- Home
- Entertainment
- Cine World
- Balck & Golden Dressನಲ್ಲಿ ಮಿಲ್ಕಿ ಬ್ಯೂಟಿ Tamannaah: ನಿಜ ಹೇಳಿ, Urfiಯನ್ನು ಕಾಪಿ ಮಾಡಿದ್ದಲ್ವಾ ಎಂದ ನೆಟ್ಟಿಗರು!
Balck & Golden Dressನಲ್ಲಿ ಮಿಲ್ಕಿ ಬ್ಯೂಟಿ Tamannaah: ನಿಜ ಹೇಳಿ, Urfiಯನ್ನು ಕಾಪಿ ಮಾಡಿದ್ದಲ್ವಾ ಎಂದ ನೆಟ್ಟಿಗರು!
ನಟಿ ತಮನ್ನಾ ಕ್ರೇಜ್ ಕಡಿಮೆ ಆಗಿಲ್ಲ. ಸೂಪರ್ ಫಾರ್ಮ್ನಲ್ಲಿ ಮುಂದುವರೆದಿರುವ ತಮನ್ನಾ ಭಾಟಿಯಾ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ಫೋಟೋಗಳನ್ನು ಶೇರ್ ಮಾಡಿದ್ದಾರೆ.

ದಕ್ಷಿಣ ಚಿತ್ರರಂಗದ ಸ್ಟಾರ್ ನಟಿ ತಮನ್ನಾ ಭಾಟಿಯಾ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ಅದ್ಭುತ ಸೌಂದರ್ಯದಿಂದಲೂ ಸದ್ದು ಮಾಡುತ್ತಾರೆ. ನಟಿ ಶೇರ್ ಮಾಡೋ ಪ್ರತೀ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತವೆ. ಅಭಿಮಾನಿಗಳ ಗಮನವನ್ನು ಸೆಳೆಯುತ್ತವೆ.
ಇದೀಗ ನಟಿ ಹೊಸದಾಗಿ ಹಂಚಿಕೊಂಡಿರುವ ಫೋಟೋಗಳೂ ಸಹ ಸಖತ್ ಸದ್ದು ಮಾಡುತ್ತಿವೆ. ಬ್ಲ್ಯಾಕ್ ಆ್ಯಂಡ್ ಗೋಲ್ಡನ್ ಡ್ರೆಸ್ನಲ್ಲಿ ನಟಿ ಮೋಡಿ ಮಾಡುವ ನೋಟ ಬೀರಿದ್ದಾರೆ. ನಟಿ ನಿರಾಭರಣ ಸುಂದರಿಯಂತೆ ಫೋಟೋಗಳಲ್ಲಿ ಬಲು ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬ್ಲ್ಯಾಕ್ ಆ್ಯಂಡ್ ಗೋಲ್ಡನ್ ಡ್ರೆಸ್ನಲ್ಲಿ ತಮನ್ನಾ ಭಾಟಿಯಾ ಚಿತ್ರಕ್ಕೆ ಫ್ಯಾನ್ಸ್ ಬಗೆಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಹುತೇಕ ಜನರು ಸೋ ಹಾಟ್ ಮಿಲ್ಕಿ ಬ್ಯೂಟಿ, ಸೆಕ್ಸಿ, ಬ್ಯೂಟಿಫುಲ್ ನೀವು ಉರ್ಫಿ ಜಾವೇದ್‌ರನ್ನು ಕಾಪಿ ಮಾಡಿದ್ದಲ್ವಾ ಎಂದಿದ್ದಾರೆ.
ಬೆಳ್ಳಿತೆರೆಯಲ್ಲಿ ಗ್ಲಾಮರ್ ಟ್ರೀಟ್ ನೀಡುತ್ತಾ ತನ್ನ ನಟನೆಯಿಂದ ತಮನ್ನಾ ಅಭಿಮಾನಿಗಳ ಮನಗೆದ್ದಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿ ತಮನ್ನಾ ನಟಿಸಿದ್ದು, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ತಮನ್ನಾ ಸೂಪರ್ ಫಾರ್ಮ್ನಲ್ಲಿದ್ದಾರೆ. ಐಟಂ ಹಾಡುಗಳಲ್ಲಿಯೂ ಸೊಂಟ ಕುಣಿಸಿತ್ತಾ ಭಾರೀ ಫೇಮಸ್ ಆಗಿದ್ದಾರೆ. ಐಟಂ ಸಾಂಗ್ಗೆ ಡ್ಯಾನ್ಸ್ ಮಾಡಲು ತಮನ್ನಾ ಭಾರೀ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ.
ತಮನ್ನಾ ಭಾಟಿಯಾ ಸದ್ಯ ತೆಲಗು ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಜೊತೆಗೆ ಅವರು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಅವರ ಜೋಡಿ ಈಗ ಸೌತ್ನಲ್ಲಿ ಹಿಟ್ ಆಗಿದೆ.
ಸುಮಾರು ಎರಡು ದಶಕಗಳಿಂದ ದಕ್ಷಿಣ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ಫಿಟ್ನೆಸ್, ಆರೋಗ್ಯಕರ ಜೀವನ, ಸೌಂದರ್ಯದ ಮಹತ್ವ ಸಾರುತ್ತಾರೆ. ಈ ಪೈಕಿ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಕೂಡ ಅಗ್ರ ಕ್ರಮಾಂಕದಲ್ಲಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ 24.3 ಮಿಲಿಯನ್ ಫಾಲೋವರ್ಸ್ ಅನ್ನು ತಮನ್ನಾ ಸಂಪಾದಿಸಿದ್ದು, ಈವರೆಗೆ 2,029 ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಪ್ರತೀ ಪೋಸ್ಟ್ಗಳು ನಟಿಯ ಸೌಂದರ್ಯವನ್ನು ಬಣ್ಣಿಸುತ್ತಿವೆ.