ಸುಹಾನಾ ಖಾನ್ ಹೊಸ ಫೋಟೋ ವೈರಲ್; ಜನ ಹೇಗೆ ಪ್ರತಿಕ್ರಿಯಿಸಿದ್ದಾರೆ ಗೊತ್ತಾ?
ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ (Gauri Khan) ಅವರ ಪುತ್ರಿ ಸುಹಾನಾ ಖಾನ್ (Suhana Khan) ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಶಾ ಜೈರಾಮ್ ಅವರು ಕ್ಲಿಕ್ ಮಾಡಿದ ಹೊಸ ಫೋಟೋಗಳಲ್ಲಿ ಸುಹಾನಾ ಬಿಳಿ ಉಡುಗೆಯಲ್ಲಿ ಪೋಸ್ ನೀಡಿದ್ದು ಗೋಲ್ಡನ್ ಅವರ್ ಅವರ ಅಂದವನ್ನು ಇನ್ನೂ ಹೆಚ್ಚಿಸಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋಶೂಟ್‌ನಿಂದ ಸುಹಾನಾ ಖಾನ್ ಅವರು 2 ಫೋಟೋಗಳನ್ನು ಶೇರ್ ಮಾಡಿ ಅವುಗಳಿಗೆ 'ಹಾಯ್'ಎಂದು ಶೀರ್ಷಿಕೆ ನೀಡಿದ್ದಾರೆ.
ಸುಹಾನಾ ಖಾನ್ ಅವರ ಫೋಟೋಗಳಿಗೆ ಸ್ನೇಹಿತರು ಮತ್ತು ಕುಟುಂಬ ಹಾಗೂ ಫ್ಯಾನ್ಸ್ ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದಿದ್ದಾರೆ.
ಬಾಲ್ಯದ ಗೆಳತಿ ಅನನ್ಯಾ ಪಾಂಡೆ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮೊದಲ ವ್ಯಕ್ತಿಗಳಲ್ಲಿ ಒಬ್ಬರು. ಅಲನ್ನಾ ಪಾಂಡೆ,'ವಾವ್' ಎಂದು ಬರೆದರೆ, ಸುಹಾನಾ ಅವರ ಇತರ ಬಾಲ್ಯದ ಗೆಳತಿ ಶನಯಾ ಕಪೂರ್ 'ಬ್ಯೂಟಿ' ಎಂದಿದ್ದಾರೆ.
ಇದಲ್ಲದೆ ಸೆಲೆಬ್ರಿಟಿ ಫ್ಯಾಶನ್ ಫೋಟೋಗ್ರಾಫರ್ ಸಾಶಾ ಜೈರಾಮ್ ಅವರು ಈ ಫೋಟೋಶೂಟ್‌ನಿಂದ ಹೆಚ್ಚಿನ ಕ್ಲಿಕ್‌ಗಳನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.
22 ವರ್ಷ ವಯಸ್ಸಿನ ಸುಹಾನಾ ಬೇಸಿಗೆಯ ಬಿಳಿ ಉಡುಪಿನಲ್ಲಿ 'ಗಾಡೆಸ್ ವೈಬ್ಸ್' ನೀಡುತ್ತಿದ್ದಾರೆ ಎಂದು ಕಾಮೆಂಟ್ ಹಲವರು ಮಾಡಿದ್ದಾರೆ.
ಜೋಯಾ ಅಖ್ತರ್ ನಿರ್ದೇಶನದ ನೆಟ್‌ಫ್ಲಿಕ್ಸ್‌ನ ದಿ ಆರ್ಚೀಸ್ ಸಿನಿಮಾದ ಮೂಲಕ ಸುಹಾನಾ ನಟನೆಗೆ ಪಾದಾರ್ಪಣೆ ಮಾಡಲಿದ್ದಾರೆ. ಇವರ ಜೊತೆ ಹಲವಾರು ಸ್ಟಾರ್-ಕಿಡ್‌ಗಳನ್ನು ಲಾಂಚ್ ಮಾಡುಲಾಗುತ್ತಿದೆ.
ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ,ಜಾನ್ವಿ ಕಪೂರ್ ಅವರ ಸಹೋದರಿ ಖುಷಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಾರಾ ಶರ್ಮಾ ಸಲೂಜಾ, ಮಿಹಿರ್ ಅಹುಜಾ, ಡಾಟ್, ಯುವರಾಜ್ ಮೆಂಡಾ ಮತ್ತು ವೇದಂಗ್ ರೈನಾ ಕೂಡ ನಟಿಸಿದ್ದಾರೆ.