- Home
- Entertainment
- Cine World
- ನಟಿ ಶ್ರೀದೇವಿ ಇಷ್ಟೊಂದು ಅಹಂಕಾರಿಯೇ? ಚಿರಂಜೀವಿ ಸಿನಿಮಾ ತಿರಸ್ಕರಿಸಿದ ಕಾರಣ ಬಿಚ್ಚಿಟ್ಟ ನಿರ್ದೇಶಕ!
ನಟಿ ಶ್ರೀದೇವಿ ಇಷ್ಟೊಂದು ಅಹಂಕಾರಿಯೇ? ಚಿರಂಜೀವಿ ಸಿನಿಮಾ ತಿರಸ್ಕರಿಸಿದ ಕಾರಣ ಬಿಚ್ಚಿಟ್ಟ ನಿರ್ದೇಶಕ!
ಮೆಗಾಸ್ಟಾರ್ ಚಿರಂಜೀವಿ ಮತ್ತು ಕೋದಂಡರಾಮಿ ರೆಡ್ಡಿ ಕಾಂಬಿನೇಷನ್ ಅಂದರೆ ಹಿಟ್ ಗ್ಯಾರಂಟಿ. ಚಿರುಗೆ ಜಾಸ್ತಿ ಹಿಟ್ ಕೊಟ್ಟಿದ್ದೇ ಕೋದಂಡರಾಮಿ ರೆಡ್ಡಿ. ಆದ್ರೆ ಒಂದು ಸಿನಿಮಾದಲ್ಲಿ ಅಂದುಕೊಳ್ಳದ ಘಟನೆ ನಡೆಯಿತು.

ದಕ್ಷಿಣ ಭಾರತದ ಸ್ಟಾರ್ ನಟ ಚಿರಂಜೀವಿ ಹಾಗೂ ನಿರ್ದೇಶಕ ಕೋದಂಡರಾಮಿ ರೆಡ್ಡಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಇಡೀ ತೆಲುಗು ಅಭಿಮಾನಿಗಳು ಭಾರೀ ಖುಷಿ ಪಡುತ್ತಿಉದ್ದರು. 1990ರ ದಶಕದಲ್ಲಿ ಚಿರಂಜೀವಿ ಸ್ಟಾರ್ ನಟ. ಶ್ರೀದೇವಿ ಕೂಡ ಸ್ಟಾರ್ ಹೀರೋಯಿನ್. ಲೇಡಿ ಸೂಪರ್ ಸ್ಟಾರ್ ಅಂತಾನೆ ಫೇಮಸ್ ಆಗಿದ್ದರು.
‘ಕೊಂಡವೀಟಿ ದೊಂಗ’ ಸಿನಿಮಾಗೆ ಶ್ರೀದೇವಿ ಅವರನ್ನು ಹೀರೋಯಿನ್ ಆಗಿ ಮಾಡಬೇಕಿತ್ತು. ಅದು ಲೇಡಿ ಪೊಲೀಸ್ ಆಫೀಸರ್ ಪಾತ್ರ. ಪರುಚೂರಿ ಬ್ರದರ್ಸ್ ಕಥೆ ಹೇಳಲು ಹೋಗಿದ್ದರು. ಆದರೆ ಶ್ರೀದೇವಿ ವರ್ತನೆಗೆ ಶಾಕ್ ಆಗಿದ್ದರು ಎಂದು ಹೇಳಿಕೊಂಡದ್ದಾರೆ.
ಆಗ 'ನಾನು ಸಿನಿಮಾ ಮಾಡ್ತೀನಿ. ಆದರೆ ಟೈಟಲ್‌ನಲ್ಲಿ ನನ್ನ ಪಾತ್ರದ ಹೆಸರಿರಬೇಕು' ಎಂದು ನಟಿ ಶ್ರೀದೇವಿ ಹೇಳಿದರಂತೆ. ಹೀರೋಗೆ ಇಂಪಾರ್ಟೆನ್ಸ್ ಇಲ್ಲದ ಟೈಟಲ್ ಸರಿಯಲ್ಲ ಅಂತ ಕಥೆ ಹೇಳಿದವರು ರಿಜೆಕ್ಟ್ ಮಾಡಿ ಹೋದರು.
ಆಮೇಲೆ ವಿಜಯಶಾಂತಿಗೆ ಕಥೆ ಹೇಳಿ ಓಕೆ ಮಾಡಿಸಿದರು. ಇದೇ ಸಿನಿಮಾದಲ್ಲಿ ನಟಿ ರಾಧ ಕೂಡ ಇದ್ದರು. ಸಿನಿಮಾ ಸೂಪರ್ ಹಿಟ್ ಆಯ್ತು. ಆದರೆ, ಶ್ರೀದೇವಿಗೆ ಕಥೆ ಇಷ್ಟವಾದರೂ ಹೆಸರಿನಲ್ಲಿ ತನ್ನ ಹೆಸರಿಲ್ಲವೆಂದು ರಿಜೆಕ್ಟ್ ಮಾಡಿ ಕೈ-ಕೈ ಹಿಸುಕಿಕೊಂಡಿದ್ದರು.
ಒಟ್ಟಾರೆಯಾಗಿ ನಟಿ ಶ್ರೀದೇವಿ ಸೂಪರ್ ಹಿಟ್ ಸಿನಿಮಾವನ್ನು ಕೈಬಿಟ್ಟಿದ್ದರು. ಆದರೆ, ‘ಜಗದೇಕ ವೀರುಡು ಅತಿಲೋಕ ಸುಂದರಿ’ಯಲ್ಲಿ ಶ್ರೀದೇವಿ ಸಿನಿಮಾ ತೆಲುಗು ಚಿತ್ರರಂಗದ ದೊಡ್ಡ ಹಿಟ್ ಸಿನಿಮಾವಾಯಿತು. ಇಲ್ಲಿ ಶ್ರೀದೇವಿ ಪಾತ್ರಕ್ಕೂ ಇಂಪಾರ್ಟೆನ್ಸ್ ಕೊಡಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.