ಇಳೆಯರಾಜಗೋಸ್ಕರ ನೋವಿನ ಹಾಡನ್ನೂ ಖುಷಿಯಾಗಿಯೇ ಹಾಡಿದ್ದ ಎಸ್‌ಪಿಬಿ
ಇಳಯರಾಜ ಹಾಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಸಂಗೀತ ಲೋಕದ ಮಹಾನ್ ದಿಗ್ಗಜರು, ಒಮ್ಮೆ ಎಸ್‌ಪಿಬಿ ಅವರು ಇಳಯರಾಜಗಾಗಿ ನೋವು ತುಂಬಿದ ಹಾಡೊಂದನ್ನು ಖುಷಿಯಾಗಿಯೇ ಹಾಡಿದ್ದರಂತೆ. ಯಾವ ಹಾಡದು?
ಇಳಯರಾಜ ಸಂಗೀತದಲ್ಲಿ ಎಸ್‌ಪಿಬಿ ಅವರು ಹಲವು ಹಿಟ್ ಹಾಡುಗಳನ್ನು ಹಾಡಿದ್ದಾರೆ. ಇವರಿಬ್ಬರೂ ಗಾಯಕ-ಸಂಗೀತ ನಿರ್ದೇಶಕ ಎಂಬ ಸಂಬಂಧವನ್ನೂ ಮೀರಿ ಒಳ್ಳೆಯ ಗೆಳೆಯರಾಗಿದ್ದರು.
SPB ಮತ್ತು ಇಳಯರಾಜ ಕಾಂಬಿನೇಷನ್‌ನಲ್ಲಿ ಬಂದ ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದಲ್ಲೂ ನಗುವ ನಯನ, ಕೇಳದೆ ನಿಮಗೀಗ ಸೇರಿದಂತೆ ಇವರಿಬ್ಬರ ಜೋಡಿಯಲ್ಲಿ ಬಂದ ಹಾಡುಗಳು ಎವರ್‌ಗ್ರೀನ್ ಸೂಪರ್ ಹಿಟ್ ಹಾಡುಗಳು ಎಂದೆಸಿಕೊಂಡಿವೆ.
ಮೌನರಾಗಂ ಸಿನಿಮಾ
ಹಾಗೆಯೇ 1986ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ ನಟನೆಯ ತಮಿಳಿನ ಮೌನರಾಗಂ ಸಿನಿಮಾದಲ್ಲಿ ಇಳಯರಾಜ ಸಂಗೀತದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು.
SPB ಹಾಡಿದ ದುಃಖದ ಹಾಡು
ಇದರ ಒಂದು ಹಾಡನ್ನು ಗಾಯಕ ಎಸ್.ಪಿ. ಬಾಲಸುಬ್ರಹ್ಮಮಣ್ಯಂ ಅವರು ಹಾಡಿನ ಸಂದರ್ಭ ಗೊತ್ತಿರಲಿಲ್ಲವಂತೆ. ವಿರಹ ಗೀತೆಯೊಂದನ್ನು ಖುಷ್ ಖುಷಿಯಿಂದಲೇ ಹಾಡಿದ್ದರಂತೆ.
ಆದರದು ದುಃಖದ ಹಾಡಾಗಿದ್ದು, ಖುಷಿಯಾಗಿ ಹಾಡಿದ್ದಕ್ಕೆ ಅದೇ ಹಾಡನ್ನು ಮತ್ತೊಮ್ಮೆ ರೆಕಾರ್ಡ್ ಮಾಡಲಾಯಿತಂತೆ. ಅದೇ ಸೂಪರ್ ಹಿಟ್ ಆಯ್ತು ಎಂದು ಇಳಯರಾಜ ಅವರೇ ಹೇಳಿಕೊಂಡಿದ್ದಾರೆ. ಅದುವೇ ತಮಿಳಿನ ನೀಲವೇ ವಾ ಎಂಬ ಹಾಡು.