- Home
- Entertainment
- Cine World
- ಮನೆಯಲ್ಲಿ ಚೆಂದದ ಹೆಂಡ್ತಿ, ಮುದ್ದಾದ ಮಕ್ಕಳಿದ್ರೂ ಅಕ್ರಮ ಸಂಬಂಧದಲ್ಲಿ ಸೌಂಡ್ ಮಾಡಿದ ನಟರಿವರು
ಮನೆಯಲ್ಲಿ ಚೆಂದದ ಹೆಂಡ್ತಿ, ಮುದ್ದಾದ ಮಕ್ಕಳಿದ್ರೂ ಅಕ್ರಮ ಸಂಬಂಧದಲ್ಲಿ ಸೌಂಡ್ ಮಾಡಿದ ನಟರಿವರು
ದಕ್ಷಿಣ ಭಾರತದ ಕೆಲ ನಟರು ಇನ್ನೂ ಹೆಂಡ್ತಿ ಜೊತೆಗೆ ಸಂಸಾರ ಮಾಡುತ್ತಿರುವಾಗಲೇ ಅಕ್ರಮ ಸಂಬಂಧ ಇಟ್ಟುಕೊಂಡು ಸೌಂಡ್ ಮಾಡಿದ್ದರು.

ಅಕ್ರಮ ಸಂಬಂಧ ಹೊಂದಿದ ಓರ್ವ ನಟಿ ಮಾತ್ರ ಮದುವೆಯಾಗಿದ್ದಾರೆ. ಇನ್ನುಳಿದವರು ಬೇರೆ ಬೇರೆ ಆಗಿದ್ದು, ಕೆಲವರು ಬೇರೆಯವರ ಜೊತೆ ಇನ್ನೊಂದು ಮದುವೆ ಕೂಡ ಆಗಿದ್ದಾರೆ.
ನಾಗಾರ್ಜುನ ಹಾಗೂ ಟಬು
ಟಬು ಅವರಿಗೆ ಈಗ 51 ವರ್ಷ ವಯಸ್ಸು. ಹೀಗಿದ್ದರೂ ಅವರು ಸಿಂಗಲ್ ಆಗಿಯೇ ಉಳಿದಿದ್ದಾರೆ. ಸಹನ ನಾಗಾರ್ಜುನ, ಟಬು ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ. ಆಗ ನಾಗಾರ್ಜುನಗೆ ಮದುವೆಯಾಗಿ ಮಗ ನಾಗಚೈತನ್ಯ ಕೂಡ ಹುಟ್ಟಿದ್ದನು. ಹದಿನೈದು ವರ್ಷಗಳ ಕಾಲ ಈ ಜೋಡಿ ತಮ್ಮ ಸಂಬಂಧವನ್ನು ಗುಟ್ಟಾಗಿ ಇಟ್ಟಿತ್ತು ಎನ್ನಲಾಗಿದೆ. ಆಮೇಲೆ ಅವರು ಅಮಲಾ ಎನ್ನುವವರನ್ನು ಮದುವೆಯಾಗಿ ಟಬು ಜೊತೆಗಿನ ಸಂಬಂಧವನ್ನು ಅಂತ್ಯ ಮಾಡಿದರು.
ರವಿ ಮೋಹನ್ , ಕೆನಿಷಾ
ಖ್ಯಾತ ನಟ ಜಯಂ ರವಿ ಹಾಗೂ ಆರತಿ ಅವರ ಡಿವೋರ್ಸ್ ಕೇಸ್ ಇನ್ನೂ ಕೋರ್ಟ್ ಅಂಗಳದಲ್ಲಿದೆ. ಗಾಯಕಿ ಕೆನಿಷಾ ಜೊತೆ ರವಿ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ಆರತಿ ಆರೋಪ ಮಾಡಿದ್ದರು. ಆಗ ಇದನ್ನು ತಳ್ಳಿ ಹಾಕಿದ್ದ ರವಿ, ಕೆನಿಷಾ ಈಗ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ. ಇದನ್ನು ವೀಕ್ಷಕರು ವಿರೋಧ ಮಾಡಿದ್ದಾರೆ.
ಕಮಲ್ ಹಾಸನ್, ಗೌತಮಿ
ಕಮಲ್ ಹಾಸನ್ ಹಾಗೂ ಗೌತಮಿ ಅವರು ರಿಲೇಶನ್‌ಶಿಪ್‌ನಲ್ಲಿದ್ದರು. 1999ರಲ್ಲಿ ಮದುವೆ ಮುರಿದ ಬಳಿಕ ಗೌತಮಿ ಅವರು ಕಮಲ್ ಹಾಸನ್ ಜೊತೆ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಒಟ್ಟೂ 35 ವರ್ಷಗಳ ಕಾಲ ಈ ಸಂಬಂಧ ಮುಂದುವರೆದಿದ್ದರೂ ಕೂಡ, ಈ ಜೋಡಿ ಮದುವೆ ಆಗಲಿಲ್ಲ. ಇವರ ಈ ಸಂಬಂಧ ಅಭಿಮಾನಿಗಳಿಗೆ ಇಷ್ಟವೇ ಇರಲಿಲ್ಲ. 2016ರಲ್ಲಿ ಇವರಿಬ್ಬರು ದೂರ ಆದರು.
ಬೋನಿ ಕಪೂರ್, ಶ್ರೀದೇವಿ
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರು ಮೋನಾರನ್ನು ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆಗಲೇ ನಟಿ ಶ್ರೀದೇವಿ, ಬೋನಿ ಕಪೂರ್ ಲವ್ ಶುರುವಾಗಿತ್ತು. ಆಮೇಲೆ ಬೋನಿ ಕಪೂರ್ ಅವರು ಮೊದಲ ಪತ್ನಿಗೆ ಡಿವೋರ್ಸ್ ಕೊಡದೆ ಶ್ರೀದೇವಿಯನ್ನು ಮದುವೆಯಾದರು. ಶ್ರೀದೇವಿ ಸಾಯುವವರೆಗೂ ಕೂಡ ಮೋನಾ ಮಕ್ಕಳು, ಶ್ರೀದೇವಿ ಮಕ್ಕಳು ಮಾತನಾಡಿರಲಿಲ್ಲ.
ನಯನತಾರಾ, ಪ್ರಭುದೇವ
ಟಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಯನತಾರಾ ಅವರು ಪ್ರಭುದೇವ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಕೊರಿಯೋಗ್ರಾಫರ್, ಡೈರೆಕ್ಟರ್ ಪ್ರಭುದೇವ ಅವರಿಗೆ ಆಗ ರಾಮಲತಾ ಜೊತೆ ಮದುವೆಯಾಗಿ ಮೂವರು ಮಕ್ಕಳಿದ್ದರು. ಆದರೂ ಅವರು ರಿಲೇಶನ್‌ಶಿಪ್‌ನಲ್ಲಿದ್ದರು. ರಾಮಲತಾ ಅವರು ತಿರುಗಿಬಿದ್ದಿದ್ದಕ್ಕೆ ನಯನತಾರಾ- ಪ್ರಭುದೇವ ಅವರು ರಿಲೇಶನ್‌ಶಿಪ್ ಅಂತ್ಯಗೊಳಿಸಿದರು. ಈಗ ಪ್ರಭುದೇವ ಅವರು ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು, ಇನ್ನೊಂದು ಮದುವೆ ಆಗಿದ್ದಾರೆ. ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ಆಗಿದ್ದಾರೆ.