- Home
- Entertainment
- Cine World
- DC VS KKR: ಆಪಲ್ ಸಿಇಒ ಟಿಮ್ ಕುಕ್ ಜೊತೆ IPL ಪಂದ್ಯ ವೀಕ್ಷಿಸಿದ ಸೋನಂ ಕಪೂರ್, ಹಿಗ್ಗಾಮುಗ್ಗಾ ಟ್ರೋಲ್
DC VS KKR: ಆಪಲ್ ಸಿಇಒ ಟಿಮ್ ಕುಕ್ ಜೊತೆ IPL ಪಂದ್ಯ ವೀಕ್ಷಿಸಿದ ಸೋನಂ ಕಪೂರ್, ಹಿಗ್ಗಾಮುಗ್ಗಾ ಟ್ರೋಲ್
DC VS KKR: ಆಪಲ್ ಸಿಇಒ ಟಿಮ್ ಕುಕ್ ಜೊತೆ IPL ಪಂದ್ಯ ವೀಕ್ಷಿಸಿದ ಸೋನಂ ಕಪೂರ್ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದಾರೆ.

ಟೆಕ್ ದೈತ್ಯ ಆಪಲ್ ಸಿಇಒ ಟಿಮ್ ಕುಕ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಕಾರ್ಯಾರಂಭಗೊಂಡಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆ್ಯಪಲ್ ಸ್ಟೋರ್ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕಾಗಿ ಆಪಲ್ ಸಿಇಒ ಟಿಮ್ ಕುಕ್ ಭಾರತಕ್ಕೆ ಆಗಮಿಸಿದ್ದು ಉತ್ತಮ ಸಮಯ ಕಳೆಯುತ್ತಿದ್ದಾರೆ.
ಭಾರತದ ಅನೇಕ ಗಣ್ಯರನ್ನು ಟಿಮ್ ಕುಕ್ ಭೇಟಿ ಮಾಡುತ್ತಿದ್ದಾರೆ. ಖ್ಯಾತ ನಟಿ ಮಾಧುರಿ ದೀಕ್ಷಿತ್ ಭೇಟಿಯಾಗಿ ಮುಂಬೈ ಸ್ಪೆಷಲ್ ವಡಾ ವಾಸ್ ಸವಿದಿದ್ದರು. ಬಾಲಿವುಡ್‌ನ ಅನೇಕ ಗಣ್ಯರನ್ನು ಟಿಮ್ ಭೇಟಿಯಾಗಿದ್ದಾರೆ.
ನಟಿ ಸೋನಂ ಕಪೂರ್, ನೇಹಾ ದೂಪಿಯಾ, ಎಆರ್ ರಹಮಾನ್, ಮೌನಿ ರಾಯ್ ದಂಪತಿ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರ ಜೊತೆ ಟಿಮ್ ಕುಕ್ ಮಾತುಕತೆ ನಡೆಸಿದ್ದಾರೆ. ಎಲ್ಲರನ್ನೂ ಭೇಟಿಯಾಗಿರುವ ಫೋಟೋಗಳು ವೈರಲ್ ಆಗಿವೆ.
ಇದೀಗ ಟಿಮ್ ಕುಕ್ ಸೋನಂ ಕಪೂರ್ ದಂಪತಿ DC VS KKR ವೀಕ್ಷಿಸಿದ್ದಾರೆ. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. 'ಟಿಮ್ ಕುಕ್ ಅವರ ವೃತ್ತಿಜೀವನದ ಅತ್ಯಂತ ಕೆಟ್ಟ ಕ್ಷಣವೆಂದರೆ ಸೋನಮ್ ಕಪೂರ್ ಪಕ್ಕದಲ್ಲಿ ನಿಂತು ಐಪಿಎಲ್ ಪಂದ್ಯವನ್ನು ನೋಡುವುದು' ಎಂದು ಹೇಳುತ್ತಿದ್ದಾರೆ. ಫ್ಲಾಪ್ ನಟಿ ಜೊತೆ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.
ಟಿಮ್ ಕುಕ್ ಭಾರತಕ್ಕೆ ಬಂದು ಐಪಿಎಲ್ ಪಂದ್ಯ ವೀಕ್ಷಣೆ ಮಾಡುತ್ತಿರುವುದನ್ನು ಅನೇಕರು ಹೊಗಳುತ್ತಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟಿಸಿ ಭಾರತವನ್ನು ಆ್ಯಪಲ್ ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದೆ. ವಿದೇಶಕ್ಕೆ ಗರಿಷ್ಠ ಫೋನ್ ರಫ್ತುವಿನಲ್ಲಿ ಆ್ಯಪಲ್ ಐಫೋನ್ ಮೊದಲ ಸ್ಥಾನದಲ್ಲಿದೆ. ಇನ್ನು ಭಾರತದಲ್ಲಿ ಐಫೋನ್ ಬಳಕೆಯೂ ಹೆಚ್ಚಾಗಿದೆ. ಹೀಗಾಗಿ ಆ್ಯಪಲ್ ಕಂಪನಿಗೆ ಇದೀಗ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಮುಂಬೈ ಉಪನಗರದ ಜಿಯೋ ವಲ್ಡ್‌ರ್ ಡ್ರೈವ್ ಮಾಲ್‌ನಲ್ಲಿ ಆ್ಯಪಲ್ ಮಳಿಗೆ ತರೆಯಲಾಗಿದ್ದು, ಇದಕ್ಕೆ ‘ಆ್ಯಪಲ್ ಬಿಕೆಸಿ’ ಎಂದು ಹೆಸರಿಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.