Karwa Chauth: ಹಬ್ಬದ ದಿನ ಮೂರೂವರೆ ಲಕ್ಷದ ಮಾಂಗಲ್ಯ ಧರಿಸಿದ ನಟಿಯರು
- ಕರ್ವಾ ಚೌತ್(Karwa Chauth) ದಿನ ದುಬಾರಿ ಮಾಂಗಲ್ಯ ಧರಿಸಿದ ನಟಿಯರು
- ಸ್ಟೈಲಿಷ್ ಮಂಗಳಸೂತ್ರ(Mangalsutra) ಭಾರೀ ಲಕ್ಷುರಿ

ಕರ್ವಾಚೌತ್(Karwa Chauth) ಬಾಲಿವುಡ್(Bollywood) ಮಹಿಳೆಯರಿಗೆ ಫ್ಯಾಶನ್(Fashion) ಫೆಸ್ಟಿವಲ್ ಆಗಿತ್ತು. ಹಬ್ಬದ ಸಂಭ್ರಮದ ಜೊತೆ ಸಂಪ್ರದಾಯಿಕ ಹಾಗೂ ಮಾಡರ್ನ್ ಟಚ್ ಕೊಟ್ಟಿರೋ ನಟಿಯರು(Actress) ಹಬ್ಬವನ್ನು ಎಂಜಾಯ್ ಮಾಡಿದ್ದಾರೆ. ಕರ್ವಾ ಚೌತ್‌ಗೆ ಮಂಗಳಸೂತ್ರಕ್ಕಿಂತ (ಕಪ್ಪು ಮಣಿಗಳನ್ನು ಹೊಂದಿರುವ ನೆಕ್ಲೇಸ್ ಅಥವಾ ಕಪ್ಪು ದಾರ ಅಥವಾ ಚಿನ್ನದ ಸರ, ಮಾಂಗಲ್ಯ, ತಾಳಿ, ಕರಿಮಣಿ ಸರ) ಗಿಂತ ಉತ್ತಮವಾದ ಆಭರಣ ಬೇರೆ ಇಲ್ಲ.

ಇಬ್ಬರು ಬಾಲಿವುಡ್ ಸುಂದರಿಯರು, ಸೋನಾಲಿ ಬೇಂದ್ರೆ ಮತ್ತು ಯಾಮಿ ಗೌತಮ್ ಕರ್ವಾ ಚೌತ್ ಹಬ್ಬಕ್ಕಾಗಿ ಒಂದೇ ಮಂಗಳಸೂತ್ರವನ್ನು ಧರಿಸಿದ್ದರು. ಅದರ ವಿಶೇಷತೆ ಏನು ? ಅಷ್ಟು ಸ್ಟೈಲಿಷ್ ಆಗಿರೋದೇನು ?
ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ತನ್ನ 19 ವರ್ಷದ ಮದುವೆಯ ಲೆಹೆಂಗಾದೊಂದಿಗೆ ಸೋನಾಲಿ ಹಬ್ಬ ಆಚರಿಸಿದರೆ, ಯಾಮಿ ಗೌತಮ್ ತನ್ನ ಕೆಂಪು ಮತ್ತು ಚಿನ್ನದ ರೇಷ್ಮೆ ಸೀರೆಯನ್ನು ಧರಿಸಿದ್ದರು.
ಇಬ್ಬರೂ ಬಲ್ಗೇರಿಯ ಮಂಗಳಸೂತ್ರ ಸರವನ್ನು ಫೋಟೋಗಳಲ್ಲಿ ತೋರಿಸಿದ್ದಾರೆ. 18 ಕ್ಯಾರೆಟ್ ಹಳದಿ ಚಿನ್ನದಲ್ಲಿ ಹೊಂದಿಸಲಾದ ಸರವನ್ನು ದುಂಡಗಿನ ಕಪ್ಪು ಓನಿಕ್ಸ್ ಇನ್ಸರ್ಟ್‌ಗಳು ಮತ್ತು ಪೇವ್ ವಜ್ರಗಳಿಂದ ಅಲಂಕರಿಸಲಾಗಿದೆ.
ಬಲ್ಗರಿ ಮಂಗಳಸೂತ್ರವು ಸಾಂಪ್ರದಾಯಿಕ ಮತ್ತು ಪವಿತ್ರವಾದ ಆಭರಣವನ್ನು ಸಮಕಾಲೀನದ ಸೊಗಸಾದ ಆಭರಣವಾಗಿ ಕಂಡುಬಂದಿದೆ. ಆಧುನಿಕ ವಧುವಿನ ಕಾಸ್ಮೋಪಾಲಿಟನ್ ಆಕಾಂಕ್ಷೆಗಳನ್ನು ಪ್ರತಿನಿಧಿಸುವಾಗ ಈ ಸರ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಇದರ ಬೆಲೆ 3.49 ಲಕ್ಷ ರೂ.
Bvlgari ತನ್ನ ಮೊದಲ ವಿಶೇಷ ಭಾರತೀಯ ಆಭರಣವಾದ ಚಿನ್ನದ ಮಾಂಗಲ್ಯವನ್ನು ಲಾಂಚ್ ಮಾಡಿತ್ತು. ಪ್ರಿಯಾಂಕಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. 18-ಕ್ಯಾರೆಟ್ ಐಷಾರಾಮಿ ಮಾಂಗಲ್ಯ ಸರದ ಒಂದು ಲುಕ್ ತೋರಿಸಿದ್ದಾರೆ.
ನಟಿ ಪ್ರಿಯಾಂಕ ಈ ಮಾಂಗಲ್ಯವನ್ನು ಇದನ್ನು ವೋಗ್ ಇಂಡಿಯಾದ ಇತ್ತೀಚಿನ ಕವರ್ ಪೇಜ್‌ನಲ್ಲಿ ಧರಿಸಿದ್ದರು. 'Bvlgari Bvlgari ಹಾರ' ಎಂದು ಕರೆಯಲ್ಪಡುವ ಮಾಂಗಲ್ಯ ಸರದ ಮಧ್ಯದಲ್ಲಿ ಸಣ್ಣ ಕಪ್ಪು ಓನಿಕ್ಸ್ ಕಲ್ಲುಗಳನ್ನು ಹೊಂದಿದ್ದು ವಜ್ರವನ್ನು ಹೊಂದಿದೆ.
ಪ್ರಾಚೀನ ರೋಮನ್ ನಾಣ್ಯಗಳ ಬಾಗಿದ ಶಾಸನಗಳನ್ನು ನೆನಪಿಸಿಕೊಳ್ಳುತ್ತಾ, ಡಬಲ್ ಲೋಗೋ ಮೊದಲ ಬಾರಿಗೆ ಲಾಂಛನವು ಪ್ರಮುಖ ಆಭರಣ ವಿನ್ಯಾಸದ ಐಕಾನ್ ಆಗಿದ್ದು ಬಿವಿಲ್ಗರಿಯ ಟೈಮ್ಲೆಸ್ ಟ್ರೇಡ್ ಮಾರ್ಕ್ ಆಗಿ ಉಳಿದಿದೆ. ಇದು ಇಂದಿಗೂ ಸೃಜನಶೀಲತೆ ಎಂದಿದೆ
ಇಟಾಲಿಯನ್ ಬ್ರ್ಯಾಂಡ್ ಬ್ಲಗರಿ ಪ್ರಿಯಾಂಕಾ ಚೋಪ್ರಾ ಅವರನ್ನು ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತು. ಪ್ರಿಯಾಂಕಾ ರೋಮನ್ ಹೈ ಜ್ಯುವೆಲ್ಲರಿ ಹೌಸ್ ಅನ್ನು ಬೆಂಬಲಿಸುತ್ತಾರೆ. ಅದನ್ನು ವಿಶ್ವಾದ್ಯಂತ ಪ್ರತಿಬಿಂಬಿಸುತ್ತಾರೆ ಎಂದು ಕಂಪನಿ ಬಹಿರಂಗಪಡಿಸಿದೆ