- Home
- Entertainment
- Cine World
- ಇಳಯರಾಜ ಹೆಸರಿನಲ್ಲಿರುವ ಈ ದಾಖಲೆ ಬಹುತೇಕರಿಗೆ ಗೊತ್ತೇ ಇಲ್ಲ: ಹೊಸ ಪ್ರಯೋಗಗಳ ಸಂಗೀತ ಮಾಂತ್ರಿಕ
ಇಳಯರಾಜ ಹೆಸರಿನಲ್ಲಿರುವ ಈ ದಾಖಲೆ ಬಹುತೇಕರಿಗೆ ಗೊತ್ತೇ ಇಲ್ಲ: ಹೊಸ ಪ್ರಯೋಗಗಳ ಸಂಗೀತ ಮಾಂತ್ರಿಕ
Ilaiyaraaja Composed a Song: ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ ಹಲವು ಹಾಡು ರಚಿಸಿದ್ದರು. ಇಳಯರಾಜ ಹೊಸ ಪ್ರಯೋಗವೊಂದು 1995ರಲ್ಲಿ ಸಂಗೀತ ಪ್ರೇಮಿಗಳನ್ನು ಆಶ್ಚರ್ಯಚಕಿತಗೊಳಿಸಿತ್ತು.

ಇಳಯರಾಜ
ಇಳಯರಾಜ ಅಂದ್ರೆ ಸಂಗೀತ ಲೋಕದ ದೈತ್ಯ ಪ್ರತಿಭೆ. ಹೊಸ ಪ್ರಯೋಗಳ ಕಾರಣದಿಂದ ಇಳಯರಾಜ ಸದಾ ಚರ್ಚೆಯಲ್ಲಿರುತ್ತಾರೆ. ಇಳಯರಾಜ ಯಾವುದೇ ಸಂಗೀತ ಸಾಧನಗಳಿಲ್ಲದೇ ಹಾಡೊಂದನ್ನು ರಚಿಸಿದ್ದಾರೆ.
ಮಾಯಾ ಬಜಾರ್
1995ರಲ್ಲಿ ಬಂದ 'ಮಾಯಾಬಜಾರ್' ಚಿತ್ರಕ್ಕೆ ಇಳಯರಾಜಾ ಸಂಗೀತ ಕೊಟ್ಟಿದ್ರು. ರಾಮ್ಕಿ ಹೀರೋ, ಊರ್ವಶಿ ಹೀರೋಯಿನ್. ವಿವೇಕ್, ವಿಷ್ಣು, ಚಿನ್ನಿ ಜಯಂತ್ ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ರು. ಪಂಚು ಅರುಣಾಚಲಂ ಅವರ ಪತ್ನಿ ಮೀನಾ ನಿರ್ಮಾಪಕಿ. ಈ ಚಿತ್ರದಲ್ಲಿ ರಾಜಾ ವಾದ್ಯಗಳನ್ನೇ ಬಳಸದೆ ಅಕಪೆಲ್ಲಾ ಶೈಲಿಯಲ್ಲಿ ಹಾಡು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ರು.
'ನಾನ್ ಪೊರಂತು ಹಾಡು
'ಮಾಯಾಬಜಾರ್' ಚಿತ್ರದ 'ನಾನ್ ಪೊರಂತು' ಹಾಡನ್ನ ರಾಜಾ ವಾದ್ಯಗಳಿಲ್ಲದೆ ಮಾಡಿದ್ರು. ಜಾನಕಿ ಹಾಡಿದ್ದ ಈ ಹಾಡಿಗೆ ಇಳಯರಾಜಾ ಅವರೇ ಸಾಹಿತ್ಯ ಬರೆದಿದ್ರು. ಲೇಖಾ, ವಿಜಿ, ಗೀತಾ, ಅನುರಾಧಾ ಕೋರಸ್ ಹಾಡಿದ್ರು. ಕೋರಸ್‌ನ್ನೇ ಹಿನ್ನೆಲೆ ಸಂಗೀತಕ್ಕೆ ಬಳಸಿದ್ರು. ಈ ಹಾಡು ರಾಜಾ ಅವರ underrated ಹಾಡುಗಳಲ್ಲಿ ಒಂದು.
ಕೇವಲ ಕೋರಸ್ ಬಳಸಿ ಈ ಹಾಡು
ರಾಜಾ 1995ರಲ್ಲಿ ಮಾಡಿದ ಅಕಪೆಲ್ಲಾ ಹಾಡನ್ನ ಎ.ಆರ್.ರೆಹಮಾನ್ 1993ರಲ್ಲೇ 'ತಿರುಡಾ ತಿರುಡಾ' ಚಿತ್ರದ 'ರಾಸಾತಿ' ಹಾಡಲ್ಲಿ ಮಾಡಿದ್ರು. ಕೇವಲ ಕೋರಸ್ ಬಳಸಿ ಈ ಹಾಡು ಮಾಡಿದ್ರು. ಈ ಹಾಡು ಸೂಪರ್ ಹಿಟ್ ಆಯ್ತು. ಆದ್ರೆ 'ಮಾಯಾಬಜಾರ್' ಸೋತಿದ್ದರಿಂದ ರಾಜಾ ಹಾಡು ಜನಪ್ರಿಯ ಆಗಲಿಲ್ಲ.