ಸೋನು ಸೂದ್ - ತಾಪ್ಸಿ ಪನ್ನು: 2020 ರ ಸೋಷಿಯಲ್ ಮೀಡಿಯಾ ಸೂಪರ್ ಹೀರೋಗಳು!
ಕೊರೋನಾ ಕಾರಣದಿಂದ 2020ರ ವರ್ಷ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ಪರಿಣಾಮ ಬೀರಿದೆ. ಹಲವು ವಿವಾದಗಳ ಜೊತೆ ಅನೇಕ ಬೆಳವಣಿಗೆಗಳನ್ನು ಕಂಡಿದ್ದೇವೆ. ಹಾಗೇ ಸೋಶಿಯಲ್ ಮೀಡಿಯಾದ ವೇದಿಕೆಗಳಲ್ಲಿ ಕೆಲವು ಚರ್ಚೆಗಳು ತೀವ್ರವಾಗಿದನ್ನು ನೋಡಿದ್ದೇವೆ. ಈ ಸಂಧರ್ಭದಲ್ಲಿ 2020ರ ಸೋಷಿಯಲ್ ಮೀಡಿಯಾದ ಸೂಪರ್ ಹೀರೋಗಳು ಯಾರಾರು ನೋಡೋಣ.

2020ರಲ್ಲಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಬೇರೆ ಬೇರೆ ಕಾರಣಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ.

ಸೋನು ಸೂದ್:
ರೀಲ್-ಲೈಫ್ ಖಳನಾಯಕ ಬಾಲಿವುಡ್ ನಟ ಸೋನು ಸೂದ್ ನಿಜ ಜೀವನದ ಸೂಪರ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಲಾಕ್‌ಡೌನ್ ವೇಳೆ ವಿವಿಧೆಡೆ ಸಿಲುಕಿಕೊಂಡಿದ್ದ ಲಕ್ಷಾಂತರ ವಲಸಿಗರನ್ನು ತಮ್ಮ ಊರು ತಲುಪಲು ಸಹಕರಿಸಿದ ಕೀರ್ತಿ ಸೋನುಗೆ ಸೇರುತ್ತದೆ. ಅದರ ಜೊತೆ ಅನೇಕ ಜನರ ಆಸ್ಪತ್ರೆ ಬಿಲ್‌ಗಳು, ಶಾಲೆ / ಕಾಲೇಜು ಶುಲ್ಕಗಳು ಮತ್ತು ಇನ್ನೂ ಅನೇಕರೀ ತಿಯ ಸಹಾಯ ಮಾಡಿರುವ ಸೋನು ಈ ಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿದ್ದಾರೆ.
ಕಾರ್ತಿಕ್ ಆರ್ಯನ್:
ಲವ್ ಆಜ್ ಕಲ್ ನಟ ಕಾರ್ತಿಕ್ ಆರ್ಯನ್ ಅವರು ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಕೋಕಿ ಪೂಚೆಗಾ' ದಿಂದ ಆನ್‌ಲೈನ್ ಟಾಕ್ ಶೋಗಳನ್ನು ಆಯೋಜಿಸುತ್ತಿದ್ದರು. ಕೊರೋನಾ ವೈರಸ್ ಬಗ್ಗೆ ಜನರಿಗೆ ತಿಳಿಸಲು ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಬಳಸಿದರು.
ತಾಪ್ಸಿ ಪನ್ನು:
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಘಟನೆಯ ನಂತರ ತಾಪ್ಸೀ ರಿಯಾ ಜೊತೆ ನಿಂತಿದ್ದರು. 'ವೈಯಕ್ತಿಕವಾಗಿ ನನಗೆ ಸುಶಾಂತ್ ಅಥವಾ ರಿಯಾ ಇಬ್ಬರೂ ತಿಳಿದಿಲ್ಲ. ಆದರೆ, ತಪ್ಪಿತಸ್ಥರೆಂದು ನ್ಯಾಯಾಂಗದಲ್ಲಿ ಸಾಬೀತು ಆಗುವವರೆಗೆ ಯಾರನ್ನೂ ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ನ್ಯಾಯಾಂಗವನ್ನು ಗೌರವಿಸಬೇಕು, ಅದನ್ನು ಅರ್ಥಮಾಡಿಕೊಳ್ಳಲು ಮೊದಲು ಮನುಷ್ಯನಾಗಿರಬೇಕು,' ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದರು.
ದಿಲ್ಜಿತ್ ದೋಸಾಂಜ್!
ಕೇಂದ್ರ ಸರಕಾರ ಕೃಷಿ ಕಾಯ್ದೆ ವಿರುದ್ಧ ತೈರು ಪ್ರತಿಭಟಿಸುತ್ತಿದ್ದಾರೆ. ಈ ಸಮಯದಲ್ಲಿ ಒಬ್ಬ ವಯಸ್ಸಾದ ಮಹಿಳೆಯನ್ನು ಬೇರೊಬ್ಬರು ಎಂದು ತಪ್ಪಾಗಿ ಆರೋಪಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 100 ರೂ ತೆಗೆದುಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದ್ದರು ಕಂಗನಾ ರಣಾವತ್. ನಟಿಯನ್ನು ಖಂಡಿಸಿದ್ದರು ದಿಲ್ಜಿತ್. ನಂತರ ಕಂಗನಾ ಅವರ ಪೋಸ್ಟ್ ಹಲವಾರು ಟೀಕೆಗೆ ಗುರಿಯಾಗಿ ಡಿಲಿಟ್ ಮಾಡಿದರು. ಮಹಿಳೆಯನ್ನು ಆರೋಪಿಸಿದ್ದಕ್ಕಾಗಿ ದಿಲ್ಜಿತ್ ಕಂಗನಾಳನ್ನು ವಿರೋಧಿಸಿದ ಕಾರಣ ಅಸಹ್ಯ ಟ್ವಿಟರ್ ಹೋರಾಟಕ್ಕೆ ಸಿಲುಕಿದರು. ಆದರೆ, ಈ ಘಟನೆಗೆ ಬಾಲಿವುಡ್ ಉದ್ಯಮದ ಅನೇಕ ಜನರು ಬೆಂಬಲ ನೀಡಿದ್ದರಿಂದ ಡಿಲ್ಜಿತ್ ಆ ಹೋರಾಟವನ್ನು ಗೆದ್ದರು.
ಸ್ವರ ಭಾಸ್ಕರ್:
ನಟ ಸುಶಾಂತ್ ಸಿಂಗ್ ರಜಪೂತ್ ಹಠಾತ್ ನಿಧನದ ನಂತರ, ಎಲ್ಲರೂ ಗೆಳತಿ ರಿಯಾಳನ್ನು ಆರೋಪಿಸುತ್ತಿದ್ದರು. ಆ ಸಮಯದಲ್ಲಿ ಸ್ವರಾ ಅವರ ಪರವಾಗಿ ನಿಂತಿದ್ದರು. ಅವರ ಮೇಲಿನ ಮಾಧ್ಯಮಗಳ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು.