ನೋಡಲೇಬೇಕಾದ ಸುಶಾಂತ್ ಸಿಂಗ್ ರಜಪೂತ್ ನಟನೆಯ 6 ಸಿನಿಮಾ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 5 ವರ್ಷಗಳಾಗಿವೆ. ಜೂನ್ 14, 2020 ರಂದು ಕೇವಲ 34 ವರ್ಷದಲ್ಲೇ ಅವರು ಇಹಲೋಕ ತ್ಯಜಿಸಿದರು. ಕೇವಲ 8 ವರ್ಷಗಳ ಚಿತ್ರರಂಗದ ಜೀವನದಲ್ಲಿ ಅವರ ಟಾಪ್ 6 ಫಿಲಂಗಳ ಮಾಹಿತಿ ಇಲ್ಲಿದೆ

6. ಶುದ್ಧ್ ದೇಸಿ ರೊಮ್ಯಾನ್ಸ್ (2013)
ಭಾರತದಲ್ಲಿ ಗಳಿಕೆ : 46.60 ಕೋಟಿ ರೂ.
ಜಾಗತಿಕ ಗಳಿಕೆ : 76.64 ಕೋಟಿ ರೂ.
ಸುಶಾಂತ್‌ರ ಎರಡನೇ ಚಿತ್ರ. ಪರಿಣಿತಿ ಚೋಪ್ರಾ ಮತ್ತು ವಾಣಿ ಕಪೂರ್ ಜೊತೆ ನಟಿಸಿದ್ದ ಈ ಹಿಟ್ ಚಿತ್ರವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ.
5. ಕೈ ಪೋ ಛೆ (2013)
ಭಾರತದಲ್ಲಿ ಗಳಿಕೆ : 49.67 ಕೋಟಿ ರೂ.
ಜಾಗತಿಕ ಗಳಿಕೆ : 83.39 ಕೋಟಿ ರೂ.
ಚೇತನ್ ಭಗತ್ ಅವರ '3 ಮಿಸ್ಟೇಕ್ಸ್ ಆಫ್ ಮೈ ಲೈಫ್' ಕಾದಂಬರಿಯ ಚಿತ್ರರೂಪ. ಸುಶಾಂತ್ ಜೊತೆ ರಾಜ್‌ಕುಮಾರ್ ರಾವ್ ಮತ್ತು ಅಮಿತ್ ಸಾಧ್ ನಟಿಸಿದ್ದ ಈ ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದಾರೆ. SSR ನ ಮೊದಲ ಚಿತ್ರ.
4. ಕೇದಾರನಾಥ್ (2018)
ಭಾರತದಲ್ಲಿ ಗಳಿಕೆ : 66.52 ಕೋಟಿ ರೂ.
ಜಾಗತಿಕ ಗಳಿಕೆ : 96.64 ಕೋಟಿ ರೂ.
ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರದಲ್ಲಿ ಸುಶಾಂತ್ ಜೊತೆ ಸಾರಾ ಅಲಿ ಖಾನ್ ನಟಿಸಿದ್ದಾರೆ. 2013 ರ ಕೇದಾರನಾಥ ಪ್ರವಾಹದ ಕಥೆ.
3. ಎಂ.ಎಸ್. ಧೋನಿ : ದಿ ಅನ್‌ಟೋಲ್ಡ್ ಸ್ಟೋರಿ (2016)
ಭಾರತದಲ್ಲಿ ಗಳಿಕೆ : 133.04 ಕೋಟಿ ರೂ.
ಜಾಗತಿಕ ಗಳಿಕೆ : 215.4 ಕೋಟಿ ರೂ.
ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರ ಕ್ರಿಕೆಟಿಗ ಎಂ.ಎಸ್. ಧೋನಿ ಅವರ ಜೀವನಚರಿತ್ರೆ. ಸುಶಾಂತ್ ಧೋನಿ ಪಾತ್ರದಲ್ಲಿ ಮಿಂಚಿದ್ದಾರೆ.
2. ಚಿಚೋರೆ (2019)
ಭಾರತದಲ್ಲಿ ಗಳಿಕೆ : 153.09 ಕೋಟಿ ರೂ.
ಜಾಗತಿಕ ಗಳಿಕೆ : 215.41 ಕೋಟಿ ರೂ.
ನಿತೇಶ್ ತಿವಾರಿ ನಿರ್ದೇಶನದ ಈ ಸೂಪರ್‌ಹಿಟ್ ಚಿತ್ರದಲ್ಲಿ ಸುಶಾಂತ್ ಜೊತೆ ಶ್ರದ್ಧಾ ಕಪೂರ್ ಮತ್ತು ವರುಣ್ ಶರ್ಮಾ ನಟಿಸಿದ್ದಾರೆ. ಸುಶಾಂತ್‌ರ ಕೊನೆಯ ಚಿತ್ರಗಳಲ್ಲಿ ಒಂದು.
1.ಪಿಕೆ (2014)
ಭಾರತದಲ್ಲಿ ಗಳಿಕೆ : 340.8 ಕೋಟಿ ರೂ.
ಜಾಗತಿಕ ಗಳಿಕೆ : 769.89 ಕೋಟಿ ರೂ.
ರಾಜ್‌ಕುಮಾರ್ ಹಿರಾನಿ ನಿರ್ದೇಶನದ 2014 ರ ಬ್ಲಾಕ್‌ಬಸ್ಟರ್ ಚಿತ್ರ. ಆಮಿರ್ ಖಾನ್, ಅನುಷ್ಕಾ ಶರ್ಮಾ ಮತ್ತು ಬೋಮನ್ ಇರಾನಿ ಜೊತೆ ಸುಶಾಂತ್ ನಟಿಸಿದ್ದಾರೆ.