ಗಾಯಕ ಹೇಮಂತ್ ಪತ್ನಿಗೆ ಸೀಮಂತ ಸಂಭ್ರಮ; ಇಲ್ಲಿವೆ ಅಮೃತ ಘಳಿಗೆಯ ಫೋಟೋಗಳು
ಸ್ಯಾಂಡಲ್ ವುಡ್ ಖ್ಯಾತ ಗಾಯಕ ಹೇಮೆಂತ್ ಕುಮಾರ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಹೇಮಂತ್ ಪತ್ನಿ ಕೃತಿಕಾ ತುಂಬು ಗರ್ಭಿಣಿ. ತಾಯಿಯಾಗುತ್ತಿರುವ ಕೃತಿಕಾ ಅವರಿಗೆ ಇತ್ತೀಚಿಗಷ್ಟೆ ಸೀಮಂತ ಶಾಸ್ತ್ರ ಮಾಡಲಾಗಿದೆ. ಹೇಮಂತ್ ಮನೆಯಲ್ಲಿ ಸಂತಸ, ಸಡಗರ ಮನೆಮಾಡಿದೆ. ಪತ್ನಿ ಕೃತಿಕಾ ಅವರ ಸೀಮಂತ ಸಂಭ್ರಮವನ್ನು ಸರಳವಾಗಿ ಸಂಪ್ರದಾಯಬದ್ದವಾಗಿ ಮಾಡಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಮಾತ್ರ ಭಾಗಿಯಾಗಿದ್ದರು.
ಸ್ಯಾಂಡಲ್ ವುಡ್ ಖ್ಯಾತ ಗಾಯಕ ಹೇಮೆಂತ್ ಕುಮಾರ್ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಹೇಮಂತ್ ಪತ್ನಿ ಕೃತಿಕಾ ತುಂಬು ಗರ್ಭಿಣಿ. ತಾಯಿಯಾಗುತ್ತಿರುವ ಕೃತಿಕಾ ಅವರಿಗೆ ಇತ್ತೀಚಿಗಷ್ಟೆ ಸೀಮಂತ ಶಾಸ್ತ್ರ ಮಾಡಲಾಗಿದೆ. ಹೇಮಂತ್ ಮನೆಯಲ್ಲಿ ಸಂತಸ, ಸಡಗರ ಮನೆಮಾಡಿದೆ. ಪತ್ನಿ ಕೃತಿಕಾ ಅವರ ಸೀಮಂತ ಸಂಭ್ರಮವನ್ನು ಸರಳವಾಗಿ ಸಂಪ್ರದಾಯಬದ್ದವಾಗಿ ಮಾಡಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಮಾತ್ರ ಭಾಗಿಯಾಗಿದ್ದರು.
ತುಂಬು ಗರ್ಭಿಣಿ ಕೃತಿಕಾ ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕೃತಿಕಾ ಮತ್ತು ಹೇಮಂತ್ ಕುಟುಂಬದವರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಕೃತಿಕಾ ಸೀಮಂತ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
baby shower
ಪತ್ನಿ ಸೀಮಂತ ಸಂಭ್ರಮದ ಬಗ್ಗೆ ಹೇಮಂತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ನನ್ನ, ಕೃತಿಕಾ ಅವರ ಕನಸು ಸಾಕಾರಗೊಳ್ಳುವ ಶುಭ ಘಳಿಗೆ ಅತಿ ಶೀಘ್ರದಲ್ಲೇ ಕೂಡಿಬರಲಿದೆ. ನಾವಿಬ್ಬರೂ ತಂದೆ ತಾಯಿಯರಾಗಿ ಅತಿ ಶೀಘ್ರದಲ್ಲಿಯೇ ಭಡ್ತಿ ಪಡೆಯಲ್ಲಿದ್ದೇವೆ ಎಂದು ನಿಮಗೆಲ್ಲರಿಗೂ ತಿಳಿಸುವುದಕ್ಕೆ ನಮ್ಮ ಹರ್ಷದ ಕಟ್ಟೆ ಒಡೆದು ಸಂತೋಷದ ಕೋಡಿ ಬಿದ್ದಿದೆ' ಎಂದಿದ್ದಾರೆ.
'ನಿನ್ನೆ ನಮ್ಮ ಮನೆಯಲ್ಲಿ ಹಿರಿಯರ, ಆಪ್ತರ ಸಮ್ಮುಖದಲ್ಲಿ ಸರಳವಾಗಿ ಸೀಮಂತ ನಡೆದ ಅಮೃತ ಘಳಿಗೆ ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಗಾಯಕ ಹೇಮಂತ್ ಕಳೆದ ವರ್ಷ 2021, ಆಗಸ್ಟ್ 11ರಂದು ಕೃತಿಕಾ ಜೊತೆ ಹಸೆಮಣೆ ಏರಿದ್ದರು. ಬೆಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಕೃತಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೇಮಂತ್ -ಕೃತಿಕಾ ಮದುವೆ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಅನೇಕ ಗಣ್ಯರು ಭಾಗಿಯಾಗಿ ಶುಭಹಾರೈಸಿದರು.
ಗಾಯಕ ಹೇಮಂತ್ ಪತ್ನಿ ಕೃತಿಕಾ ವೃತ್ತಿಯಲ್ಲಿ ವೈದ್ಯರು. ಕೃತಿಕಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ Nephrologist ಆಗಿ ಕೆಲಸ ಮಾಡುತ್ತಿದ್ದಾರೆ.
ಗಾಯಕ ಹೇಮಂತ್ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಗಣೇಶ್, ಉಪೇಂದ್ರ, ದರ್ಶನ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ಸ್ಟಾರ್ ನಟರ ಚಿತ್ರಗಳಲ್ಲಿ ಹೇಮಂತ್ ಹಾಡಿದ್ದಾರೆ. ಹೇಮಂತ್ ವೃತ್ತಿ ಜೀವನದಲ್ಲಿ ಹಲವು ಹಿಟ್ ಗೀತೆಗಳಿವೆ. ವಿ ಮನೋಹರ್, ಗುರುಕಿರಣ್, ಮನೋಮೂರ್ತಿ, ಅರ್ಜುನ್ ಜನ್ಯ, ಶ್ರೀಧರ್ ವಿ ಸಂಭ್ರಮ್, ಹಂಸಲೇಖ, ಸಾಧು ಕೋಕಿಲಾ ಅಂತಹ ಸಂಗೀತ ನಿರ್ದೇಶಕರ ಹಾಡುಗಳಿಗೆ ಹೇಮಂತ್ ಧ್ವನಿಯಾಗಿದ್ದಾರೆ.
ನಾದಬ್ರಹ್ಮ ಹಂಸಲೇಖ ಅವರ ಬಳಿ ಸಹಾಯಕರಾಗಿ ಕೆಲಸ ಆರಂಭಿಸಿದ ಹೇಮಂತ್, 2000ನೇ ವರ್ಷದಲ್ಲಿ ಚಿತ್ರರಂಗಕ್ಕೆ ಅಧಿಕೃತವಾಗಿ ಪ್ರವೇಶಿಸಿದರು. ಉಪೇಂದ್ರ-ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಪ್ರೀತ್ಸೆ' ಸಿನಿಮಾದಲ್ಲಿ ಮೊದಲ ಸಲ ಹಾಡಿದರು. ಪ್ರೀತ್ಸೆ ಸಾಂಗ್ ದೊಡ್ಡ ಹಿಟ್ ಆಯಿತು. ಹೇಮಂತ್ ಗಾಯಕರಾಗಿ ಗುರುತಿಸಿಕೊಂಡರು.