ಶಾಕಿಂಗ್‌: ಇಲಿಯಾನಾ 6 ಪುರುಷರಿಂದ ಒಮ್ಮೆ ಕಿರುಕುಳಕ್ಕೊಳಗಾಗಿದ್ರಂತೆ!

First Published Jun 29, 2020, 6:17 PM IST

ನಟಿ ಇಲಿಯಾನಾ ಡಿ ಕ್ರೂಜ್ ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೇ ಜೊತೆಗೆ ತಮಿಳು ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ್ಯ ತೋರಿಸಿದ್ದಾರೆ. 2006ರ ತೆಲುಗು ಚಿತ್ರ ದೇವದಾಸು ಚಿತ್ರಕ್ಕಾಗಿ ಡಿ'ಕ್ರೂಜ್ ಅತ್ಯುತ್ತಮ ಮಹಿಳಾ ಚೊಚ್ಚಲ - ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಸಾರ್ವಜನಿಕ ವ್ಯಕ್ತಿಯಾಗಿರುವ ಮಾತ್ರಕ್ಕೆ ಯಾವುದೇ ಪುರುಷನಿಗೆ ಕೆಟ್ಟದಾಗಿ ವರ್ತಿಸುವ ಹಕ್ಕನ್ನು ನೀಡುವುದಿಲ್ಲ ಎಂದು ಟ್ವಿಟರ್ ಮೂಲಕ ಹೇಳಿದ್ದಾರೆ 33 ವರ್ಷದ ನಟಿ ಇಲಿಯಾನಾ ಡಿ ಕ್ರೂಜ್.  ಜೊತೆಗೆ ಇವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗೊಳಿಸಿದ್ದಾರೆ ಖುದ್ದು ಇಲಿಯಾನಾ.