ಭಾರತೀಯ ಟ್ರಾಫಿಕ್ ರೂಲ್ಸ್ ಗೇಲಿ ಮಾಡಿ, ಮಹಿಳೆ ನಿಂದಿಸಿದ ತಾಪ್ಸೀ ಫಾರಿನ್ ಬಾಯ್‌ಫ್ರೆಂಡ್!
ಬಾಲಿವುಡ್ ನಟಿ ತಾಪ್ಸೀ ಪನ್ನು ಬಾಯ್‌ಫ್ರೆಂಡ್ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೊ ಜೊತೆ ಆಗಾಗ್ಗೆ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಇಬ್ಬರೂ ಒಟ್ಟಿಗೆ ಗೋವಾದಲ್ಲಿ ಡಿನ್ನರ್ ಎಂಜಾಯ್ ಮಾಡಿದ್ದರು. ಸಂದರ್ಶನವೊಂದರಲ್ಲಿ, ಅವರು ತಮ್ಮ ವೈಯಕ್ತಿಕ ಮತ್ತು ಪ್ರೊಫೆಷನಲ್ ಜೀವನವನ್ನು ಪ್ರತ್ಯೇಕವಾಗಿಡಲು ಇಷ್ಟ ಪಡುತ್ತಾರೆಂದಿದ್ದರು. ಈಗ ಮಥಿಯಾಸ್ ಭಾರತದಲ್ಲಿದ್ದಾರೆ. ಅವರು ಭಾರತೀಯ ಮಹಿಳೆಯನ್ನು ನಿಂದಿಸಿದ್ದು ಸುದ್ದಿಯಾಗುತ್ತಿದೆ. ಏನಿದು?
ಬಾಲಿವುಡ್ ನಟಿ ತಾಪ್ಸೀ ಬಾಯ್‌ಫ್ರೆಂಡ್ ಮಥಿಯಾಸ್ ಇದೀಗ ಭಾರತದಲ್ಲಿದ್ದಾರೆ. ಅವರು ಭಾರತದ ಸಂಚಾರಿ ನಿಯಮಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ದೇಶದಲ್ಲಿ ಮೊದಲ ಬಾರಿಗೆ ಡ್ರೈವ್ ಮಾಡಿದ ಬ್ಯಾಡ್ಮಿಂಟನ್ ಆಟಗಾರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಹೇಳಿದರು. ಇದರಲ್ಲಿ ದಾರಿಯುದ್ದಕ್ಕೂ ಮಾಡುವ ಹಾರ್ನ್ ಮತ್ತು ಗೂಗಲ್ ಮ್ಯಾಪ್ ಬಳಕೆ ಬಗ್ಗೆ ಬರೆದಿದ್ದಾರೆ.
ಮಥಿಯಾಸ್ ಡ್ರೈವ್ ಮಾಡುವಾಗ ರಸ್ತೆಯ ಮಧ್ಯದಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ, 10ಕ್ಕೂ ಹೆಚ್ಚು ಬಾರಿ ಹಾರ್ನ್ ಮಾಡಿದ್ದಾರೆ, ಎರಡು ಬಾರಿ ರೆಡ್ ಲೈಟ್ ಜಂಪ್ ಮಾಡಿದ್ದಾರೆ ಮತ್ತು ಮಿರರ್ ಬಳಸಿಲ್ಲ, ಎಂದು ಆರೋಪಿಸಿದ್ದಾರೆ.
ಭಾರತೀಯ ಟ್ರಾಫಿಕ್ ರೂಲ್ಸ್ ಹಾಗೂ ಅದನ್ನು ಫಾಲೋ ಮಾಡುವವರ ಬಗ್ಗೆಯೂ ಗೇಲಿ ಮಾಡಿದ್ದಾರೆ ತಾಪ್ಸೀ ಬಾಯ್ ಫ್ರೆಂಡ್. ಈ ಭರಾಟೆಯಲ್ಲಿ ಮಹಿಳೆಯನ್ನೂ ಗೌರವಿಸಿದೇ, ನಿಂದಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಥಿಯಾಸ್ ಪೋಸ್ಟಿಗೆ ಜನರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಪೋಸ್ಟನ್ನು ಶೇರ್ ಮಾಡಿಕೊಂಡಿದ್ದಾರೆ.
ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗಾಗಿ ಬ್ಯಾಡ್ಮಿಂಟನ್ ಆಟಗಾರದಾದ ಸಾತ್ವಿಕೈರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಮಥಿಯಾಸ್ ಭಾರತದಲ್ಲಿ ತರಬೇತಿ ನೀಡುತ್ತಿದ್ದಾರೆ.
ತಾಪ್ಸೀ ಪ್ರಸ್ತುತ 'ಲೂಪ್ ಲ್ಯಾಪೆಟಾ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
ಇದಲ್ಲದೆ, ಅವರು 'ರಶ್ಮಿ ರಾಕೆಟ್' 'ಶಬಾಶ್ ಮಿತು' ಮತ್ತು 'ಹಸೀನ್ ದಿಲ್ರುಬಾ. ನಂತಹ ಇಂಟರೆಸ್ಟಿಂಗ್ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.