SIIMA; ಸೈಮಾ ಸಮಾರಂಭದಲ್ಲಿ ಮಿಂಚಿದ ದಕ್ಷಿಣದ ಸುಂದರಿಯರು, ಯಾರ್ಯಾರ ಲುಕ್ ಹೇಗಿದೆ ನೋಡಿ
ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸೈಮಾ ಸಮಾರಂಭದಲ್ಲಿ ಸೌತ್ ನಟಿಯರು ಸುಂದರವಾಗಿ ಕಂಗೊಳಿಸುತ್ತಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ನಟಿಸರು ಸೈಮಾ ಸಮಾರಂಭದಲ್ಲಿ ಮಿಂಚಿದರು. ನಟಿಮಣಿಯನ್ನು ಸುಂದರ ನೋಟವನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.
ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸೆಪ್ಟಂಬರ್ 10, 11ರಂದು ಬೆಂಗಳೂರಿನಲ್ಲಿ 10ನೇ ಸೈಮಾ ನಡೆಯಲಿದ್ದು ದಕ್ಷಿಣ ಭಾರತದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಈ ಬಾರಿಯ ಸೈಮಾ ವಿಶೇಷ ಎಂದರೆ ಕಳೆದ ವರ್ಷ ನಿಧನ ಹೊಂದಿದ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ಗೌರವ ನೀಡಲಾಗಿದೆ. ಪುನೀತ್ ನೆನಪಲ್ಲಿ ಈ ಬಾರಿಯ ಸೈಮಾ ಕಾರ್ಯಕ್ರಮವನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ.
ಬೆಂಗಳೂರಿನಲ್ಲಿ ನಡೆದ ಅದ್ದೂರಿ ಸೈಮಾ ಸಮಾರಂಭದಲ್ಲಿ ಸೌತ್ ನಟಿಯರು ಸುಂದರವಾಗಿ ಕಂಗೊಳಿಸುತ್ತಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ ನಟಿಸರು ಸೈಮಾ ಸಮಾರಂಭದಲ್ಲಿ ಮಿಂಚಿದರು. ನಟಿಮಣಿಯನ್ನು ಸುಂದರ ನೋಟವನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.
ನಟಿ ರಚಿತಾ ರಾಮ್ ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಟಿಯರು ಅವಾರ್ಡ್ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಗ್ಲಾಮರ್ ಬಟ್ಟೆಯಲ್ಲಿ ಮಿಂಚುತ್ತಾರೆ. ಆದರೆ ಸೌತ್‌ನ ಅದರಲ್ಲೂ ಸ್ಯಾಂಡಲ್ ವುಡ್ ನಟಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವುದು ವಿಷೇಷವಾಗಿತ್ತು. ಹಸಿರು ಬಣ್ಣದ ಅಂಬ್ರಲ ಚೂಡಿದಾರದಲ್ಲಿ ಡಿಂಪಲ್ ಕ್ವೀನ್ ಕೊಂಗಳಿಸಿದ್ದರು.
ರಾಕಿಂಗ್ ಸ್ಟಾರ್ ಪತ್ನಿ, ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಸೀರೆಯಲ್ಲಿ ಮಿಂಚಿದ್ದಾರೆ. ಯಶ್ ಕೈ ಹಿಡಿದು ರಾಕಿಂಗ್ ಎಂಟ್ರಿ ಕೊಟ್ಟಿರುವ ರಾಧಿಕಾ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ರಾಧಿಕಾ ಸಾಂಪ್ರದಾಯಿಕ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ.
ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಕೂಡ ಸೀರೆಯಲ್ಲಿ ಮಿಂಚಿದ್ದಾರೆ. ಸೈಮಾ ರೆಡ್ ಕಾರ್ಪೆಟ್ ಮೇಲೆ ಕ್ಯಾಮರಾಗೆ ಪೋಸ್ ನೀಡಿರುವ ಸುಮಲತಾ ಸುಂದರ ಲುಕ್ ವೈರಲ್ ಆಗಿದೆ. ಇನ್ನು ನಟಿ ಅಮೃತಾ ಕೂಡ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಲತಾ ಅಂಬರೀಶ್ ಅವರಿಂದ ಪ್ರಶಸ್ತಿ ಸ್ವೀಕರಿಸಿರುವ ಅಮೃತಾ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ.
ನಟಿ ಶಾನ್ವಿ ಶ್ರೀವಾತ್ಸವ್ ಕೂಡ ಸೀರೆಯಲ್ಲಿ ಮಿಂಚಿದ್ದಾರೆ. ನೀಲಿ ಬಣ್ಣದ ಮಿರ ಮಿರ ಮಿಂಚುವ ಸೀರೆಯಲ್ಲಿ ಮಾಸ್ಟರ್ ಪೀಸ್ ಸುಂದರಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕ ಮೂಲದ ತೆಲುಗು ಸ್ಟಾರ್ ನಟಿ ಕೃತಿ ಶೆಟ್ಟಿ ಕೂಡ ಸೀರೆಯಲ್ಲಿ ಮಿಂಚಿದ್ದಾರೆ. ಮಿರ ಮಿರ ಕಪ್ಪು, ಕೆಂಪು ಬಣ್ಣದ ಸೀರೆಯಲ್ಲಿ ಕೃತಿ ಕಾಣಿಸಿಕೊಂಡಿದ್ದಾರೆ. ತಾನು ಗೆದ್ದ ಪ್ರಶಸ್ತಿ ಹಿಡಿದು ಪೋಸ್ ನೀಡಿದ್ದಾರೆ.
ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿ, ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಕೂಡ ಅಭಿಮಾನಿಗಳ ಹೃದಯ ಗೆದ್ದಿದ್ದಾಕೆ. ನಟಿ ಶ್ರೀಲೀಲಾ ಕೆಂಪು ಬಣ್ಣದ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕರ್ನಾಟಕ ಮೂಲದ ಮತ್ತೋರ್ವ ನಟಿ ಪೂಜಾ ಹೆಗ್ಡೆ ಕೂಡ ಸುಂದರವಾದಗಿ ಕಂಗೊಳಿಸುತ್ತಿದ್ದರು. ಪಿಂಕ್ ಬಣ್ಣದ ಲೆಹಂಗಾದಲ್ಲಿ ಪೂಜಾ ರಾರಾಜಿಸುತ್ತಿದ್ದರು.
ಸ್ಯಾಂಡಲ್ ವುಡ್ ನಟಿ ಆಶಿಕಾ ರಂಗನಾಥ್ ವಿಭಿನ್ನವಾದ ಬಟ್ಟೆಯಲ್ಲಿ ಗಮನ ಸೆಳೆದರು. ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆಶಿಕಾ ಪ್ರಶಸ್ತಿ ಜೊತೆ ಮಸ್ತ್ ಪೋಸ್ ನೀಡಿದ್ದಾರೆ. ಇನ್ನು ನಟಿ ಮಾನ್ವಿತಾ ಕೂಡ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ರೆಡ್ಡಿ ಖ್ಯಾತಿಯ ನಟಿ ಶಾಲಿನಿ ಪಾಂಡೆ ಪಿಂಕ್ ಬಣ್ಣದ ಗೌನ್ ನಲ್ಲಿ ಕಾಣಿಸಿಕೊಂಡರು. ರೆಡ್ ಕಾರ್ಪೆಟ್ ಮೇಲೆ ಮಸ್ತ್ ಪೋಸ್ ನೀಡಿರುವ ಶಾಲಿನಿ ಫೋಟೋ ಅಭಿಮಾನಿಗಳ ಗಮನಸೆಳೆಯುತ್ತಿದೆ. ಇನ್ನು ಕನ್ನಡ ಸೇರಿದಂತೆ ಅನೇಕ ಭಾಷೆಯಲ್ಲಿ ನಟಿಸಿರುವ ತಮಿಳು ಸ್ಟಾರ್ ವರಲಕ್ಷ್ಮಿ ಶರತ್ ಕುಮಾರ್ ಅವರ ಸರಳ ಸುಂದರ ನಟ ಗಮನ ಸೆಳೆಯುತ್ತಿದೆ.