ಅಮ್ಮನ ಪ್ರೀತಿ, ಕೈತುತ್ತಿಗೆ ಬೆಲೆ ಕಟ್ಟೋಕಾಗುತ್ತಾ? ಸೋನಾಕ್ಷಿ ಅಮ್ಮನೂ ನಮ್ಮ ನಿಮ್ಮ ಅಮ್ಮನಂತೆ ನೋಡಿ
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾಗಿ 15 ದಿನಗಳು ಕಳೆದಿವೆ. ಮದುವೆಯಲ್ಲಿ ಅಮ್ಮನಿಗೆ ಕೊಟ್ಟ ಮಾತಿನ ಬಗ್ಗೆ ಸೋನಾಕ್ಷಿ ಸಿನ್ಹಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಇಡೀ ಮದುವೆ ಸಂಭ್ರಮದಿಂದ ನಡೆಯುತ್ತದೆ. ಕೊನೆಗೆ ವಧು ಗಂಡನ ಮನೆಗೆ ಹೋಗಲೇಬೇಕು. ಈ ಸಂದರ್ಭದಲ್ಲಿ ಹೆತ್ತವರ ಸಂಕಟ ಎಲ್ಲರ ಕಣ್ಣಾಲಿಗಳನ್ನು ತುಂಬಿಸುತ್ತವೆ. ಸೋನಾಕ್ಷಿ ಸಿನ್ಹಾ ಬಿದಾಯಿ ಸಂದರ್ಭದ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ.
ಮದುವೆ ಬಳಿಕ ಬಾಂದ್ರಾದಲ್ಲಿರುವ ಪತಿ ಜಹೀರ್ ಇಕ್ಬಾಲ್ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್ ಆಗಿದ್ದಾರೆ. 15 ದಿನದ ಬಳಿಕ ಸೋನಾಕ್ಷಿ ಸಿನ್ಹಾಗೆ ಅಮ್ಮ ಮತ್ತು ಭಾನುವಾರ ತಾಯಿ ಮಾಡುತ್ತಿದ್ದ ಅಡುಗೆಯ ನೆನಪು ಆಗಿದೆ.
ಮದುವೆಯ ಸಮಯದಲ್ಲಿ ತಾಯಿ ತಮ್ಮನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ಘಟನೆ ಮತ್ತು ಆ ವೇಳೆ ಅಮ್ಮನನ್ನು ಸಂತೈಸಿದನ್ನು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ. ಸೋನಾಕ್ಷಿ ಪೋಸ್ಟ್‌ಗೆ ಅಭಿಮಾನಿಗಳು ಸಹ ಭಾವುಕರಾಗಿದ್ದಾರೆ.
ಸಂದರ್ಶನವೊಂದರಲ್ಲಿ ತಮಗೆ ಅಮ್ಮ ಮಾಡುವ ಸಿಂಧಿ ಕರ್ರಿ ಅಂದ್ರೆ ಇಷ್ಟು. ಪ್ರತಿ ಭಾನುವಾರ ಸಿಂಧಿ ಕರ್ರಿ ನಮ್ಮ ಮನೆಯಲ್ಲಿ ಸಿದ್ಧವಾಗುತ್ತೆ ಎಂದು ಹೇಳಿದ್ದರು. ಇಂದು ಭಾನುವಾರ ಆಗಿದ್ದು, ಸೋನಾಕ್ಷಿ ಸಿನ್ಹಾಗೆ ಅಮ್ಮ ಮಾಡುತ್ತಿದ್ದ ಅಡುಗೆಯ ನೆನಪು ಆಗಿದೆ.
ಮದುವೆ ಸಮಯದಲ್ಲಿ ನಾನು ಮನೆಯಿಂದ ಹೊರಡುವಾಗ ಅಮ್ಮ ನನ್ನನ್ನು ತಬ್ಬಿ ಅಳಲು ಪ್ರಾರಂಭಿಸಿದಾಗ, ಜುಹು ಮತ್ತು ಬಾಂದ್ರಾ ನಡುವಿನ ದಾರಿ ಕೇವಲ 25 ನಿಮಿಷ ಅಂತ ಹೇಳಿ ಬಂದಿದ್ದೆ. ಆದ್ರೆ ಇಂದು ನಾನೇ ಅಮ್ಮನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇವತ್ತು ಭಾನುವಾರ ಆಗಿದ್ದು, ಅಮ್ಮನ ಮನೆಯಲ್ಲಿ ಸಿಂಧಿ ಕರ್ರಿ ಮಾಡಿರಬಹುದು. ಶೀಘ್ರದಲ್ಲಿಯೇ ಭೇಟಿಯಾಗೋಣ ಎಂದು ಸೋನಾಕ್ಷಿ ಬರೆದುಕೊಂಡಿದ್ದಾರೆ.
ಇನ್ನು ಸೋನಾಕ್ಷಿ ಸಿನ್ಹಾ ಪೋಸ್ಟ್‌ಗೆ ಮಹಿಳಾ ಅಭಿಮಾನಿಗಳು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. ಮದುವೆಯಾದ ಬಳಿಕ ಹುಟ್ಟಿ ಬೆಳೆದ ಮನೆ ತವರು ಆಗುತ್ತದೆ. ಇದು ಎಲ್ಲಾ ಮಹಿಳೆಯರಿಗೆ ಆಗುವ ಅನುಭವ ಎಂದು ಹೇಳಿಕೊಂಡಿದ್ದಾರೆ.
ಸೋನಾಕ್ಷಿ ಸಿನ್ಹಾ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಪತಿ ಜಹೀರ್ ಇಕ್ಬಾಲ್, ಹಾರ್ಟ್ ಮತ್ತು ಸ್ಮೈಲಿ ಎಮೋಜಿ ಹಾಕಿದ್ದಾರೆ. ಜೂನ್ 23ರಂದು ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ನಡೆದಿತ್ತು.