ಯೂಟ್ಯೂಬ್ ಚಾನೆಲ್ಸ್ ವಿರುದ್ಧ ಮಾನನಷ್ಟ ಕೇಸ್ ಹಾಕಿದ ಸಮಂತಾ
ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕೋಪ ಮಾನನಸ್ಟ ಕೇಸ್ ದಾಖಲಿಸಿದ ನಟಿ

ಇತ್ತೀಚೆಗಷ್ಟೇ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ಬೇರೆಯಾಗುವುದಾಗಿ ಘೋಷಿಸಿದ ಸಮಂತಾ ರುತ್ ಪ್ರಭು ಈ ಕಠಿಣ ಸಂದರ್ಭಗಳಲ್ಲಿ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ನಟಿ ತನ್ನ ಬಗ್ಗೆ ದುರುದ್ದೇಶಪೂರಿತ ವಿಷಯವನ್ನು ಸ್ಟ್ರೀಮಿಂಗ್ ಮಾಡಿದ್ದಕ್ಕಾಗಿ ಈಗ ಕೆಲವು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.
ಸುಮನ್ ಟಿವಿ, ತೆಲುಗು ಜನಪ್ರಿಯ ಟಿವಿ, ಮತ್ತು ಇನ್ನೂ ಕೆಲವು ಯೂಟ್ಯೂಬ್ ಚಾನೆಲ್‌ಗಳು ತಮ್ಮ ಚಾನೆಲ್‌ಗಳಲ್ಲಿ ನಟಿಯ ಇಮೇಜ್ ಹಾಳು ಮಾಡಿದ್ದಕ್ಕಾಗಿ ಸಮಂತಾ ಅವರಿಂದ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿವೆ.
ವೆಂಕಟ್ ರಾವ್ ಎಂಬ ವಕೀಲರ ವಿರುದ್ಧ ಸಮಂತಾ ಕಾನೂನು ನೋಟಿಸ್ ಸಲ್ಲಿಸಿದ್ದಾರೆ. ಅವರು ಸಮಂತಾ ಅವರ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದರು. ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ, ಸಮಂತಾ ಅಂತರ್ಜಾಲದಲ್ಲಿ ಕಿರುಕುಳಕ್ಕೆ ಗುರಿಯಾದಾಗ ಸುದ್ದಿಯಾಗಿತ್ತು.
ಎಲ್ಲಾ ನಕಾರಾತ್ಮಕತೆಯ ಹಿನ್ನೆಲೆಯಲ್ಲಿ, ಸಮಂತಾ ವೈಯಕ್ತಿಕ ನೋಟ್ ಒಂದನ್ನು ಬಿಡುಗಡೆ ಮಾಡಿದ್ದರು. ಇತರರು ತನ್ನಿಂದ ದೂರವಿರಲು ಕೇಳಿಕೊಂಡಿದ್ದರು.
ನಟಿ ನೆಗೆಟಿವಿಟಿ ತನ್ನನ್ನು ಮುರಿಯಲು ಅನುಮತಿಸುವುದಿಲ್ಲ. ಸ್ಪಷ್ಟವಾಗಿ ಆಕೆಯ ಮಾಜಿ ಪತಿ ನಾಗ ಚೈತನ್ಯ ಅಥವಾ ಅವರ ತಂದೆ ನಾಗಾರ್ಜುನ ಈ ಹೋರಾಟಗಳಲ್ಲಿ ನಟಿಯ ಪರವಾಗಿ ನಿಲ್ಲಲಿಲ್ಲ.
ಕೆಲಸದ ವಿಚಾರದಲ್ಲಿ ಸಮಂತಾ ಅವರು ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸುವ ಒಂದೆರಡು ಆಸಕ್ತಿದಾಯಕ ಪ್ರಾಜೆಕ್ಟ್ ಹೊಂದಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.