ಬ್ಲ್ಯಾಕ್ ಡ್ರೆಸ್‌ನಲ್ಲಿ ಎದೆಸೀಳು ತೋರಿಸಿದ Mrunal Thakur: ಮೊದ್ಲು ಮೈ ತುಂಬಾ ಬಟ್ಟೆ ಹಾಕಮ್ಮಾ ಎಂದ ಫ್ಯಾನ್ಸ್!
ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಟಾಲಿವುಡ್ನಲ್ಲಿ ನಟಿ ಮೃಣಾಲ್ ಠಾಕೂರ್ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿರುವ ನಟಿ ಇದೀಗ ಬ್ಲ್ಯಾಕ್ ಡ್ರೆಸ್ ತೊಟ್ಟು ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ.
ನಟಿ ಮೃಣಾಲ್ ಠಾಕೂರ್ ಬ್ಲ್ಯಾಕ್ ಕಲರ್ ಸ್ಟೈಲಿಶ್ ಬಟ್ಟೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮೃಣಾಲ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದು, ನಾನಾ ಕಮೆಂಟ್ ಮಾಡುತ್ತಿದ್ದಾರೆ.
ಸೀತಾ ರಾಮಂ ಸಿನಿಮಾ ಮೂಲಕ ಫೇಮಸ್ ಆದ ನಟಿ ಮೃಣಾಲ್ ಠಾಕೂರ್ಗೆ ಅಪಾರ ಅಭಿಮಾನಿ ಬಳಗವಿದೆ. ನಟಿಯ ಡ್ರೆಸ್ ಕಂಡ ಫ್ಯಾನ್ಸ್, ಸೂಪರ್, ವಾವ್, ಸೆಕ್ಸಿ, ಮಾಡ್ರನ್, ಮೊದ್ಲು ಮೈ ತುಂಬಾ ಬಟ್ಟೆ ಹಾಕಮ್ಮಾ ಎಂದು ತರೇಹವಾರಿ ಕಮೆಂಟ್ ಮಾಡಿದ್ದಾರೆ.
ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಮೃಣಾಲ್ ಠಾಕೂರ್ ನಾನಿ ಸಿನಿಮಾ ಹಾಯ್ ನಾನಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಪೆಟ್ಲ ಸಿನಿಮಾದಲ್ಲಿ ನಾಯಕಿಯಾಗಿ ಫೈನಲ್ ಆಗಿದ್ದಾರೆ.
ಸಾಲು ಸಾಲು ಚಿತ್ರಗಳಿಂದ ಉತ್ತಮ ಫಾರ್ಮ್ ನಲ್ಲಿರುವ ಮೃಣಾಲ್ ಗೆ ಕ್ರೇಜಿ ಆಫರ್ ಬಂದಿದೆಯಂತೆ. ತಮಿಳು ಸಿನಿಮಾದಲ್ಲಿ ನಾಯಕ ಶಿವ ಕಾರ್ತಿಕೇಯನ್‌ಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡ್ತಿದೆ.
ವಿಜಯ್ ದೇವರಕೊಂಡ ಪರಶುರಾಮ್ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಮೊದಲು ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆಯನ್ನು ಆಯ್ಕೆ ಮಾಡಲಾಗಿತ್ತು. ಆದ್ರೆ ಪೂಜಾ ಹೆಗ್ಡೆ ಬದಲಿಗೆ ಮೃಣಾಲ್ ಠಾಕೂರ್ ಅವರಿಗೆ ಚಾನ್ಸ್ ನೀಡಿದ್ದಾರೆ.
ಸೀತಾ ರಾಮಂ ಚಿತ್ರದ ಮೂಲಕ ಒಳ್ಳೆ ಫಾರ್ಮ್‌ಗೆ ಬಂದ ಮೃಣಾಲ್ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಿಂದ ಸದ್ದು ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಸುಮಾರು 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ.