ತಮನ್ನಾ ಕೈಕೊಟ್ಟ ಬೆನ್ನಲ್ಲಿಯೇ ಹೊಸ ಮನೆ ಖರೀದಿಸಿದ ಮಾಜಿ ಪ್ರಿಯಕರ ವಿಜಯ್ ವರ್ಮಾ!
ವಿಜಯ್ ವರ್ಮಾ ಹೊಸ ಮನೆ: ತಮನ್ನಾ ಭಾಟಿಯಾ ಅವರ ಮಾಜಿ ಗೆಳೆಯ ವಿಜಯ್ ವರ್ಮಾ ಮುಂಬೈನಲ್ಲಿ ಸಮುದ್ರಕ್ಕೆ ಎದುರಾಗಿರುವ ಹೊಸ ಮನೆ ಖರೀದಿಸಿದ್ದಾರೆ. ಒಳಾಂಗಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಮನೆಯ ಒಳನೋಟ ಇಲ್ಲಿದೆ…

ವಿಜಯ್ ವರ್ಮಾ ಹೊಸ ಮನೆ ಖರೀದಿಸಿದ್ದಾರೆ. ಫರಾ ಖಾನ್ ತಮ್ಮ ವ್ಲಾಗ್‌ನಲ್ಲಿ ಅವರ ಮನೆಯನ್ನು ತೋರಿಸಿದ್ದಾರೆ. ಹಲವು ವರ್ಷಗಳ ನಂತರ ಖರೀದಿಸಿದ ಈ ಮನೆ ಬಹಳ ಸುಂದರವಾಗಿದೆ ಎಂದು ಹೇಳಿಕೊಂಡಿದ್ದಾರೆ.
ವಿಜಯ್ ವರ್ಮಾ ಅವರ ಮನೆ ಸಮುದ್ರದ ಕಡೆಗೆ ಮುಖ ಮಾಡಿದೆ. ಇನ್ನು ಮನೆಯೊಳಗಿನ ದೊಡ್ಡ ಗಾಜಿನ ಕಿಟಕಿಯಿಂದ ಇಣುಕಿ ನೋಡಿದರೆ ಸಮುದ್ರವನ್ನು ನೋಡಿ ಆನಂದಿಸಬಹುದು ಎಂದು ತಿಳಿಸಿದ್ದಾರೆ.
ವಿಜಯ್ ವರ್ಮಾ ಅವರ ಊಟದ ಕೋಣೆಯೂ ಕೂಡ ಅದ್ಭುತವಾಗಿದೆ. ಈ ಕೋಣೆಗೆ ಚೆನ್ನಾಗಿ ಬೆಳಕು ಬರುವಂತೆ ವ್ಯವಸ್ಥೆ ಮಾಡಲಾಗಿದ್ದು, ಒಳಾಂಗಣದಲ್ಲಿಯೂ ಕೆಲವು ಗಿಡಗಳನ್ನು ಇಡಲಾಗಿದೆ.
ವಿಜಯ್ ವರ್ಮಾ ಅವರ ಮನೆಯ ಹಾಲ್ ಅತ್ಯಂತ ಸರಳವಾಗಿದೆ. ದೊಡ್ಡ ಸೋಫಾ ಹಾಗೂ ಚೇರುಗಳನ್ನು ಹಾಕಲಾಗಿದೆ. ಮನೆಯ ಪ್ರಾಂಗಣದಲ್ಲಿ ಬೇರೆ ಯಾವುದೇ ವಸ್ತುಗಳನ್ನು ಇಡದೇ ವಿಶಾಲವಾಗಿ ಮತ್ತು ಸರಳವಾಗಿ ಇಡಲಾಗಿದೆ.
ಇಲ್ಲಿ ವಿಜಯ್ ವರ್ಮಾ ಅವರು ಅಡುಗೆಮನೆಗೆ ಹೆಚ್ಚು ಆದ್ಯತೆ ನೀಡಿದಂತಿಲ್ಲ. ಕಾರಣ ಇವರ ಅಡುಗೆ ಮನೆ ದೊಡ್ಡದಾಗಿರದೇ ಚಿಕ್ಕದಾಗಿದೆ. ಅಡಿಗೆ ಮನೆಯಿಂದಲೂ ಹೊರಗೆ ಏನು ನಡೆಯುತ್ತದೆ ಎಂಬುದನ್ನು ನೋಡಬಹುದು. ಇದನ್ನು ಗಾಜಿನಿಂದ ಗೋಡೆ ಮಾಡಿದ್ದು, ಪಾರದರ್ಶಕವಾಗಿದೆ. ಹೊರಗಿನ ದೃಶ್ಯ ಕಾಣುತ್ತದೆ ಹೊರತು ಒಳಗಿನ ದೃಶ್ಯ ಹೊರಗಿನವರಿಗೆ ಕಾಣಿಸುವುದಿಲ್ಲ.
ವಿಜಯ್ ವರ್ಮಾ ಅವರ ಮಲಗುವ ಕೋಣೆಯೂ ಕೂಡ ಸರಳವಾಗಿದೆ. ಇದು ಬಾಲ್ಕನಿಗೆ ಸಂಪರ್ಕ ಹೊಂದಿದ್ದು, ಸುಂದರ ಸಮುದ್ರದ ನೋಟವನ್ನು ಕೂಡ ಆನಂದಿಸಬಹುದು.
ಬಾಲಿವುಡ್ ನಟಿ ಫರಾ ಖಾನ್ ವಿಜಯ್ ವರ್ಮಾ ಅವರ ಹೊಸ ಮನೆಗೆ ಭೇಟಿ ನೀಡಿದರು. ಅವರ ಸುಂದರವಾದ ಮನೆಯನ್ನು ನೋಡಿ ಖುಷಿಪಟ್ಟರು. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.