ಟ್ರೋಲ್‌ಗೆ ಹೆದರಿ ಓಂ ಪೆಡೆಂಟ್‌ ಇದ್ದ ಫೋಟೋ ಡಿಲೀಟ್‌ ಮಾಡಿದ್ರಾ ಶಾರುಖ್‌ ಪುತ್ರಿ?

First Published Apr 7, 2021, 6:08 PM IST

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್‌. ಆಗಾಗ ಅಡರೋಬಲ್‌ ಫೋಟೋಗಳನ್ನು ಸುಹಾನಾ ಶೇರ್‌ ಮಾಡುತ್ತಾರೆ. ಇತ್ತೀಚೆಗೆ ಸುಹಾನಾ ಖಾನ್ ತಮ್ಮ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರ ಸರಕ್ಕೆ  'ಓಂ' ಪೆಂಡೆಂಟ್ ಧರಿಸಿದ್ದರು. ಈ ಫೋಟೋವನ್ನು ನೋಡಿ ಜನರು ಮೆಚ್ಚಿದ್ದರು. ಆದರೆ ಫೋಟೋವನ್ನು ಹಂಚಿಕೊಂಡ ಸ್ವಲ್ಪ ಸಮಯದ ನಂತರ, ಸುಹಾನಾ ಅವುಗಳನ್ನು ಡಿಲಿಟ್‌ ಮಾಡಿದ್ದಾರೆ. ಟ್ರೋಲಿಂಗ್ ತಪ್ಪಿಸಲು ಸುಹಾನಾ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.