ಮಗ ಹುಟ್ಟಿದ ಮೇಲೆ 32 ಕೆಜಿ ತೂಕ ಹೆಚ್ಚಾಗಿದ್ದ ಸೋನಂ ಕಪೂರ್! ಇಳಿಸಿದ್ದೆಷ್ಟು?
ಸೋನಂ ಕಪೂರ್ ಇತ್ತೀಚೆಗೆ ತನ್ನ ಮಗ ವಾಯುವಿಗೆ ಜನ್ಮ ನೀಡಿದ ನಂತರ 32 ಕಿಲೋಗಳು ಹೆಚ್ಚಿ, ಆಘಾತಕ್ಕೆ ಒಳಗಾಗಿದ್ದರಂತೆ. ಸಧ್ಯ ನಟಿ ತೂಕ ಇಳಿಸುತ್ತಿದ್ದು, ಒಂದೂವರೆ ವರ್ಷದಲ್ಲಿ ಎಷ್ಟು ಕೆಜಿ ಇಳಿಸಿದ್ದಾರೆ ಅಂದ್ರೆ..
ಸಾವರಿಯಾ ನಟಿ ಸೋನಂ ಕಪೂರ್ ಹೆರಿಗೆಯ ನಂತರ 32 ಕೆಜಿ ತೂಕ ಹೆಚ್ಚಳವಾಗಿದ್ದರಂತೆ. ಇದರಿಂದ ಆಘಾತಕ್ಕೊಳಗಾಗಿದ್ದಾಗಿ ನಟಿ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ದಪ್ಪಗಾದರೂ ಹೆರಿಗೆಯ ನಂತರ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ನಂಬಿದ್ದೆ. ಆದರೆ, ಮಗ ಹುಟ್ಟಿದ ಬಳಿಕ ತೂಕ ಏರುತ್ತಲೇ ಹೋಗಿ 32 ಕೆಜಿ ಏರಿದ್ದರು ಸೋನಂ ಕಪೂರ್.
ನಟನೆಯ ಪ್ರಯತ್ನಗಳ ಹೊರತಾಗಿ, ಸೋನಮ್ ಉದ್ಯಮದಲ್ಲಿ ಫ್ಯಾಶನ್ ಐಕಾನ್ ಆಗಿ ಹೆಸರು ಮಾಡಿದ್ದಾರೆ. 2018ರಲ್ಲಿ ಆನಂದ್ ಅಹುಜಾ ಜೊತೆ ವಿವಾಹವಾಗಿದ್ದಾರೆ.
2022ರಲ್ಲಿ ಮಗ ವಾಯುವನ್ನು ಸ್ವಾಗತಿಸಿದ ನಟಿ, ಅಂದಿನಿಂದ ತನಗೆ ತೆಗೆದುಕೊಳ್ಳುವ ಆಹಾರ, ವರ್ಕೌಟ್ ಬಗ್ಗೆ ಹೆಚ್ಚು ಗಮನ ಹರಿಸಲಾಗಿಲ್ಲ ಎಂದಿದ್ದಾರೆ.
ಆದರೆ, ಕಳೆದೊಂದುೂವರೆ ವರ್ಷದಿಂದ ತೂಕ ಇಳಿಸುವ ಹಟಕ್ಕೆ ಬಿದ್ದು, ಇದೀಗ ತಾನು 20 ಕೆಜಿ ತೂಕ ಇಳಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ನಟಿ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ 6 ಕೆಜಿ ಇಳಿಸಬೇಕಿದೆ. ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನಿಧಾನವಾಗಿ ಪ್ರಗತಿ ನಡೆಯುತ್ತಿದೆ, ನೀವು ನಿಧಾನವಾಗಿರಬೇಕು ಏಕೆಂದರೆ ನೀವು ಹೊಸದಕ್ಕೆ ಹೊಂದಿಕೊಳ್ಳಬೇಕು ಮತ್ತು ನಿಮ್ಮ ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ ಎಂದು ನಟಿ ಹೇಳಿದ್ದಾರೆ.
ಮಗು ಬಳಿಕ ನಿಮ್ಮೊಂದಿಗಿನ ನಿಮ್ಮ ಸಂಬಂಧವು ಬದಲಾಗುತ್ತದೆ, ನಿಮ್ಮ ಪೋಷಕರು ಬದಲಾಗುತ್ತಾರೆ, ನಿಮ್ಮ ಪತಿಯೊಂದಿಗೆ (ಬದಲಾವಣೆ), ಎಲ್ಲವೂ ಬದಲಾಗುತ್ತದೆ. ನಿಮ್ಮ ದೇಹದ ಬಗ್ಗೆ ನೀವು ಎಂದಿಗೂ ಹಿಂದಿನ ರೀತಿ ಭಾವಿಸಲು ಸಾಧ್ಯವಿಲ್ಲ. ನಿಮ್ಮ ದೇಹವು ನಿಮ್ಮ ಜೀವನವು ಹೊಸ ಜೀವನ ಮತ್ತು ಅದಕ್ಕಾಗಿ ಬದಲಾವಣೆಯಾಗಿರುವುದರ ರೂಪಕವಾಗಿದೆ ಎಂದು ಸೋನಂ ತತ್ವಜ್ಞಾನಿಯಂತೆ ಹೇಳಿದ್ದಾರೆ.
ನಾನು ಏನೇನಾಗಿರುವೆನೋ ಅವೆಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂದಿರುವ ನಟಿ, ನನ್ನ ಈ ಆವೃತ್ತಿಯನ್ನು ನಾನು ಒಪ್ಪಿಕೊಳ್ಳಬೇಕು. ನಾನು 16 ಅನ್ನು ನೋಡಿದ ರೀತಿಯಲ್ಲಿ 25ನ್ನು ಅಥವಾ 38ನ್ನು ನೋಡಲಾಗುವುದಿಲ್ಲ. ವಯಸ್ಸನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.
ಈ ದೇಹವು ಈ ಮಗುವನ್ನು ಮಾಡಿದೆ ಮತ್ತು ಅದು ಅದ್ಭುತವಾಗಿದೆ ಮತ್ತು ನೀವು ಅದನ್ನು ಸ್ವೀಕರಿಸಬೇಕು. ನೀವು ಅದನ್ನು ಸ್ವೀಕರಿಸಲು ನಿಮ್ಮ ಸಮಯವನ್ನು ತೆಗೆದುಕೊಳ್ಳಬೇಕು.
ಆ ಸ್ವೀಕಾರವು ಬಂದ ನಂತರ ನೀವು ಯಾವಾಗಲೂ ದೇಹಕ್ಕೆ ತಕ್ಕಂತೆ ಡ್ರೆಸ್ ಮಾಡಲು ಪ್ರಾರಂಭಿಸಿ ಎಂದು ತಾಯಂದಿರಿಗೆ ಸಲಹೆ ನೀಡಿದ್ದಾರೆ ನಟಿ.