Rajinikanth ಮನೆಯಲ್ಲಿ ಸಂಭ್ರಮ: ಗಂಡು ಮಗುವಿನ ಜನ್ಮ ನೀಡಿದ ಸೌಂದರ್ಯ
ಗಂಡು ಮಗುವನ್ನು ಬರ ಮಾಡಿಕೊಂಡ ದಿನವೇ ಹೆಸರು ರಿವೀಲ್ ಮಾಡಿದ ಸೌಂದರ್ಯ ರಜನಿಕಾಂತ್....

ಕಾಲಿವುಡ್ ತಲೈವ ಸೂಪರ್ ಸ್ಟಾರ್ ರಜನಿಕಾಂತ್ ಎರಡನೇ ಪುತ್ರಿ ಸೌಂದರ್ಯ ಎರಡನೇ ಮಗುವನ್ನು ಬರ ಮಾಡಿಕೊಂಡಿರುವ ಸಂತೋಷದ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರೆಗ್ನೆನ್ಸಿ ಫೋಟೋ ಶೂಟ್ ಮತ್ತು ಮಗುವಿನ ಕೈ ಬೆರಳುಗಳ ಫೋಟೋ ಅಪ್ಲೋಡ್ ಮಾಡಿ ಮಗನಿಗೆ ಇಟ್ಟಿರುವ ಕ್ಯೂಟ್ ಹೆಸರನ್ನು ರಿವೀಲ್ ಮಾಡಿದ್ದಾರೆ. ವಿಶೇಷ ದಿನ ಮಗುವಿನ ಮುಖ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ.
'ನಾವು ಮಾಡಿರುವ ಪುಣ್ಯ ಮತ್ತು ಪೋಷಕರ ಆಶೀರ್ವಾದದಿಂದ ನನ್ನ ಪತಿ ವಿಶಾಗನ್, ಹಿರಿಯ ಪುತ್ರ ವೇದ್ ಮತ್ತು ನಾನು ಇಂದು ನಮ್ಮ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದೀವಿ.'
'ವೀರ್ ರಜನಿಕಾಂತ್ ವನಂಗಮುಡಿಗೆ 11/9/22 ಜನಿಸಿದ್ದಾನೆ. ನನ್ನನ್ನು ಚೆನ್ನಾಗಿ ನೋಡಿಕೊಂಡ ವೈದ್ಯರು ಸುಮನಾ ಮನೋಹರ್, ಡಾ. ಶ್ರೀವಿದ್ಯಾ ಶೇಷಾದ್ರಿಗೆ ಧನ್ಯವಾದಗಳು' ಎಂದು ಸೌಂದರ್ಯ ಟ್ವೀಟ್ ಮಾಡಿದ್ದಾರೆ.
ಮೊದಲ ಫೋಟೋದಲ್ಲಿ ಮಗುವಿನ ಬೆರಳುಗಳನ್ನು ಹಿಡಿದಿಟ್ಟುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಎರಡನೇ ಫೋಟೋದಲ್ಲಿ ಫ್ಯಾಮಿಲಿ ಪ್ರೆಗ್ನೆನ್ಸಿ ಶೂಟ್ ಮೂರನೇ ಫೋಟೋದಲ್ಲಿ ಹಿರಿಯ ಮಗನ ಜೊತೆಗಿರುವುದು.
ಬ್ಲ್ಯಾಕ್ ಆಂಡ್ ವೈಟ್ ಪ್ರೆಗ್ನೆನ್ಸಿ ಶೂಟ್‌ನಲ್ಲಿ ಸೌಂದರ್ಯ ಬೇಬಿ ಬಂಪ್ ಲುಕ್ ಸೂಪರ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
2019ರಲ್ಲಿ ಸೌಂದರ್ಯ ಮತ್ತು ವಿಶಾಗನ್ ಅದ್ಧೂರಿಯಾಗಿ ಮದುವೆಯಾದ್ದರು. ಸೌಂದರ್ಯಗೆ ಇದು ಎರಡನೇ ಮದುವೆ ಆಗಿರುವ ಕಾರಣ ಆಪ್ತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
ಉದ್ಯಮಿ ಅಶ್ವಿನ್ ರಾಮ್‌ಕುಮಾರ್ ಜೊತೆ ಸೌಂದರ್ಯ ಮೊದಲ ಮದುವೆಯಾಗಿ ವೇದ್ ಎಂಬ ಮಗನಿದ್ದ. ವಿಚ್ಚೇದನ ಪಡೆದುಕೊಂಡ ನಂತರ ವೇದನನ್ನು ಸೌಂದರ್ಯ ಬಳಿ ಇಟ್ಟುಕೊಂಡರು.
ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಗ್ರಾಫಿಕ್ ಡಿಸೈನರ್ ಆಗಿ ಸೌಂದರ್ಯ ತಮಿಳು ಚಿತ್ರರಂಗದಲ್ಲಿ ಸಿನಿ ಜರ್ನಿ ಆರಂಭಿಸಿದ್ದರು. ಬಾಬಾ, ಮಜಾ, ಶಿವಾಜೀ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸೌಂದರ್ಯ ಕೆಲಸ ಮಾಡಿದ್ದಾರೆ.
Kochadaiiya ಸಿನಿಮಾವನ್ನು ಸೌಂದರ್ಯ ನಿರ್ದೇಶನ ಮಾಡಿದ್ದಾರೆ, ತಂದೆ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡರು. ಆ ನಂತರ Ocher ಪಿಕ್ಚರ್ ಪ್ರೋಡಕ್ಷನ್ಸ್ ಮೂಲಕ ಸಿನಿಮಾ ಸಂಸ್ಥೆ ಕೂಡ ಆರಂಭಿಸಿದ್ದಾರೆ.
ಕಳೆದ ವರ್ಷ ವಿಡಿಯೋ ಸ್ಟ್ರೀಮಿಂಗ್ MX ಪ್ಲೇಯರ್ ಜೊತೆ ಕೈ ಜೋಡಿಸಿ ತಮಿಳು ಓರಿಜಿನಲ್ ವೆಬ್ ಸೀರಿಸ್‌ನ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಒಟ್ಟಿನಲ್ಲ ಚಿತ್ರರಂಗದಲ್ಲಿ ಸೌಂದರ್ಯ ಸಕ್ರೀಯರಾಗಿದ್ದಾರೆ.