400 ಕೋಟಿ ಒಡೆಯ ದಳಪತಿ ವಿಜಯ್ ಮದುವೆಯಾಗಿದ್ದು ಸಾಧಾರಣ ಹೆಣ್ಣನ್ನು!
ದಕ್ಷಿಣ ಚಿತ್ರರಂಗದಲ್ಲಿ ದಳಪತಿ ವಿಜಯ್ (Thalapathy Vijay ) ಹೆಸರಲ್ಲಿ ಖ್ಯಾತರಾಗಿರುವ ಜೋಸೆಫ್ ವಿಜಯ್ ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು 22 ಜೂನ್ 1974 ರಂದು ಚೆನ್ನೈನಲ್ಲಿ ಜನಿಸಿದರು. ವರದಿಗಳ ಪ್ರಕಾರ, ಸೌತ್ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ರಾಜ ಎಂದು ಕರೆಯಲ್ಪಡುವ ವಿಜಯ್ ಅವರ ಆಸ್ತಿ ಸುಮಾರು 400 ಕೋಟಿ. ಅವರು ಚೆನ್ನೈನ ಐಷಾರಾಮಿ ಪ್ರದೇಶದಲ್ಲಿ ಬಂಗಲೆ ಹೊಂದಿದ್ದಾರೆ. ಅವರು ಯಾವುದೇ ಜನಪ್ರಿಯ ನಟಿ ಅಥವಾ ಯಾವುದೇ ಸೆಲೆಬ್ರಿಟಿಯನ್ನು ಮಾಡಿಲ್ಲ ಆದರೆ ತಮ್ಮದೇ ಅಭಿಮಾನಿಯನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ವಿಜಯ್ ಅವರ ಆಸ್ತಿ, ಕಾರುಗಳ ಕಲೆಕ್ಷನ್ ಹಾಗೂ ಪರ್ಸನಲ್ ಲೈಫ್ ಬಗ್ಗೆ ಮಾಹಿತಿ ಇಲ್ಲಿದೆ.
ವಿಜಯ್ ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಅವರು ಕಾರುಗಳ ಪ್ರೇಮಿ ಮತ್ತು ಅವರ ಗ್ಯಾರೇಜ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಾಡೆಲ್ ಕಾರುಗಳನ್ನು ನಿಲ್ಲಿಸಿರುವುದು ಇದೇ ಕಾರಣವಾಗಿದೆ. ಅವರು ವೋಲ್ವೋ XC90, ಮಿನಿ ಕೂಪರ್, BMW X6, ರೋಲ್ಸ್ ರಾಯ್ಸ್ ಘೋಸ್ಟ್, BMW 5, Audi A8L ಇತರ ಕಾರುಗಳನ್ನು ಹೊಂದಿದ್ದಾರೆ. ಈ ಕಾರುಗಳ ಬೆಲೆ ಸುಮಾರು 15 ಕೋಟಿ ರೂ.
1992 ರಲ್ಲಿ ವಿಜಯ್ ಅವರು ಚಲನಚಿತ್ರ ವೃತ್ತಿಜೀವನವನ್ನು (Career) ನಾಲಯ್ಯ ತೀರ್ಪು ಚಿತ್ರದ ಮೂಲಕ ಪ್ರಾರಂಭಿಸಿದರು. ಆದರೆ ಅವರು 1996 ರ ಚಲನಚಿತ್ರ ಪೂವೆ ಉನಕ್ಗದಿಂದ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ಈ ಚಿತ್ರದ ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.
ಕಳೆದ ವರ್ಷ, ಕೊರೋನಾ ಅವಧಿಯಲ್ಲಿ, ಚಿತ್ರಮಂದಿರಗಳಲ್ಲಿ ಚಿತ್ರಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆಯದ ಸಮಯದಲ್ಲಿ, ಅವರ ಮಾಸ್ಟರ್ ಚಲನಚಿತ್ರವು ಬಿಡುಗಡೆಯಾಯಿತು, ಆರಂಭದ ದಿನಗಳಲ್ಲಿಯೇ ಚಿತ್ರ 200 ಕೋಟಿ ಗಳಿಸಿತ್ತು.
ವಿಜಯ್ ತಮ್ಮ ಬೀಸ್ಟ್ (Beast) ಚಿತ್ರಕ್ಕಾಗಿ 100 ಕೋಟಿ ಚಾರ್ಜ್ ಮಾಡಿದ್ದರು . ಈ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ದಾಖಲೆ ಮುರಿದ್ದಾರೆ ದರ್ಬಾರ್ ಚಿತ್ರಕ್ಕಾಗಿ ರಜನಿಕಾಂತ್ ಸುಮಾರು 90 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ
ಅವರ ಮುಂಬರುವ ಚಿತ್ರ ವಾರಿಸು. ಈ ಚಿತ್ರದಲ್ಲಿ ಅವರೊಂದಿಗೆ ರಶ್ಮಿಕಾ ಮಂದಣ್ಣ (Rashmika Mandanna) ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಸುದ್ದಿ ಪ್ರಕಾರ, ಇದು ಜನವರಿ 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ವಿಜಯ್ ಅವರು ತಮ್ಮ ಪತ್ನಿ ಸಂಗೀತಾ ಸೂರಲಿಂಗಂ ಅವರನ್ನು ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾದರು. ವಿಜಯ್ ಮೊದಲ ನೋಟದಲ್ಲೇ ಸಂಗೀತಾರಿಗೆ ಸೋತರು. ಇದಾದ ನಂತರ ಇಬ್ಬರ ನಡುವೆ ಸರಣಿ ಮಾತುಕತೆ ಆರಂಭವಾಯಿತು.
ನಂತರ ಸಂಗೀತಾ ವಿಜಯ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವರ ಮನೆಗೆ ಹೋದರು. ವಿಜಯ್ ಅವರ ತಂದೆ ಸಹ ಸಂಗೀತಾ ಅವರನ್ನು ಮೆಚ್ಚಿದರು. ಈ ಜೋಡಿ 1999ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.