ಅಕ್ಕ ಸೋನಂ ಮತ್ತು ಭಾವ ಆನಂದ್‌ಗೆ ಪ್ರೈವಸಿ ಕೊಡಿ ಎಂದ ಸಹೋದರ ಹರ್ಷ ವರ್ಧನ್ ಕಪೂರ್!
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸೋನಂ ಕಪೂರ್. ಅಕ್ಕ ಭಾವಗೆ ಪ್ರೈವಸಿ ಕೊಡಿ ಎಂದು ಸಹೋದರ ಹರ್ಷ.
ಬಾಲಿವುಡ್ ಸ್ಟೈಲಿಷ್ ಐಕಾನ್ ಸೋನಂ ಕಪೂರ್ (Sonam Kpoor) ಮತ್ತು ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಆಗಸ್ಟ್ ತಿಂಗಳಿನಲ್ಲಿ ಕಂದಮ್ಮನನ್ನು ಬರ ಮಾಡಿಕೊಳ್ಳುತ್ತಾರೆ.
ಸೋನಂ ಸಹೋದರ ಹರ್ಷ ವರ್ಧನ್ ಕಪೂರ್ (Harsha Varrdhan Kapoor) ಈವರೆಗೂ ಮಾಮು ಆಗುತ್ತಿರುವುದಕ್ಕೆ ಎಷ್ಟು ಎಕ್ಸೈಟ್ ಆಗಿದ್ದಾರೆ ಎಂದು ಹಂಚಿಕೊಂಡಿರಲಿಲ್ಲ.
ಎಕ್ಸೈಟ್‌ಮೆಂಟ್‌ಗೂ ಹೆಚ್ಚಾಗಿ ಸೋನಂ ಮತ್ತು ಆನಂದ್‌ಗೆ ಪ್ರೈವಸಿ ಕೊಡಿ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹೇಳಿಕೆ ವೈರಲ್ ಆಗುತ್ತಿದೆ.
'ಆಕೆ ಪ್ರೈವಸಿಯನ್ನು ಗೌರವಿಸಬೇಕು. ಅವರಿಬ್ಬರು ತುಂಬಾನೇ ಇಷ್ಟ ಪಡುತ್ತಿದ್ದಾರೆ ಅವರು ಇಷ್ಟ ಪಟ್ಟು ಒಂದು ಜೀವ ಹುಟ್ಟಿಸುತ್ತಿದ್ದಾರೆ' ಎಂದು ಹರ್ಷ ಹೇಳಿದ್ದಾರೆ.
'ಸೋಷಿಯಲ್ ಮೀಡಿಯಾದ ಅಥವಾ ಪ್ಯಾಪರಾಜಿಗಳ (Paparazzi) ಎದುರು ಬಂದು ನಾವು ಏನು ಸಾಧನೆ ಮಾಡಬೇಕು? ಜನರಿಗೆ ಏನೆಂದು ಪ್ರೂವ್ ಮಾಡಬೇಕು?'
'ಅವರು ಅವರಿಗೆಂದು ತೆಗೆದುಕೊಂಡಿರುವ ನಿರ್ಧಾರವಿದು ಹೀಗಾಗಿ ನಾವು ಆ ಪ್ರೈವಸಿನ ಗೌರವಿಸಬೇಕು ಅವರಿಗೆ ಆದಷ್ಟು ಕೈಂಡ್ ಆಗಿರೋಣ' ಎಂದು ಹರ್ಷ ಹೇಳಿದ್ದಾರೆ.