರೂಪಾಂತರಗಳಲ್ಲಿ ಬಂದ ಈ ಕಾರಿನ ನಾಲ್ಕು ಸೀಟುಗಳ ರೂಪಾಂತರವನ್ನು ವಿಜಯ್ ಖರೀದಿಸಿದ್ದಾರೆ. ಗ್ರಾಹಕರಿಗೆ ಬೇಕಾದ ಎಲ್ಲ ಸೌಲಭ್ಯಗಳು ಈ ಕಾರ್ ಒಳಗೊಂಡಿದೆ. 48 ಇಂಚಿನ ಟಿವಿ, 23 ಸ್ಪೀಕರ್‌ಗಳ ಆಡಿಯೊ ಸಿಸ್ಟಮ್ ಇವೆ.
ಚಾಲಕನ ಸೀಟು ಮತ್ತು ಹಿಂದಿನ ಸೀಟುಗಳ ನಡುವೆ ವಿಭಜನೆ ಇರುವುದರಿಂದ ಹಿಂದೆ ಏನು ನಡೆಯುತ್ತಿದೆ ಎಂದು ಚಾಲಕನಿಗೆ ತಿಳಿಯುವುದಿಲ್ಲ. ಮಡಿಸಬಹುದಾದ ಟೇಬಲ್‌ಗಳು, ವೈರ್‌ಲೆಸ್ ಚಾರ್ಜರ್, ರೀಡಿಂಗ್ ಲೈಟ್, ಕನ್ನಡಿಗಳು ಹೀಗೆ ಎಲ್ಲವೂ ಇವೆ. ಇದಲ್ಲದೆ, ನೀರು, ತಂಪು ಪಾನೀಯಗಳನ್ನು ಇಡಲು ಸಣ್ಣ ಫ್ರಿಡ್ಜ್ ಕೂಡ ಇದೆ. ಎಸಿ, ಹೀಟರ್ ಕೂಡ ಇವೆ.
ಲೆಕ್ಸಸ್ LM 350h
ಈ ಕಾರಿನಲ್ಲಿ ಮುಖ್ಯವಾದದ್ದು ಸೀಟುಗಳು. ಮೃದುವಾದ ಈ ಸೀಟುಗಳಲ್ಲಿ ಮಲಗಿಕೊಂಡು ಪ್ರಯಾಣಿಸಬಹುದು. ಹೊಂದಿಸಿಕೊಂಡರೆ ಮಲಗುವ ಕೋಣೆಯಂತೆ ಆಗುತ್ತದೆ. ಮಸಾಜ್ ಮಾಡುವ ವೈಬ್ರೇಟರ್ ಕೂಡ ಇದೆ.
ಹಿಂದಿನ ಬಾಗಿಲುಗಳು ಸ್ಲೈಡಿಂಗ್ ಬಾಗಿಲುಗಳು. ರಿಮೋಟ್ ಕೀಲಿಯಿಂದಲೇ ಬಾಗಿಲುಗಳನ್ನು ತೆರೆಯಬಹುದು. ಪೆಟ್ರೋಲ್ ಜೊತೆಗೆ ವಿದ್ಯುತ್‌ನಲ್ಲಿಯೂ ಚಲಿಸುವ ಈ ಕಾರಿನಲ್ಲಿ 60 ಲೀಟರ್ ಸಾಮಾರರ್ಥ್ಯದ ಇಂಧನದ ಟ್ಯಾಂಕ್ ಹೊಂದಿದೆ.
360 ಡಿಗ್ರಿಗಳ ಕ್ಯಾಮೆರಾ ವ್ಯವಸ್ಥೆಯೂ ಕಾರ್‌ನಲ್ಲಿದೆ. ಬಿಎಂಡಬ್ಲ್ಯೂ, ಆಡಿ ಅಂತ ಐಷಾರಾಮಿ ಕಾರುಗಳಿದ್ದರೂ, ವಿಜಯ್ ಇನ್ನೋವಾ, ಮಾರುತಿ ಸುಜುಕಿ ಹಾಗೂ ಇತರೆ ಕಾರುಗಳಲ್ಲಿಯೇ ಹೊರಗೆ ತಿರುಗಾಡುತ್ತಿರುತ್ತಾರೆ. ಈ ಹೊಸ ಐಷಾರಾಮಿ ಕಾರನ್ನು ಖರೀದಿಸಲು ಅವರ ರಾಜಕೀಯವೇ ಕಾರಣ ಎಂದು ಹೇಳಲಾಗುತ್ತಿದೆ.